ಗುರುಮಠಕಲ್ ತಾಲೂಕಿನ ಗಾಜರಕೋಟ್‌ನಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಯುವ ಪ್ರತಿಭೆ ತುಳಜಾರಾಮ ಪತಂಗೆ ಅವರನ್ನು ಅರಿವು-ಆಚಾರ ಸದ್ಭಾವನಾ ಸಂಸ್ಥೆ ಮುಖ್ಯಸ್ಥ ಶಂಭುಲಿAಗಪ್ಪ ಅರುಣಿ ಸನ್ಮಾನಿಸಿದರು. ಶಾಂತವೀರಯ್ಯಸ್ವಾಮಿ ಪತ್ರಿಮಠ, ಓಂಕಾರ ವಿಶ್ವಕರ್ಮ, ಅಯ್ಯಪ್ಪ ವಿಶ್ವಕರ್ಮ, ಈಶಪ್ಪ ಮಾಲಿ ಪಾಟೀಲ್ ಇತರರಿದ್ದರು.
ಯಾದಗಿರಿ : ಜ್ಞಾನಕ್ಕೆನಕ್ಕೆ ಸಮಾನವಾದ ವಸ್ತು ಮತ್ತೊಂದಿಲ್ಲ ಎಂಬುದು ಭಾರತೀಯ ತತ್ವಶಾಸöದ ಪ್ರಮುಖ ವಾಕ್ಯ. ಜ್ಞಾನವು ವ್ಯಕ್ತಿಯನ್ನು ಪ್ರಕಾಶಮಾನವಾಗಿ ಮಾಡುವುದು, ಪ್ರಪಂಚದ ಯಾವುದೇ ಭೌತಿಕ ಸಂಪತ್ತು ಕಳ್ಳತನವಾಗಬಹುದು ಆದರೆ e್ಞÁನವೆಂಬ ಸಂಪತ್ತು ಎಂದಿಗೂ ಕರಗುವುದಿಲ್ಲ. ಜ್ಞಾನದಿಂದಲೇ ಮುಕ್ತಿ, ಪರಮಶಾಂತಿ ದೊರೆಯುವುದು ಎಂದು ಅರಿವು-ಆಚಾರ ಸದ್ಭಾವನಾ ಸಂಸ್ಥೆ ಮುಖ್ಯಸ್ಥ ಶಂಭುಲಿAಗಪ್ಪ ಅರುಣಿ ಹೇಳಿದರು.
ಗುರುಮಠಕಲï ತಾಲೂಕಿನ ಗಾಜರಕೋಟದಲ್ಲಿ ಬುಧವಾರ ಹಮ್ಮಿಕೊಂಡ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ ಗ್ರಾಮದ ಯುವ ಪ್ರತಿಭೆ ತುಳಜÁರಾಮ ಪತಂಗೆ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ವ್ಯಕ್ತಿಯಲ್ಲಿನ e್ಞÁನ-ವಿe್ಞÁನಗಳ ಸಮೀಕರಣವೇ ಪ್ರತಿಭೆಯಾಗಿ ಹೊರಹೊಮ್ಮುವುದಾಗಿದೆ. ಸದಾ ಕ್ರೀಯಾಶೀಲತೆ ಓದು ಬರಹದಲ್ಲಿ ತೊಡಗಿಸಿಕೊಂಡ ತುಳಜಾರಾಮ ಪತಂಗೆ ಚಂದನ ವಾಹಿನಿಯಲ್ಲಿ ಡಾ.ನಾ.ಸೋಮೇಶ್ವರ ನಡೆಸಿಕೊಡುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದು ಹೆಮ್ಮೆಯ ವಿಷಯವಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತುಳಜÁರಾಮ ಪತಂಗೆ ಮಾತನಾಡಿದರು. ರಂಗನಾಥಾಚಾರ್ಯ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಶಾಂತವೀರಯ್ಯಸ್ವಾಮಿ ಪತ್ರಿಮಠ, ಓಂಕಾರ ವಿಶ್ವಕರ್ಮ, ಅಯ್ಯಪ್ಪ ವಿಶ್ವಕರ್ಮ, ಈಶಪ್ಪ ಮಾಲಿಪಾಟೀಲ ಸೇರಿದಂತೆಯೇ ಇತರರಿದ್ದರು.