ಹುಮನಾಬಾದ್​ ತಾಲೂಕಿನ ಹುಡಗಿ ಗ್ರಾಮದಲ್ಲಿ ಬುಧವಾರ ಬ್ಲಾಕ್​ ಕಾಂಗ್ರೆಸ್​ ಸಮಿತಿಯಿಂದ ಆಯೋಜಿಸಿದ್ದ ಎಸ್​ಐಆರ್​ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್​ ಮಾತನಾಡಿದರು. ಅಫ್ಸರ್​ಮಿಯ, ಓಂಕಾರ ತುಂಬಾ, ಮಹೇಶ ಅಗಡಿ, ಕಂಟೆಪ್ಪ ದಾನ, ಕರಬಸಪ್ಪ ಮಲಶಟ್ಟಿ, ಪ್ರಭು ಮಾಳನಾಯಕ ಇತರರಿದ್ದರು. 
ರಾಜ್ಯ

ಸಮನ್ವಯದಿಂದ ಕಾರ್ಯನಿರ್ವಹಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ರಾಜಶೇಖರ ಪಾಟೀಲ್​ ಸಲಹೆ
  • ಹುಡಗಿ ಗ್ರಾಮದಲ್ಲಿ ಎಸ್​ಐಆರ್​ ಜನಜಾಗೃತಿ
ಹುಮನಾಬಾದ್​: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆ ಯಶಸ್ವಿಯಾಗಲು ಸಾರ್ವಜನಿಕರು, ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್​ ಹೇಳಿದರು.
ಹುಡಗಿ ಗ್ರಾಮದ ಐತಿಹಾಸಿಕ ಹನುಮಾನ ಮಂದಿರದಲ್ಲಿ ಬುಧವಾರ ಬ್ಲಾಕ್​ ಕಾಂಗ್ರೆಸ್​ ಸಮಿತಿಯಿಂದ ಆಯೋಜಿಸಿದ್ದ ಎಸ್​ಐಆರ್​ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು, ವಿಳಾಸ, ವಯಸ್ಸು ಸೇರಿ ಯಾವುದೇ ಮಾಹಿತಿಯಲ್ಲಿ ದೋಷಗಳಿದ್ದರೆ ತಕ್ಷಣ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಹತ್ವದ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬರೂ ಜಾಗೃತಿಯಿಂದ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಲು ಸಜ್ಜಾಗಬೇಕು ಎಂದು ಕರೆ ನೀಡಿದರು.
ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಫ್ಸರ್​ಮಿಯಾ, ಗ್ರಾಮೀಣ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಓಂಕಾರ ತುಂಬಾ, ಮಹೇಶ ಅಗಡಿ, ಕಂಟೆಪ್ಪ ದಾನ, ಕರಬಸಪ್ಪ ಮಲಶಟ್ಟಿ, ಪ್ರಭು ಮಾಳನಾಯಕ, ಶೇಖರ ಜೀರಗಿ, ಗುರುಪ್ರಸಾದ ಮುಗಳಿ, ಅನಿಲ ಕನಶಟ್ಟಿ, ಜೀಲಾನಿ, ಪ್ರದಿಪ, ಜಾಕ್ಸನ್​, ರಾಜಶೇಖರ, ಮಾಣಿಕ, ಶಂಕರ, ಸುಮೀತ, ಮೋಹನ್​, ರಾಜಕುಮಾರ ಇತರರಿದ್ದರು.