ಖಾನಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸೂರ್ಯಕಾಂತ ಕುಲಕರ್ಣಿ, ರಮೇಶ ಮೇತ್ರಿ, ವಿಕ್ರಮ ಕೆ.ಬಿ., ವೈಷ್ಣವಿ ಪಾಟೀಲ, ಅನಿತಾ ದಂಡಗಲ್, ಗೀತಾ ಅಂಬಟಗಟ್ಟಿ ಇತರರಿದ್ದರು.
ಖಾನಾಪುರ: ಮಹಿಳೆಯರು ಸಮಾಜದ ದೊಡ್ಡ ಶಕ್ತಿ. ಅವರ ಸಬಲೀಕರಣದ ಸದುದ್ದೇಶದಿಂದ ಮಹಿಳಾ ದಿನ ಆಚರಿಸಲಾಗುತ್ತಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಹೇಳಿದರು.
ಪಟ್ಟಣದ ಶಿವ ಸ್ಮಾರಕದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದವರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.
ಗೃಹಲಕ್ಷಿ$್ಮ ಹಣ ಸದುಪಯೋಗಪಡಿಸಿಕೊಂಡ ಮಾಗಿ ಪಿಂಟೋ, ದೇಮಕ್ಕ ಹತರವಾಡ, ಮಲಪ್ರಭಾ ಕುಮಾರ, ಅಂಜಲಿ ತೋಂಬ್ರೆ, ದಿಶಾ ಕವ್ಟಂಕರ್, ಪಾರ್ವತಿ ನಾಯ್ಕ, ಲಕ್ಷಿ$್ಮ ಮೈಂಸೆ, ಗೀತಾ ಮಾದರ, ಶಾಯಿದಾ ಪಾರಸ್, ದೀಪಶ್ರೀ ಪಾಟೀಲ, ತುಳಸಾ ಗುರವ, ರುಕ್ಮಿಣಿ ಭೇಕ್ನೆ, ಪೂಜಾ ಉಪಾಸ್ಕರ ಹಾಗೂ ರೇಖಾ ಕುಂಬಾರ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯೆ ಸಾವಿತ್ರಿ ಮಾದರ, ತಾಪಂ ಇಒ ರಮೇಶ ಮೈತ್ರಿ, ಸಿಡಿಪಿಒ ವಿಕ್ರಮ ಕೆ.ಬಿ., ವೈಷ್ಣವಿ ಪಾಟೀಲ, ಅನಿತಾ ದಂಡಗಲ್, ಗೀತಾ ಅಂಬಟಗಟ್ಟಿ, ಪ್ರಿಯಾಂಕಾ ಗಾಂವಕರ ಇತರರಿದ್ದರು.