ಕುಲವನಹಳ್ಳಿಯಲ್ಲಿ ಪ್ರಕೃತಿ ಫೌಂಡೇಷನ್​ ಪ್ರಾರಂಭಿಸಿರುವ ಪ್ರಕೃತಿ ಹೆಣ್ಣು ಮಕ್ಕಳಧಾಮ ಹೆಸರಿನ ಹೆಣ್ಣುಮಕ್ಕಳ ಆರೈಕೆ ಕೇಂದ್ರಕ್ಕೆ ಆದಿಚುಂಚನಗಿರಿ ಮಠಾಧೀಶ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಶಿವಗಂಗಾ ಮೇಲಣಗವಿ ವೀರಸಿಂಹಾಸನ ಮಠದ ಡಾ.ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು. 
ರಾಜ್ಯ

ಹೆಣ್ಣು ಮಕ್ಕಳ ಅಭಿವೃದ್ಧಿಗೆ ಶ್ರಮಿಸಿ / TYAMAGONDLU

ತ್ಯಾಮಗೊಂಡ್ಲು : ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳ ಶಿಣ ಮತ್ತು ಆರೈಕೆಗೆ ಆದ್ಯತೆ ನೀಡಬೇಕಿದ್ದು, ಎಲ್ಲ ಸಮುದಾಯದ ನಾಯಕರು ಹೆಣ್ಣು ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಆದಿಚುಂಚನಗಿರಿ ಮಠಾಧೀಶ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನೆಲಮಂಗಲ ತಾಲೂಕು ಕುಲವನಹಳ್ಳಿಯಲ್ಲಿ ಪ್ರಕೃತಿ ಫೌಂಡೇಷನ್​ ಪ್ರಾರಂಭಿಸಿರುವ ಪ್ರಕೃತಿ ಹೆಣ್ಣು ಮಕ್ಕಳಧಾಮ ಹೆಸರಿನ ಹೆಣ್ಣುಮಕ್ಕಳ ಆರೈಕೆ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಪಾಲನಾ ಕೇಂದ್ರದಲ್ಲಿರುವ ಮಕ್ಕಳ ಜತೆ ಸಮಾಲೋಚನೆ ನಡೆಸಿ ಸಂಸ್ಥೆ ಮತ್ತು ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು.
ಉಚಿತ ಶಿಕ್ಷಣ: ನೆಲಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪೋಷಣೆ, ರಣೆ ಆರೈಕೆಗೆ ಹಾಗೂ ಅವಕಾಶ ವಂಚಿತ ಹೆಣ್ಣು ಮಕ್ಕಳನ್ನು ಗುರುತಿಸಿ ಮಕ್ಕಳ ಕಲ್ಯಾಣ ಸಮಿತಿಯ ಮಾರ್ಗದರ್ಶನದೊಂದಿಗೆ ಅವರ ಆರೈಕೆ, ವಸತಿ, ಶಿಣ ಮುಂತಾದ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಉಚಿತ ಶಿಣ ಜತೆಗೆ ಕುಟುಂಬಕ್ಕೆ ಸಹಕಾರ ಮಾರ್ಗದರ್ಶನ ಮಾಡುವುದು ಪ್ರಕೃತಿ ಹೆಣ್ಣು ಮಕ್ಕಳ ಧಾಮದ ಉದ್ದೇಶವಾಗಿರುತ್ತದೆ. ಮಾಜಿ ವಿಧಾನ ಪರಿಷತ್​ ಸದಸ್ಯ ಇ.ಕೃಷ್ಣಪ್ಪ, ಪ್ರಕೃತಿ ಫೌಂಡೇಷನ್​ ಸಿಬ್ಬಂದಿ ಇದ್ದರು.