Work for the progress of the Dalit community
ಪಟ್ಟನಾಯಕನಹಳ್ಳಿ: ಹೆಣ್ಣಿಗೆ ಸವಾನತೆ ಆಸ್ತಿ ಹಕ್ಕು ನೀಡಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ. ಅಪಾರ ಜ್ಞಾನದ ಬಂಡಾರ ಹೊಂದಿದ್ದ ಅಂಬೇಡ್ಕರ್ ನೆನಪಿನ ಜಗತ್ತಿನಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ವಿಶ್ವಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವನ್ನು ಜ್ಞಾನದ ದಿನವಾಗಿ ಆಚರಿಸುತ್ತಿರುವುದು ನಮ್ಮ ದೇಶಕ್ಕೆ ಸಂದ ಕೀರ್ತಿ ಎಂದು ಪ್ರೊ.ಕೊಟ್ಟ ಶಂಕರ್ ಹೇಳಿದರು.
ಶಿರಾ ತಾಲೂಕಿನ ವೀರಗಾನಹಳ್ಳಿಯಲ್ಲಿ ದಲಿತ ಸಂರ್ಷ ಸಮಿತಿ ಜೈ ಭೀಮ್ ಯುವಕರ ಸಂದಿಂದ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ವಾತನಾಡಿ, ನಮ್ಮಲ್ಲಿರುವ ಜ್ಞಾನದ ಸಂಪತ್ತು ಯಾರು ಕದಿಯಲು ಸಾಧ್ಯವಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮುದಾಯದ ಪ್ರಗತಿಗೆ ಶ್ರಮಿಸಬೇಕು ಎಂದರು.
ಆದಿಜಾಂಬವ ಮಠದ ಶ್ರೀ ಷಡಕ್ಷರ ಮುನಿಸ್ವಾಮೀಜಿ ವಾತನಾಡಿ, ಜಾತಿ ತಾರತಮ್ಯ ನಿವಾರಣೆಯಾಗಲು ಶಿಕ್ಷಣವೊಂದೇ ವಾರ್ಗ. ಉನ್ನತ ಶಿಕ್ಷಣ ದಲಿತ ಸಮುದಾಯವನ್ನು ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾವಾಜಿಕವಾಗಿ ಬಲ ನೀಡಲಿದೆ ಎಂದರು.
ಟೈರ್ ರಂಗನಾಥ ವಾತನಾಡಿ, ದಲಿತ ಸಮುದಾಯ ಜಾಗೃತವಾಗುವ ಅವಶ್ಯಕತೆ ಇದ್ದು, ರಾಜಕೀಯ ಪ್ರಾತಿನಿಧ್ಯ ದೊರೆಯಲು ಎಲ್ಲರೂ ಒಗ್ಗೂಡಿ ಒಗ್ಗಟ್ಟಿನೊಂದಿಗೆ ಮುನ್ನಡೆದಾಗ ಯಶಸ್ಸು ತಾನಾಗಿಯೇ ಲಭಿಸಲಿದೆ. ಸಂಟನೆ, ಹೋರಾಟ, ಶಿಕ್ಷಣ ಸಮುದಾಯದ ಪ್ರಗತಿಗೆ ಭದ್ರಾ ಬುನಾದಿ ಎಂದರು.
ಎಸ್ಸೆಸ್ಸೆಲ್ಸಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆಶಾ ಮತ್ತು ಅಂಗನವಾಡಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮುಖಂಡರಾದ ತಿಪ್ಪೇಸ್ವಾಮಿ, ಬರಗೂರು ಯುವರಾಜ್, ಡಾ.ಶಂಕರ್ ಇದ್ದರು.