Women underwear missing at night Hidden CCTV reveals mystery
- ಮಹಿಳೆಯರ ಒಳ ಉಡುಪು ಕದ್ದು ವಾಪಸ್ ತಂದಿಡುತ್ತಿದ್ದ ವಿಕೃತಕಾಮಿ ಅರೆಸ್ಟ್
- ಬೆಂಗಳೂರಿನ ಹೊಯ್ಸಳ ನಗರದಲ್ಲಿ ಘಟನೆ ಅಸ್ಸಾಂ ಮೂಲದ ಆರೋಪಿ ಬಂಧನ
- ಒಳ ಉಡುಪು ಕದ್ದು, ರಾತ್ರಿಯಿಡೀ ಧರಿಸಿ ಮಾರನೇ ದಿನ ತಂದಿಡುತ್ತಿದ್ದ ಆಸಾಮಿ
ಬೆಂಗಳೂರು: ತಾರಸಿ ಮೇಲೆ ಒಣಗಲು ಹಾಕುತ್ತಿದ್ದ ಮಹಿಳೆಯರ ಒಳ ಉಡುಪು ನಿತ್ಯ ಕಾಣೆಯಾಗುತ್ತಿತ್ತು. ಈ ಬಗ್ಗೆ ಕೆಲವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಮಸ್ಯೆ ಬೇಧಿಸಲು ಗುಪ್ತವಾಗಿ ಸಿಸಿಟಿವಿ ಅಳವಡಿಸಿದರು. ಅದರ ಮಾರನೇದಿನವೂ ಇದೇ ಪ್ರಸಂಗ. ಕೊನೆಗೇ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಸಿಕ್ಕಿದೆ.
ಹೌದು, ಅಸ್ಸಾಂ ಮೂಲದ ಅಬ್ದುಲ್ ಹುಸೇನ್ (23) ಎಂಬ ಯುವಕ ನಿತ್ಯ ಒಳ ಉಡುಪುಗಳನ್ನು ಕದ್ದು, ರಾತ್ರಿಯಿಡೀ ತಾನೇ ಧರಿಸಿ, ಮರುದಿನ ಮತ್ತೊಂದು ಹೊಸ ಜೋಡಿಯನ್ನು ಕದಿಯುವ ಮುನ್ನ ಹಳೆಯದನ್ನು ತಂದು ವಾಪಸ್ ಇಡುತ್ತಿದ್ದ ಎನ್ನಲಾಗಿದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಿತ್ರ ಘಟನೆ ಬೆಂಗಳೂರಿನ ಹೊಯ್ಸಳ ನಗರದಲ್ಲಿ ಬೆಳಕಿಗೆ ಬಂದಿದೆ.
ಒಳುಡುಪು ನಾಪತ್ತೆ, ದೂರು
ಹೊಯ್ಸಳ ನಗರದಲ್ಲಿ ವಾಸವಾಗಿರುವ ಇಬ್ಬರು ಮಹಿಳೆಯರು ಒಗೆದು ಒಣಗಿ ಹಾಕಿದ ಒಳ ಉಡುಪು ಆಗಾಗ್ಗೆ ಕಾಣೆಯಾಗುತ್ತಿತ್ತು. ವಿಚಿತ್ರವೆಂದರೆ ಕಾಣೆಯಾದ ಮಾರನೇದಿನವೇ ಅವು ಪ್ರತ್ಯಕ್ಷವಾಗಿ ಮತ್ತೆ ಇನ್ನೆರಡು ಅದೇ ಮಾದರಿ ನಾಪತ್ತೆಯಾಗುತ್ತಿತ್ತು. ಇದರಿಂದ ಬೇಸತ್ತ ಅವರು ಪೊಲೀಸರಿಗೆ ದೂರು ಕೊಟ್ಟರು. ಪ್ರಕರಣ ಬೇಧಿಸಲು ಪೊಲೀಸರು ಸಿಸಿಟಿವಿಯನ್ನು ಅಳವಡಿಸಿದ್ದರು.
ಜುಲೈ2ರಂದು ಆರೋಪಿ ಅಬ್ದುಲ್ ಹುಸೇನ್ ಸುಮಾರು ಮೂರು ಗಂಟೆಗೆ ತಾರಸಿ ಹತ್ತಿ ಬಂದಿರುವುದು. ಆನಂತರಈ ಹಿಂದೆ ಕದ್ದಿದ್ದ ಒಳ ಉಡುಪು ಅಲ್ಲೇ ಬಿಟ್ಟು, ಹೊಸದನ್ನು ಕದ್ದು ಹೋಗುವ ದೃಶ್ಯಾವಳಿ ಸೆರೆಯಾಗಿದೆ. ಇಷ್ಟೇ ಅಲ್ಲದೆ, ಬಟ್ಟೆ ಹಿಡಿದು ಅನುಚಿತವಾಗಿ ವರ್ತನೆ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯುವಕ ಅರೆಸ್ಟ್
ಮಹಿಳೆಯರು ಪೊಲೀಸರಿಗೆ ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿ ಹುಸೇನ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ಮಾನಸಿಕ ವಿಕೃತಿ. ಆತನಲ್ಲಿ ಮಹಿಳೆಯರ ತರಹದ ನಡವಳಿಕೆಯ ಪ್ರವೃತ್ತಿ ಇರುವುದು ಕಂಡುಬಂದಿದೆ. ಆತ ಮಹಿಳೆಯರ ಒಳ ಉಡುಪುಗಳನ್ನು ಕದ್ದು, ಒಮ್ಮೆ ಧರಿಸಿ, ನಂತರ ಅದನ್ನು ವಾಪಸ್ ತಂದಿಟ್ಟು ಹೊಸದನ್ನು ಕದಿಯುತ್ತಿದ್ದ. ಸದ್ಯಕ್ಕೆ ಇಂತಹ ಎರಡು ಘಟನೆಗಳು ದೃಢಪಟ್ಟಿದ್ದು, ಈತ ಇನ್ನೂ ಎಷ್ಟು ಕಡೆ ಈ ರೀತಿ ಮಾಡಿದ್ದಾನೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ, (ಏಜೆನ್ಸೀಸ್).