ರಾಮನಹಳ್ಳಿಯ ಮನೆಯಲ್ಲಿ ಕಳವು ಮಾಡಲಾಗಿದ್ದTheft ಚಿನ್ನದ ಒಡವೆಗಳನ್ನ ಪತ್ತೆ ಮಾಡಿ ವಶಕ್ಕೆ ಪಡೆದ ಬಿಡದಿ ಠಾಣೆಯ ಪೊಲೀಸ್ ನಿರೀಕ್ಷಕರಾದ ವಿಜಯಕುಮಾರ್, ಪಿಎಸ್‌ಐ ಅಣ್ಣಯ್ಯ ಇದ್ದರು.
ಬಿಡದಿ: ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಮಹಿಳಾ ಆರೋಪಿಯನ್ನು ಬಂಧಿಸುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಶ್ರೀನಿವಾಸಪುರ ನಿವಾಸಿ ಪವಿತ್ರಾ (32) ಬಂಧಿತೆ. ಈಕೆಯಿಂದ 22 ಲಕ್ಷ ಮೌಲ್ಯದ 152 ಗ್ರಾಂ ತೂಕದ ವಿವಿಧ ಚಿನ್ನದ ಒಡವೆ ವಶಕ್ಕೆ ಪಡೆಯಲಾಗಿದೆ. Theft
ಬಿಡದಿ ಠಾಣಾ ವ್ಯಾಪ್ತಿಯ ರಾಮನಹಳ್ಳಿಯಲ್ಲಿ ಜು.5ರಂದು ಗ್ರಾಮದ ರವಿ ಎಂಬುವವರ ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಬಗ್ಗೆ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಬಿಡದಿ ಠಾಣೆಯ ಪೊಲೀಸ್ ನಿರೀಕ್ಷಕರಾದ ವಿಜಯಕುಮಾರ್, ಪಿಎಸ್‌ಐ ಅಣ್ಣಯ್ಯ ಹಾಗೂ ಸಿಬ್ಬಂದಿಗೆ ಎಸ್‌ಪಿ ಆರ್.ಶ್ರೀನಿವಾಸ್‌ಗೌಡ ಅಭಿನಂದಿಸಿದ್ದಾರೆ.