ಯಾದಗಿರಿಯಲ್ಲಿ ಶನಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಪಕ್ಷದ ಸಭೆಯನ್ನು ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸನಕುಮಾರ ಉದ್ಘಾಟಿಸಿದರು.ಶಾಸಕ ಚನ್ನಾರೆಡ್ಡಿ ಪಾಟೀಲ್, ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಸೇರಿದಂತೆಯೇ ಇತರರಿದ್ದರು. 
ರಾಜ್ಯ

ತಳಮಟ್ಟದಿಂದ ಪಕ್ಷ ಸಂಘಟನೆಗೆ ಶ್ರಮಿಸಿ

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ಕಾರ್ಯದರ್ಶಿ ಕುಸಮಕುಮಾರ ಕರೆ
  • ಯಾದಗಿರಿಯಲ್ಲಿ ಸಂಘಟನ್ ಸೃಜನ್ ಅಬಿಯಾನ ಸಭೆ
ಯಾದಗಿರಿ:

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸಮಕುಮಾರ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಂಘಟನ್ ಸೃಜನ್ ಅಭಿಯಾನ ನಿಮಿತ್ತ ಹಮ್ಮಿಕೊಂಡ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಕ್ಷ ಮುಖಂಡರ, ಪ್ರಮುಖರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಽ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುಂದಾಲೋಚನೆಯ ಈ ಅಭಿಯಾನ ದೇಶದ ಎಲ್ಲೆಡೆ ನಡೆಯುತ್ತಿದೆ. ಜಿಲ್ಲಾ, ಬ್ಲಾಕ್ ಅಧ್ಯಕ್ಷರ ನೇಮಕವನ್ನು ನೇರವಾಗಿ ಆಯಾ ಜಿಲ್ಲೆಗಳಿಂದಲ್ಲೆ ಆಕಾಂಕ್ಷಿಗಳಿAದ ಅರ್ಜಿ ಪಡೆದು ಅಭಿಪ್ರಾಯ ಸಂಗ್ರಹಿಸಿ ಮಾಡಲಾಗುತ್ತಿದೆ. ಹೀಗಾಗಿ ಆಕಾಂಕ್ಷಿಗಳು ಅರ್ಜಿ ಭರ್ತಿ ಮಾಡಿ ನೀಡಬೇಕು. ಅದನ್ನು ಪರಿಶೀಲಿಸುವ ಹೈಕಮಾಂಡ್ ಆ.೨೧ರವರೆಗೆ ನೂತನ ಪದಾಽಕಾರಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಎಂದರು.
ಈಗಾಗಲೇ ಜಿಲ್ಲೆ ಆರು ಬ್ಲಾಕ್‌ಗಳಲ್ಲಿ ಸಭೆ ಮುಗಿಸಲಾಗಿದೆ. ಆ.೨ರಂದು ಉಳಿದ ಎರಡು ಬ್ಲಾಕ್‌ಗಳ ಸಭೆ ನಡೆಸಿ ವರದಿ ಕೆಪಿಸಿಸಿ ಮೂಲಕ ಎಐಸಿಸಿಗೆ ಕಳುಹಿಸಲಾಗುವುದು ಎಂದರು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಮಾತಾನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರ ಬುನಾದಿಯಾಗಿದ್ದು, ಮೂರು ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು. ವಿಶೇಷವಾಗಿ ಯಾದಗಿರಿ ಮತ್ತು ವಡಗೇರಾ ಬ್ಲಾಕ್‌ಗಳಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು. ಮುಂಬರುವ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ನಾವೆಲ್ಲರೂ ಶ್ರಮಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಸರೆಡ್ಡಿ ಅನಪುರ ಮಾತನಾಡಿ, ಈಗಾಗಲೇ ಜಿಲ್ಲೆಯ ಮೂರು ಮತಕ್ಷೇತ್ರಗಳ ಆರು ಬ್ಲಾಕ್‌ಗಳಲ್ಲಿ ಸಭೆಗಳನ್ನು ಯಶಸ್ಸಿಯಾಗಿ ಮುಗಿಸಲಾಗಿದೆ. ಗುರುಮಠಕಲ್, ಸೈದಾಪುರಗಳಲ್ಲಿ ಭಾನುವಾರ ನಡೆಯಲಿದೆ ಎಂದರು. ಜಿಲ್ಲಾ ವಕ್ತಾರ ಶಾಮಸನ್ ಮಾಳಿಕೇರಿ ನಿರೂಪಿಸಿದರು. ರಾಜ್ಯ ಕಾರ್ಯದರ್ಶಿ ರಾಜಗೋಪಾಲರೆಡ್ಡಿ, ಶ್ರೀದೇವಿ ನಾಯಕ, ಶರಣಗೌಡ ಬಯ್ಯಾಪುರ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಮಾಜಿ ಶಾಸಕ ಪುಂಡಲಿಕರಾವ, ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ಸಿದ್ದಲಿಂಗರೆಡ್ಡಿ ಹುಳ್ಳೆಸೂಗುರು, ತಿಮ್ಮಣ್ಣ ನಾಯಕ, ಗಣೇಶ ದುಪ್ಪಲ್ಲಿ, ಮರೆಪ್ಪ ಬಿಳ್ಹಾರ, ವೆಂಕಟರೆಡ್ಡಿ ಹೊನಕೇರಿ, ಸಾಬಣ್ಣ ಕೆಂಗೂರಿ ಇತರರಿದ್ದರು.