Women's dominance in every field 
ರಾಜ್ಯ

ಪ್ರತಿ ಕ್ಷೇತ್ರದಲ್ಲೂ ಮಹಿಳೆಯರ ಮೇಲುಗೈ

ಬುಕ್ಕಾಪಟ್ಟಣ: ಮಹಿಳಾ ಸಬಲೀಕರಣವು ಎಂಬುದು ಕೇವಲ ಘೋಷಣೆಯಲ್ಲ, ಅದು ಸುಸ್ಥಿರ ಸಮಾಜ ಮತ್ತು ರಾಷ್ಟ್ರದ ಪ್ರಗತಿಯ ಮೂಲದರ, ಮಹಿಳೆಯರಿಗೆ ತಮ್ಮದೇ ಆದ ಆಯ್ಕೆಗಳನ್ನು ಮಾಡಿಕೊಳ್ಳುವ ಮತ್ತು ಅವರು ಬಯಸಿದ ರೀತಿಯಲ್ಲಿ ಬದುಕುವುದಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಕುಂಬಾರಹಳ್ಳಿ ಮಂಜುನಾಥ್ ಹೇಳಿದರು.
ಶಿರ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಕಂಬದಹಳ್ಳಿ ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ, ಜ್ಞಾನ ವಿಕಾಸ ಹಾಗೂ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳಾ ಸಬಲೀಕರಣದಿಂದಾಗಿ ಅದ್ಭುತವಾದ ಸಮಾಜಮುಖಿ ಕಾರ್ಯ ಮಾಡಬಹುದು. ಹೆಣ್ಣು ಮಕ್ಕಳಿಗೆ ಶಿಕ್ಷಣ, ಯಾವುದೇ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾದ ಕೆಲಸ ಮಾಡಬಹುದು ಹಾಗೂ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಕುಟುಂಬ ಮತ್ತು ಸಮುದಾಯಗಳನ್ನು ಬಲಪಡಿಸುತ್ತದೆ ಎಂದರು.
ಭೇಟಿ ಬಚಾವೋ, ಭೇಟಿ ಪಡಾವೋ ಕಾರ್ಯಕ್ರಮ ಹಾಗೂ ಸ್ವಸಹಾಯ ಗುಂಪುಗಳು ಮಹಿಳೆಯರನ್ನು ಉನ್ನತ ಸ್ಥಾನ ಹೊಂದಲು, ಅವರ ಕನಸುಗಳನ್ನು ನನಸಾಗಿಸಿಕೊಳ್ಳಲು, ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಸೀಯರ ಸಬಲೀಕರಣದಿಂದಾಗಿ ಶಿಕ್ಷಣ, ಉದ್ಯೋಗ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಾನ ಅವಕಾಶಗಳನ್ನು ಒದಗಿಸಿವುದರ ಮೇಲೆ ಕೇಂದ್ರೀಕರಿಸುತ್ತದೆ. ಹಿಂದೆಲ್ಲಾ ಮಹಿಳೆಯರು ಮನೆ ಮಾತ್ರ ಸೀಮಿತವಾಗಿದ್ದರು, ಆದರೆ ಇಂದು ಕಾಲ ಬದಲಾಗಿದೆ, ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಹೇಳಿದರು.