ಪ್ರಮುಖ ಮುಖ್ಯಾಂಶಗಳು
ಬೆಂಳೂರು : ಸಮಾಜದಲ್ಲಿಹೆಣ್ಣನ್ನು ಸಮಾನ ಗೌರವದಿಂದಕಾಣುವಂತಾಗಬೇಕು.ವರ್ಗ ಸಂಘರ್ಷದಬಗ್ಗೆ ಎಲ್ಲರೂ ದ್ವನಿ ಎತ್ತುವಂತಾಗಿ,ಜನ ಸಾಮಾನ್ಯರುಸಂವೇದನಾಶೀಲತೆಯನ್ನು ರೂಡಿಸಿಕೊಳ್ಳಬೇಕುಎಂದು ಕರ್ನಾಟಕ ಲೇಖಕಿಯರ ಸಂಘದಅದ್ಯಕ್ಷೆ ಡಾ.ಪಿ.ಸುನಂದಮ್ಮಹೇಳಿದರು.
ಕನ್ನಡಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿಆಯೋಜಿಸಿದ್ದ 15ನೇಜಿಲ್ಲಾ ಚುಟುಕು ಸಾಹಿತ್ಯಸಮ್ಮೇಳನವನ್ನು ಉದ್ಘಾಟಿಸಿಮಾತನಾಡಿದರು.
ಡಾ.ಎಂ.ಆರ್.ವೆಂಕಟೇಶ್ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದಸಮ್ಮೇಳನದಲ್ಲಿ ಸುನಂದಮ್ಮ ಜಾನಪದಶೈಲಿಯ ಕೆಲವು ಚುಟುಕುಗಳನ್ನುವಾಚಿಸಿದರು.ಇಡೀ ದಿನ ಚುಟುಕುಕವಿಗೋಷ್ಠಿ,ಚುಟುಕು ಭಾರ್ಗವಪ್ರಶಸ್ತಿ ಪ್ರದಾನ,ಉಪನ್ಯಾಸ ಮತ್ತಿತರಕಾರ್ಯಕ್ರಮ ನಡೆಯಿತು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿಗಳು,ಕನ್ನಡ ಅಭಿವೃದ್ದಿಪ್ರಾದಿಕಾರದ ಮಾಜಿ ಅದ್ಯಕ್ಷರಾದಪ್ರೊ.ಎಸ್.ಜಿ.ಸಿದ್ದರಾಮಯ್ಯಮಾತನಾಡಿ, ಜನಸಾಮಾನ್ಯನ ಹೊಣೆಗಾರಿಕೆ, ಹೊಣಗೇಡಿತನದಿಂದಆಗುವ ಅನಾಹುತ,ಚುಟುಕು ಸಾಹಿತ್ಯದಪ್ರಾಮುಖ್ಯತೆಯನ್ನು ವಿವರಿಸಿದರು.ಜರಗನಹಳ್ಳಿಶಿವಶಂಕರ್‌ರವರ ಕೆಲವು ಹನಿಗವನಗಳನ್ನುಪ್ರಸ್ತಾಪಿಸಿ ಪ್ರಸಕ್ತ ಕಾಲಘಟ್ಟದವಾಸ್ಥವಿಕತೆಯನ್ನು ಸಿದ್ದರಾಮಯ್ಯತೆರೆದಿಟ್ಟರು.
ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದ ಸಾಹಿತಿಪ್ರೊ.ಕೆ.ಪಿ.ಪುತ್ತುರಾಯರುಮಾತನಾಡಿ, ಪ್ರಸ್ತುತಬೆಂಗಳೂರಿನಲ್ಲಿ ಕನ್ನಡ ಭಾಷೆಯಹಾಗೂ ಕನ್ನಡಿಗರ ಪರಿಸ್ಥಿತಿಯನ್ನುವಿಡಂಬನಾತ್ಮಕವಾಗಿ ವಿಶ್ಲೇಷಿಸಿ,ತಮ್ಮ ಕೆಲ ಹನಿಗವನಗಳಮೂಲಕ ಸಮಾಜದ ವ್ಯವಸ್ಥೆಯನ್ನುತೆರೆದಿಟ್ಟರು.
ಕನ್ನಡಸಾಹಿತ್ಯವು ಅನೇಕ ಪ್ರಕಾರಗಳನ್ನುತನ್ನ ತೆಕ್ಕೆಗೆ ತೆಗೆದುಕೊಂಡಿದೆ.ಅದರಲ್ಲಿ ಒಂದಾದಚುಟುಕು ಸಾಹಿತ್ಯವು ಅತ್ಯಂತಜನಪ್ರಿಯವಾಗಿದ್ದು, ಸಂಕ್ಷಿಪ್ತತೆ,ವ್ಯಂಗ್ಯ,ವಿಡಂಬನೆ,ಹಾಸ್ಯದ ಮೂಲಕಸಮಾಜದಲ್ಲಿ ಉತ್ತಮ ಸಂದೇಶನೀಡುತ್ತಿದೆ.ಚುಟುಕು ಸಾಹಿತ್ಯಹೆಚ್ಚು ಪ್ರಸಿದ್ಧವಾಗಲು ಅದರಸಂಕ್ಷಿಪ್ತತೆ ಮತ್ತು ನೇರವಂತಿಕೆಯೇಪ್ರಮುಖ ಕಾರಣ.