Woman dies after being electrocuted
ಚಿಂತಾಮಣಿ: ತಾಲೂಕಿನ ಗುಂಡ್ಲಹಳ್ಳಿಯಲ್ಲಿ ಬುಧವಾರ ವಿದ್ಯುತ್ ತಗುಲಿ ರತ್ನಮ್ಮ(43) ಎಂಬುವರು ಮೃತಪಟ್ಟಿದ್ದಾರೆ.
ಶೌಚಗೃಹ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಬುಧವಾರ ಮಧ್ಯಾಹ್ನ ಬೀಸಿದ ಜೋರಾದ ಗಾಳಿಯಿಂದ ತುಂಡಾಗಿ ಶೀಟ್ ಮೇಲೆ ಬಿದ್ದು ಶೌಚಗೃಹಕ್ಕೆ ಅಳವಡಿಸಿದ್ದ ಕಬ್ಬಿಣದ ಬಾಗಿಲಿಗೂ ವಿದ್ಯುತ್ ಪ್ರವಹರಿಸಿದೆ. ಈ ಬಗ್ಗೆ ಅರಿವಿಲ್ಲದ ರತ್ನಮ್ಮ ಶೌಚಗೃಹದ ಬಾಗಿಲನ್ನು ತೆಗೆಯಲು ಹೋದಾಗ ವಿದ್ಯುತ್ ತಗುಲಿ ಕುಸಿದು ಬಿದ್ದಿದ್ದಾರೆ.
ಕಿರುಚಾಟದ ಶಬ್ದ ಕೇಳಿಸಿ ಮಹಿಳೆ ಪತಿ ಶ್ರೀನಿವಾಸ್ ವಿದ್ಯುತ್ ತಂತಿಯನ್ನು ಪಕ್ಕಕ್ಕೆ ಸರಿಸಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದಾರೆ. ಆದರೆ, ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.