ಡಬ್ಲ್ಯುಪಿಎಲ್ ಟ್ರೋಫಿಯೊಂದಿಗೆ ಪೋಸ್ ನೀಡಿದ ನಾಯಕಿಯರಾದ ಆಶ್ಲೇ ಗಾರ್ಡ್‌ನರ್ (ಗುಜರಾತ್), ಜೆಮೀಮಾ ರೋಡ್ರಿಗಸ್ (ಡೆಲ್ಲಿ), ಹರ್ಮಾನ್‌ಪ್ರೀತ್ ಕೌರ್ (ಮುಂಬೈ), ಸ್ಮತಿ ಮಂದನಾ (ಆರ್‌ಸಿಬಿ), ಮೆಗ್ ಲ್ಯಾನಿಂಗ್ (ಯುಪಿ).
ಮುಂಬೈ: ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಜಯಿಸಿದ ಅಂಗಣದಲ್ಲಿ ಮಹಿಳೆಯರ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಟೂರ್ನಿಯ 4ನೇ ಆವೃತ್ತಿಗೆ ಇಂದು (ಜ.9,ಶುಕ್ರವಾರ) ಚಾಲನೆ ಸಿಗಲಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿವೆ.
ಟೂರ್ನಿಗೆ ಪೂರ್ವಭಾವಿಯಾಗಿ ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಕೆಲ ಆಟಗಾರ್ತಿಯರ ತಂಡಗಳು ಬದಲಾಗಿವೆ. ಹಿಂದಿನ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌ಗೇರಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಈ ಬಾರಿ ಯುಪಿ ವಾರಿಯರ್ಸ್ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಸರಣಿಶ್ರೇಷ್ಠ ಆಲ್ರೌಂಡರ್ ದೀಪ್ತಿ ಶರ್ಮ ಬಲ ಹೊಂದಿರುವ ಯುಪಿ ತಂಡದ ನೂತನ ನಾಯಕಿಯಾಗಿ ಮೆಗ್ ಲ್ಯಾನಿಂಗ್ ನೇಮಕಗೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶ್ವದ ಯಶಸ್ವಿ ನಾಯಕಿ ಎನಿಸಿರುವ ಹರ್ಮಾನ್‌ಪ್ರೀತ್ ಕೌರ್ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು ಹೊಂದಿದ್ದಾರೆ.
ಕಳೆದ ಆವೃತ್ತಿಯ ನೀರಸ ನಿರ್ವಹಣೆ ಹಾಗೂ ಆಲ್ರೌಂಡರ್ ಎಲ್ಲಿಸ್ ಪೆರ‌್ರಿ ಗೈರಿನಲ್ಲಿ ಆರ್‌ಸಿಬಿ ತಂಡವನ್ನು ಸತತ 4ನೇ ಆವೃತ್ತಿಯಲ್ಲಿ ಸ್ಮತಿ ಮಂದನಾ ಮುನ್ನಡೆಸಲಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಸ್ಮತಿ ಮಂದನಾ ಜತೆಗೆ ಕನ್ನಡತಿ ಶ್ರೇಯಾಂಕಾ ಪಾಟೀಲ್, ರಿಚಾ ಘೋಷ್ ತಂಡಕ್ಕೆ ಪ್ರಮುಖ ಬಲ. ಆಶ್ಲೇ ಗಾರ್ಡ್‌ನರ್ ಗುಜರಾತ್ ಜೈಂಟ್ಸ್ ತಂಡಕ್ಕೆ ಹೊಸ ಚೈತನ್ಯ ತುಂಬುವ ವಿಶ್ವಾಸದಲ್ಲಿದ್ದಾರೆ. ಲಿಸಾ ಕೈಟ್ಲಿ (ಮುಂಬೈ), ಮಲೋಲನ್ ರಂಗರಾಜನ್ (ಆರ್‌ಸಿಬಿ) ಹಾಗೂ ಅಭಿಷೇಕ್ ನಾಯರ್ (ಯುಪಿ) ಈ ಬಾರಿ ಮೂವರು ಹೊಸ ಕೋಚ್‌ಗಳಾಗಿದ್ದಾರೆ.
