ಕಲಬುರಗಿ ಕಲಾ ಮಂಡಳದಲ್ಲಿ ಕರ್ನಾಟಕ ಮಹಿಳಾ ಪರ ಜನಜಾಗೃತಿ ಸಮಿತಿ ಸೋಮವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಜಗದೇವಿ ಹೆಗಡೆ ಚಾಲನೆ ನೀಡಿದರು. ರೇಖಾ ಮ್ಯಾಗೇರಿ, ಹಣಮಂತ ತುಮಕೂರಕರ್​, ಲಕ್ಕಪ್ಪ ಜವಳಿ, ಮಲ್ಲಿಕಾರ್ಜುನ ಚಟ್ನಳ್ಳಿ, ಅಬ್ದುಲ್​ ರಹೀಮ್​ ಕೆರೂರ, ಡಾ.ಜಯಶ್ರೀ ರೆಡ್ಡಿ, ಲತಾ ಚವ್ಹಾಣ, ಲಕ್ಷಿ$್ಮ ಕವಳೆ, ಅನುರಾಧಾ ಹೂಗಾರ ಇತರರಿದ್ದರು. 
ರಾಜ್ಯ

ಮಹಿಳಾ ದಿನಾಚರಣೆ ಸಾಧಕರಿಗೆ ಸತ್ಕಾರ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಮಹಿಳಾ ಪರ ಜನಜಾಗೃತಿ ಸಮಿತಿ
ಕಲಬುರಗಿ: ನಗರದ ಕಲಾ ಮಂಡಳದಲ್ಲಿ ಕರ್ನಾಟಕ ಮಹಿಳಾ ಪರ ಜನಜಾಗೃತಿ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನ ಸಮಾರಂಭ ಸೋಮವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥಾಪಕಿ ಹಾಗೂ ರಾಜ್ಯಾಧ್ಯಕ್ಷೆ ಜಗದೇವಿ ಹೆಗಡೆ, ಮಹಿಳೆಯರು ಸಮಾಜದ ಎಲ್ಲ ೇತ್ರಗಳಲ್ಲಿ ಸಾಧನೆಗೈದು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಮಹಿಳೆಯರ ಸಬಲೀಕರಣವೇ ಸಮಗ್ರ ಸಮಾಜದ ಪ್ರಗತಿಯ ಆಧಾರವಾಗಿದ್ದು, ಇಂತಹ ಕಾರ್ಯಕ್ರಮಗಳು ಮಹಿಳೆಯರಿಗೆ ಮತ್ತಷ್ಟು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಗ್ರಾಮೀಣ ಕೈಗಾರಿಕಾ ಕೇಂದ್ರದ ಉಪನಿರ್ದೇಶಕಿ ರೇಖಾ ಮ್ಯಾಗೇರಿ, ಆದಿಜಾಂಬವ ಸಂದ ಅಧ್ಯಕ್ಷ ಹಣಮಂತ ತುಮಕೂರಕರ್​, ಶೋಷಿತ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಲಕ್ಕಪ್ಪ ಜವಳಿ, ಮಲ್ಲಿಕಾರ್ಜುನ ಚಟ್ನಳ್ಳಿ, ಅಬ್ದುಲ್​ ರಹೀಮ್​ ಕೆರೂರ, ಡಾ.ಜಯಶ್ರೀ ರೆಡ್ಡಿ, ಸಂಟನಾ ಉಪಾಧ್ಯೆ ಲತಾ ಚವ್ಹಾಣ, ಸಂಟನಾ ಕಾರ್ಯದರ್ಶಿ ಲಕ್ಷಿ$್ಮ ಕವಳೆ ಹಾಗೂ ರಾಜ್ಯ ಖಜಾಂಚಿ ರಾಣಿ ಹೂಗಾರ ಇತರರಿದ್ದರು.
ಸಮಿತಿಯ ಜಿಲ್ಲಾ ಅಧ್ಯೆ ಅನುರಾಧಾ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ೇತ್ರಗಳಲ್ಲಿ ಸಾಧನೆಗೈದ ಸುಮಾ ಕವಾಲ್ದಾರ, ಅನಿತಾ ಚಿಂಚೋಳಿ, ಗುಂಡಮ್ಮ ಜನಿವಾರ, ಪದ್ಮಾ ಮಾಲಿಪಾಟೀಲ, ಮಂಗಲಾ ಸಪ್ಪಗೋಳ, ಸಿದ್ದಣ್ಣ ಸಜ್ಜನ, ನರಸಮ್ಮ ಅವಂಟೆ, ಉಷಾ ಪಂಡಿತ, ಜಗನ್ನಾಥ ಕಟ್ಟಿಮನಿ, ವಿದ್ಯಾ ತೆನಹಾಳಿ, ರೇಣುಕಾ ಮಠಪತಿ, ನಿಂಗಣ್ಣ ಪೂಜಾರಿ, ಚಂದ್ರಕಲಾ ಹೂಗಾರ, ಮಹಾದೇವಪ್ಪ ಕವಳೆ, ಬಸವರಾಜ ಜವಳಿ, ಸಪ್ಪಾ ಭೂಪಾಲ ತೆಗನೂರ, ದೇವಿಂದ್ರಕುಮಾರ ಪಾಟೀಲ ಹಾಗೂ ಸುಂದರ ಸಾಗರ ಅವರನ್ನು ಸನ್ಮಾನಿಸಲಾಯಿತು. ಶಿಲ್ಪಾ ಹೆಗಡೆ ಸ್ವಾಗತ ಗೀತೆ ಹಾಡಿದರು. ಹಣಮಂತ ಕೊಂಗಂಡಿ ನಿರೂಪಿಸಿದರು. ಸುಸನ್ನಾ ಹೆಗಡೆ ವಂದಿಸಿದರು.