ಸವದತ್ತಿಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶೃತಿ ವೈದ್ಯ ಉದ್ಘಾಟಿಸಿದರು. ಡಾ.ಮಾರುತಿ ಎಂ.ಡಾ.ಶಕುಂತಲಾ ಅಜ್ಜನ್ನವರ ಇತರರಿದ್ದರು.
ಸವದತ್ತಿ: ಸಮಾಜದಲ್ಲಿ ಮಹಿಳೆಯರ ಶಕ್ತಿ ಬೆಳೆಯಲು ಶಿಣವೇ ಪ್ರಮುಖ ಅಸ್ತ್ರವಾಗಿದ್ದು, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಮೂಲಕ ಎಲ್ಲ ೇತ್ರಗಳಲ್ಲೂ ಸಾಧನೆ ಮಾಡಬಹುದು ಎಂದು
ಶೃತಿ ವಿಶ್ವಾಸ ವೈದ್ಯ ಹೇಳಿದರು.
ನಗರದ ಕೆ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಮಹಿಳಾ ಕೋಶ ಮತ್ತು ಯುವ ರೆಡ್ ಕ್ರಾಸ್ ಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗಗಳಲ್ಲಿ ಆತ್ಮವಿಶ್ವಾಸದಿಂದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವುದೇ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶವಾಗಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಸಹ ಪ್ರಾಧ್ಯಾಪಕ ಡಾ.ದೇವತಾಗಸ್ತಿ ಉಪನ್ಯಾಸ ನೀಡಿದರು. ಪ್ರಾಚಾರ್ಯರಾದ ಡಾ.ಮಾರುತಿ ಎಂ., ಮಹಿಳಾ ಕೋಶ ಮತ್ತು ರೆಡ್ ಕ್ರಾಸ್ ಸಂಯೋಜಕ ಡಾ.ಶಕುಂತಲಾ ಎಚ್.ಅಜ್ಜಣ್ಣವರ ಮಾತನಾಡಿದರು.
ಡಾ.ಮಂಜುನಾಥ ಛಲವಾದಿ, ಪ್ರೊ.ಎಂ.ಜಿ. ಪುರಾಣಿಕಮಠ, ಪ್ರೊ.ಶಿವಾನಂದ ಹಲೋಳಿ, ವಿದ್ಯಾರ್ಥಿನಿ ಪ್ರತಿನಿಧಿ ವಿನೀತಾ ಹುಳಮನಿ, ಆಂತರಿಕ ದೂರು ಸಮಿತಿ ಸದಸ್ಯ ಬಸವರಾಜ ಆಯಟ್ಟಿ, ಡಾ.ಬಸವ್ವ ನಿಡಗುಂಡಿ, ಡಾ.ಎಂ.ಬಿ.ನಾಶಿಪುಡಿ, ಡಾ.ಕುಮಾರಸೋಮಲಿಂಗ ಬಾಳಿಕಾಯಿ ಹಾಗೂ
ಪ್ರೊ.ಸೌಮ್ಯ ಸಿ., ಸಿಡಿಸಿ ಸದಸ್ಯ ಬಸವರಾಜ ವರವನ್ನವರ,
ವನಜಾ ಸಾಬನ್ನವರ ಇತರರಿದ್ದರು.