/ಔರಾದ್​ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಮನಗರ ಬಡಾವಣೆಯಲ್ಲಿ ಕುಡಿವ ನೀರಿಗೆ ಒತ್ತಾಯಿಸಿ ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ರತ್ನದಿಪ ಕಸ್ತೂರೆ, ಶಾಂತಾಬಾಯಿ ನಾಗುರೆ, ರಂಜನಾಬಾಯಿ, ಮಂಜುಳಾ ಲಾಧಾ, ಸೋನಿಕಾ ಕರಬಾಳೆ, ಕಸ್ತೂರಾಬಾಯಿ ಬೊರೆ,ಸುನೀತಾ, ಅಶ್ವಿನಿ, ವಾಮನರಾವ, ಮಾಶನಾ, ಆನಂದ ಇದ್ದರು. 
ರಾಜ್ಯ

ಕುಡಿವ ನೀರಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ಔರಾದ್​: ಪಟ್ಟಣದ ರಾಮನಗರ ಬಡಾವಣೆಯಲ್ಲಿ ಸುಮಾರು 8 ದಿನಗಳಿಂದ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಮಹಿಳೆಯರು, ಮಕ್ಕಳು ಗುರುವಾರ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಒಂದು ವಾರದಿಂದ ರಾಮನಗರ ಬಡಾವಣೆಯಲ್ಲಿ ನೀರಿಗಾಗಿ ಪರಿತಪಿಸುವ ಪ್ರಸಂಗ ಎದುರಾಗಿದೆ. ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕೂಡ ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಬೇಸಿಗೆ ಬಿರು ಬಿಸಿಲಿನಲ್ಲಿ ಒಂದು ಹನಿ ನೀರಿಗಾಗಿ ದಿನವೆಲ್ಲ ತಿರುಗಾಡುವ ಪರಿಸ್ಥಿತಿ ಎದುರಾಗಿದ್ದು, ಅಧಿಕಾರಿಗಳು ಶ್ರೀ ನೀರಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ರತ್ನದಿಪ ಕಸ್ತೂರೆ, ಶಾಂತಾಬಾಯಿ ನಾಗುರೆ, ರಂಜನಾಬಾಯಿ, ಮಂಜುಳಾ ಲಾಧಾ, ಸೋನಿಕಾ ಕರಬಾಳೆ, ಕಸ್ತೂರಾಬಾಯಿ ಬೊರೆ,ಸುನೀತಾ, ಅಶ್ವಿನಿ, ವಾಮನರಾವ್​, ಮಾಶನಾ, ಆನಂದ ಹಾಗೂ ಇತರರಿದ್ದರು.