ಬಸವಕಲ್ಯಾಣ- ತಾಲೂಕಿನ ಮುಡಬಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳ ಮತ್ತು ಮನೆ ಮನೆ ಭೇಟಿ ಹಾಗೂ ಬೇಡಿಕೆ ಸ್ವೀಕಾರ ಅಭಿಯಾನಕ್ಕೆ ತಾಪಂ ಇಒ ರಮೇಶ ಸುಲ್ಪಿ ಚಾಲನೆ ನೀಡಿದರು. ಮಹ್ಮದ್ ಸಲೀಂ, ಅಬ್ದುಲ್ ರಜಾಕ್, ಶಿವರಾಜ ಪಾಟೀಲ್, ವೀರಾರಡ್ಡಿ ಇತರರಿದ್ದರು.
- ತಾಪಂ ಇಒ ರಮೇಶ ಸುಲ್ಪಿ ಹೇಳಿಕೆ
- ಮುಡಬಿಯಲ್ಲಿ ಅಭಿಯಾನಕ್ಕೆ ಚಾಲನೆ
ಬಸವಕಲ್ಯಾಣ: ವಿಬಿ-ಜಿ- ರಾಮ್- ಜಿ ಯೋಜನೆಯಡಿ ಕೆಲಸ ಮಾಡಬೇಕಾದರೆ ಕೂಲಿ ಕಾರ್ಮಿಕರು ಕಡ್ಡಾಯ ಜಾಬ್ ಕಾರ್ಡ್ ಪಡೆಯಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಪಿ ಹೇಳಿದರು.
ತಾಲೂಕಿನ ಮುಡಬಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳ ಮತ್ತು ಮನೆ ಮನೆ ಭೇಟಿ ಹಾಗೂ ಬೇಡಿಕೆ ಸ್ವೀಕಾರ ಅಭಿಯಾನಕ್ಕೆ ಚಾಲನೆಕ್ಕೆ ನೀಡಿ ಮಾತನಾಡಿ, ಫಾಮ್ರ್ ನಂ.1ರಲ್ಲಿ ಅರ್ಜಿ ಸಲ್ಲಿಸಿ ಜಾಬ್ ಕಾರ್ಡ್ ಪಡೆಯಬೇಕು. ಅಂದಾಗ ಮಾತ್ರ ನೀವು ಕೆಲಸ ಮಾಡಲು ಸಾಧ್ಯ ಎಂದರು
ರಾಜ್ಯದಲ್ಲಿ ನೂತನವಾಗಿ ಅನುಷ್ಠಾನ ಗೊಂಡ ವಿಬಿ-ಜಿ- ರಾಮ್ ಜಿ ಯೋಜನೆಯಡಿ ಕೆಲಸ ಮಾಡಬೇಕಾದರೆ ಗ್ರಾಪಂಗೆ ಭೇಟಿ ನೀಡಿ ಅಗತ್ಯ ಮಾಹಿತಿ ಒದಗಿಸಿದರೆ ನೂತನ ಜಾಬ್ ಕಾರ್ಡ್ ವಿತರಿಸಲಾಗುತ್ತದೆ. ಒಂದು ಕುಟುಂಬಕ್ಕೆ ಮೊದಲು 100 ದಿನಗಳ ಕೆಲಸ ನೀಡಲಾಗುತ್ತಿತ್ತು, ಈಗ 125 ದಿನಗಳು ನೀಡಲಾಗುತ್ತದೆ. 370 ರಿಂದ 382 ರೂ. ಕೂಲಿ ಹೆಚ್ಚಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹ್ಮದ್ ಸಲೀಂ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರಿಗಾಗಿ ಯೋಜನೆ ತರುವ ಮೂಲಕ ಸಾಕಷ್ಟು ಅವಕಾಶ ನೀಡಿದೆ. ಹೀಗಾಗಿ ಗ್ರಾಮಸ್ಥರು ವಲಸೆ ಹೋಗದೆ ಕೆಲಸ ಮಾಡಿ ಸ್ವಾವಲಂಬಿ ಜೀವನ ಸಾಗಿಸಬೇಕು ಎಂದರು.
ಪಿಡಿಒ ಅಬ್ದುಲ್ ರಜಾಕ್, ಟಿಸಿ ಶಿವರಾಜ ಪಾಟೀಲ್, ಟಿಪಿಎಂ ದಯಾನಂದ, ಐಇಸಿ ಸಂಯೋಜಕ ವೀರಾರಡ್ಡಿ, ಟಿಎ ಅವಿನಾಶ, ಶಿವರಾಜ ಕೋಟೆ, ಅರಿವು ಕೇಂದ್ರದ ಮೇಲ್ವಿಚಾರಕ ಸುಧಾಕಾರ, ಡಿಇಒ ಭೀಮರಾವ, ಬಿಎಫ್ಟಿ ದೇವೀಂದ್ರ. ಕಾಯಕ ಮಿತ್ರ ಆಶಾ, ಗ್ರಾಪಂ ಮಾಜಿ ಸದಸ್ಯ ಭೀಮಶಾ, ಪಿಆರ್ಐ ಪ್ರಿಯಾಂಕ್ ಇತರರಿದ್ದರು. ಸಂಪನ್ಮೂಲ ವ್ಯಕ್ತಿ ಸಂಜುಕುಮಾರ ವಾಗ್ಮಾರೆ ನಿರೂಪಣೆ ಮಾಡಿ ವಂದಿಸಿದರು.