ಬಹುಮಾನ ಮೊತ್ತ: ಒಟ್ಟು ₹10 ಕೋಟಿ
ಕಳೆದ ವರ್ಷ ನಾಲ್ಕು ತಾಣಗಳಲ್ಲಿ ಆಯೋಜಿಸಲಾಗಿದ್ದ ವುಮೆನ್ಸ್ ಪ್ರೀಮಿಯರ್ ಲೀಗ್ ಈ ಬಾರಿ ಮುಂಬೈ, ವಡೋದರ ನಗರಗಳಲ್ಲಿ ಮಾತ್ರ ನಡೆಯಲಿದೆ. ಉದ್ಘಾಟನಾ ಪಂದ್ಯಗಳ ಸಹಿತ ಮೊದಲ 11 ಪಂದ್ಯಗಳು ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಂತಿಮ ಲೀಗ್, ಪ್ಲೇಆ್ ಹಾಗೂ ಫೈನಲ್ ಸಹಿತ ಇತರ 11 ಪಂದ್ಯಗಳು ವಡೋದರದ ಕೋಟಂಬಿ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ. ತವರು-ಎದುರಾಳಿ ನೆಲದಲ್ಲಿ ಆಡಲು ್ರಾಂಚೈಸಿಗಳ ಆಸಕ್ತಿ ವಹಿಸಿದ್ದವು. ಆದರೆ ಟಿ20 ವಿಶ್ವಕಪ್, ರಣಜಿ ಟ್ರೋಫಿ ಪಂದ್ಯಗಳು ಇತರ ಪ್ರಮುಖ ಕ್ರೀಡಾಂಗಣಗಳಲ್ಲಿ ನಿಗದಿಯಾಗಿದ್ದು, ಡಬ್ಲ್ಯುಪಿಎಲ್ ಎರಡು ನಗರಕ್ಕೆ ಸೀಮಿತಗೊಂಡಿದೆ.
ಟೂರ್ನಿಯಲ್ಲಿ ಆಡುವ ಒಟ್ಟು 5 ತಂಡಗಳು ಲೀಗ್ ಹಂತದಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 2 ಬಾರಿ ಮುಖಾಮುಖಿ ಆಗಲಿವೆ. ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ 8 ಪಂದ್ಯ ಆಡಲಿವೆ. ಅಂತಿಮವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೇರಲಿದೆ. 2-3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ,ಫೈನಲ್‌ಗೇರಲು ಹೋರಾಡಲಿವೆ. ೆಬ್ರವರಿ 5ರಂದು ಫೈನಲ್ ಪಂದ್ಯ ನಡೆಯಲಿದೆ. ಮೊದಲ ಬಾರಿಗೆ ಫೈನಲ್ ಪಂದ್ಯ ವಾರದ ದಿನ ನಿಗದಿಯಾಗಿದೆ. ಜತೆಗೆ ಮೊದಲ ಬಾರಿ ಡಬಲ್ ಹೆಡರ್ ಪಂದ್ಯ ನಿಗದಿಯಾಗಿದೆ.
ಈ ಬಾರಿ ಡಬ್ಲುೃಪಿಎಲ್‌ನಲ್ಲಿ ನಾಲ್ವರು ಕನ್ನಡತಿಯರು ಕಣದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ಕಳೆದ ಆವೃತ್ತಿ ತಪ್ಪಿಸಿಕೊಂಡಿದ್ದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಜತೆಗೆ ಪ್ರತ್ಯೂಷಾ ಕುಮಾರಿ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಕಳೆದ 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಕನ್ನಡತಿ ನಿಕಿ ಪ್ರಸಾದ್ (ಡೆಲ್ಲಿ), ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ (ಗುಜರಾತ್) ಇನ್ನಿಬ್ಬರು ಕನ್ನಡತಿಯರು. ಕರ್ನಾಟಕ ಮೂಲದ ವಿಕೆಟ್ ಕೀಪರ್-ಬ್ಯಾಟರ್ ಮಮತಾ ಮಡಿವಾಳ ಡೆಲ್ಲಿ ತಂಡದಲ್ಲಿರುವ ಮತ್ತೊರ್ವ ಕನ್ನಡತಿ ಎನಿಸಿದ್ದಾರೆ.
ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ಕೆಲ ಪ್ರಮುಖ ಆಟಗಾರ್ತಿಯರು ಆನ್‌ಸೋಲ್ಡ್ ಆಗಿದ್ದು ಇದರ ಜತೆಗೆ ಕೆಲವರು ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಿಂದೆಸರಿದಿದ್ದಾರೆ. ಆರ್‌ಸಿಬಿ ತಂಡ 2 ಕೋಟಿ ನೀಡಿ ರಿಟೇನ್ ಮಾಡಿಕೊಂಡಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಎಲ್ಲಿಸ್ ಪೆರ‌್ರಿ ಹಾಗೂ ₹2.2 ಕೋಟಿಗೆ ಡೆಲ್ಲಿ ತಂಡದಲ್ಲಿ ಉಳಿದುಕೊಂಡಿದ್ದ ಅನ್ನಾಬೆಲ್ ಸುದರ್‌ಲ್ಯಾಂಡ್ 4ನೇ ಆವೃತ್ತಿಗೆ ಅಲಭ್ಯರಾಗಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ, ಚಾಮರಿ ಅಟಪಟ್ಟು. ಆಮಿ ಜೋನ್ಸ್, ಅಲೀಸ್ ಕಾಪ್ಸಿ ಹರಾಜಿನಲ್ಲಿ ಸೇಲಾಗದೆ ಉಳಿದರೆ, ಜೆಸ್ ಜೋನಾಸೆನ್, ತಾಲಿಹಾ ಮೆಕ್‌ಗ್ರಾತ್, ಸೋಫಿ ಮೂಲಿನೆಕ್ಸ್ ಹರಾಜಿಗೆ ಹೆಸರು ನೋಂದಾಯಿಸದೆ ಹೊರಗುಳಿದಿದ್ದರು.
ಜ.9 ಮುಂಬೈ-ಆರ್‌ಸಿಬಿ ರಾತ್ರಿ 7.30
ಜ.10 ಮುಂಬೈ-ಡೆಲ್ಲಿ ರಾತ್ರಿ 7.30
ಜ.11 ಡೆಲ್ಲಿ-ಗುಜರಾತ್ ರಾತ್ರಿ 7.30
ಜ.12 ಆರ್‌ಸಿಬಿ-ಯುಪಿ ರಾತ್ರಿ 7.30
ಜ.13 ಮುಂಬೈ-ಗುಜರಾತ್ ರಾತ್ರಿ 7.30
ಜ.14 ಯುಪಿ-ಡೆಲ್ಲಿ ರಾತ್ರಿ 7.30
ಜ.15 ಮುಂಬೈ-ಯುಪಿ ರಾತ್ರಿ 7.30
ಜ.16 ಆರ್‌ಸಿಬಿ-ಗುಜರಾತ್ ರಾತ್ರಿ 7.30
ಜ.17 ಡೆಲ್ಲಿ-ಆರ್‌ಸಿಬಿ ರಾತ್ರಿ 7.30
ಜ.19 ಗುಜರಾತ್-ಆರ್‌ಸಿಬಿ ರಾತ್ರಿ 7.30
ಜ.20 ಡೆಲ್ಲಿ-ಮುಂಬೈ ರಾತ್ರಿ 7.30
ಜ.22 ಗುಜರಾತ್-ಯುಪಿ ರಾತ್ರಿ 7.30
ಜ.24 ಆರ್‌ಸಿಬಿ-ಡೆಲ್ಲಿ ರಾತ್ರಿ 7.30
ಜ.26 ಆರ್‌ಸಿಬಿ-ಮುಂಬೈ ರಾತ್ರಿ 7.30
ಜ.27 ಗುಜರಾತ್-ಡೆಲ್ಲಿ ರಾತ್ರಿ 7.30
ಜ.29 ಯುಪಿ-ಆರ್‌ಸಿಬಿ ರಾತ್ರಿ 7.30
ಜ.30 ಗುಜರಾತ್-ಮುಂಬೈ ರಾತ್ರಿ 7.30
ಫೆ.1 ಡೆಲ್ಲಿ-ಯುಪಿ ರಾತ್ರಿ 7.30
ಫೆ. 3 ಎಲಿಮಿನೇಟರ್ ರಾತ್ರಿ 7.30