Bus 
ರಾಜ್ಯ

ಸಾರಿಗೆ ಸಿಬ್ಬಂದಿಯೊಂದಿಗೆ ಮಹಿಳೆ ಅನುಚಿತ ವರ್ತನೆ

ಶ್ರೀರಂಗಪಟ್ಟಣ: ಮಹಿಳೆಯೊಬ್ಬರು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ.
ಸಾರಿಗೆ ಸಂಸ್ಥೆಯ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ಕುಣಿಗಲ್ ಡಿಪೋಗೆ ಸೇರಿದ ಬಸ್‌ನಲ್ಲಿ ಪ್ರಯಾಣ ಮಾಡಿ ಪಟ್ಟಣಕ್ಕೆ ಬಂದಿದ್ದ ಮಹಿಳೆ ಟಿಕೆಟ್ ವಿಚಾರಕ್ಕೆ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಸಮವಸ್ತ್ರ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋವನ್ನು ನಿಲ್ದಾಣದಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದು ವೈರಲ್ ಆಗಿದೆ. ಕೊನೆಗೆ ಸಿಬ್ಬಂದಿಯೇ ಮಹಿಳೆ ಎಂಬ ಕಾರಣಕ್ಕೆ ಆಕೆಯನ್ನು ಕ್ಷಮಿಸಿ ಕಳುಹಿಸಿದ್ದಾರೆ.
ಸಿಬ್ಬಂದಿಗಳೊಂದಿಗೆ ಈಕೆ ವಿಕೃತವಾಗಿ ನಡೆದುಕೊಂಡಿರುವ ಹೈಡ್ರಾಮದ ವಿಡಿಯೋ ಈಗ ಸಾಮಾಜಿಕ ಜಾಲತಾಣದೆಲ್ಲೆಡೆ ವೈರಲ್ ಆಗಿದ್ದು ಈಕೆ ಯಾರೆಂದು ತಿಳಿಯದಾಗಿದ್ದು, ಕೊನೆಗೆ ಸಿಬ್ಬಂದಿಗಳೇ ಮಾನವೀಯತೆ ಆಧಾರದಲ್ಲಿ ಕ್ಷಮಿಸಿದ್ದಾರೆ.