ಬಸವಕಲ್ಯಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಂಘಟನಾ ನೃಜನ್ ಅಭಿಯಾನ ಕಾರ್ಯಕ್ರಮವನ್ನು ಎಐಸಿಸಿ ವೀಕ ರಾಜೇಶ್ ಲಿಲೋಥಿಯಾ ಉದ್ಘಾಟಿಸಿದರು. ಭೀಮರಾವ್ ಪಾಟೀಲ್, ನೀಲಕಂಠ ರಾಠೋಡ್, ಧನರಾಜ ತಾಳಂಪಳ್ಳಿ, ಮಿರ್ ಅಜರ್ಅಲಿ ನವರಂಗ್ ಇತರರಿದ್ದರು.
- ಎಐಸಿಸಿ ವೀಕ ರಾಜೇಶ್ ಸಲಹೆ
- ಕಲ್ಯಾಣದಲ್ಲಿ ಸಂಟನಾ ಸೃಜನ್ ಅಭಿಯಾನ
ಬಸವಕಲ್ಯಾಣ: ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬೂತ್ ಹಾಗೂ ಗ್ರಾಮ ಮಟ್ಟದಿಂದ ಮತ್ತಷ್ಟು ಬಲಪಡಿಸಬೇಕಿದ್ದು, ಕಾರ್ಯಕರ್ತರು ಮತ್ತು ಸ್ಥಳಿಯ ನಾಯಕರು ಒಗ್ಗಟ್ಟಾಗಿ ಶ್ರಮಿಸಿದರೆ ಮಾತ್ರ ಪಕ್ಷಕ್ಕೆ ಹೆಚ್ಚಿನ ಬಲ ತುಂಬಲು ಸಾಧ್ಯ ಎಂದು ಎಐಸಿಸಿ ವೀಕ ರಾಜೇಶ್ ಲಿಲೋಥಿಯಾ ಹೇಳಿದರು.
ನಗರದ ವರ್ಷಾ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಶುಕ್ರವಾರ ಆಯೋಜಿಸಿದ್ದ ಸಂಘಟನಾ ಸೃಜನ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಸಂಘಟನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುವ ಹಾಗೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡುವ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಎಲ್ಲರ ವಿಶ್ವಾಸ ಗಳಿಸಿಕೊಂಡು ಮುನ್ನಡೆ ಯಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ, ಉಸ್ತುವಾರಿಗಳಾದ ಜ್ಯೋತಿ ಮರಗೋಳ, ರಮೇಶ್ ಮರಗೋಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಮಿ ಕಾಂಗ್ರೆಸ್ ಪಕ್ಷದ ಸಂಘಟನೆ ಕುರಿತು ಯುವ ಕಾಂಗ್ರೆಸ್, ಮಹಿಳಾ ಘಟಕ, ಎನ್ಎಸ್ಯುಐ ಘಟಕ ಸೇರಿ ಎಲ್ಲ ಘಟಕಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸಹಕಾರ ವಿಭಾಗದ ರಾಜ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ, ಪ್ರಮುಖರಾದ ಮಿರ್ ಅಜರ್ಅಲಿ ನವರಂಗ್, ಬಸವರಾಜ ಸ್ವಾಮಿ, ಅರ್ಜುನ್ ಕನಕ, ಮನೋಹರ ಮೈಸೆ, ರವೀಂದ್ರ ಬೋರಳೆ, ಡಿ.ಕೆ.ದಾವೂದ್, ತಹೇಸಿನ್ ಅಲಿ ಜಮಾದಾರ್, ಜೀತು ಮಾಸ್ಟರ್, ಸಿದ್ರಾಮ ಕಾಮಣ್ಣ, ಆನಂದ ಪಾಟೀಲ್, ಅನ್ನಪೂರ್ಣ ಅಂಬಾರಾಯ, ಶಿವಕುಮಾರ ಶೆಟಕಾರ, ಅನುಸೂಯ ಮಂಠಾಳಕರ್, ಸುರೇಶ ಮೋರೆ, ದತ್ತು ಬೆಂಡೆ, ಸಂದೀಪ ಬುಯೆ, ರೈಸೋದ್ದಿನ್, ಮಲ್ಲಿಕಾರ್ಜುನ ಬೊಕ್ಕೆ, ನಾಗನಾಥ ಮೇತ್ರೆ, ಮಹ್ಮದ್ ಜಾಬೇರ್, ಶೇಕ್ ಸಾಕೀಬ್, ಮನೋಜ್ ಖೇಲೆ, ಮಹಾದೇವ ಪಾಟೀಲ್, ಯುವರಾಜ್ ಬೆಂಡೆ, ದತ್ತು ಧುಲೆ, ಮಹ್ಮದ್ ಮೊಹಾಸಿನ್, ಸಿದ್ರಾಮಪ್ಪ, ಅಶೋಕ ಇತರರಿದ್ದರು.