ಮೂಡಲಗಿ ಪಟ್ಟಣದಲ್ಲಿ ಅಂದಾಜು 2.30 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಶಂಕುಸ್ಥಾಪನೆ ನೆರವೇರಿಸಿದರು. ಪ್ರಕಾಶ ಗುಡುಮೆ, ರವೀಂದ್ರ ಸೋನವಾಲಕರ ಇತರರಿದ್ದರು.
ಮೂಡಲಗಿ: ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಮೂಡಲಗಿಯಲ್ಲಿ ಭೂಮಿಪೂಜೆ ಮಾಡಲಾಗಿದ್ದು, ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದ ದನಗಳ ಪೇಟೆ (ಪಟಗುಂದಿ ರಸ್ತೆ) ಬಳಿ ಅಂದಾಜು 2.30 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮೂಡಲಗಿ ತಾಲೂಕು ಘೋಷಣೆಯಾದ ಬಳಿಕ ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭವಾಗಿವೆ. ಮೂಡಲಗಿಗೆ ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕೆಂದು ಎರಡ್ಮೂರು ಬಾರಿ ಅ-ಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಈಗ ಸರ್ಕಾರ ಒಪ್ಪಿಗೆ ನೀಡಿದೆ. ಸ್ಥಳಿಯ ಪುರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ 1.29 ಎಕರೆ ನಿವೇಶನ ನೀಡಲಾಗಿದೆ. ವಿವಿಧ ಕಾಮಗಾರಿಗಳಿಗೆ ಸುಮಾರು 9.09 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.
ವಿವಿಧ ಕಾಮಗಾರಿಗೆ ಭೂಮಿಪೂಜೆ: ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ 1.51 ಕೋಟಿ ರೂ. ವೆಚ್ಚದ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದ ಹೆಚ್ಚುವರಿ ಕೊಠಡಿ ನಿರ್ಮಾಣ ಹಾಗೂ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಸುಮಾರು 5.28 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಟಕ ನಿರ್ಮಾಣ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು.
ತಹಸೀಲ್ದಾರ್ ಪ್ರಕಾಶ ಗುಡುಮೆ, ಮುಖಂಡರಾದ ರವೀಂದ್ರ ಸೋನವಾಲಕರ, ಅನ್ವರ್ ನದ್ಾ, ರಾಮಣ್ಣ ಹಂದಿಗುಂದ, ರವಿ ಸಣ್ಣಕ್ಕಿ, ಡಾ.ಎಸ್.ಎಸ್.ಪಾಟೀಲ, ಬಿಜೆಪಿ ಮಂಡಲ ಅಧ್ಯ ಮಹಾದೇವ ಶೆಕ್ಕಿ, ಅಜೀಜ್ ಡಾಂಗೆ, ಸಂತೋಷ ಸೋನವಾಲಕರ, ಈರಪ್ಪ ಬನ್ನೂರ, ಹನುಮಂತ ಗುಡ್ಲಮನಿ, ರವಿ ನೇಸೂರ, ಪ್ರಶಾಂತ ನಿಡಗುಂದಿ, ಮರೆಪ್ಪ ಮರೆಪ್ಪಗೋಳ, ಜಯಾನಂದ ಪಾಟೀಲ, ಪ್ರಕಾಶ ಮಾದರ, ವಕೀಲ ಲಕ್ಷ$್ಮಣ ಅಡಿಹುಡಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಭೂಸೇನಾ ನಿಗಮದ ಎಇ ಆರ್.ಪಿ.ನಾರಾಯಣಕರ, ಅಗ್ನಿಶಾಮಕ ಎಇಇ ಬಸವರಾಜ ಬಿ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಪ್ರ) ಅಶೋಕ ಮಲಬನ್ನವರ, ಅಗ್ನಿಶಾಮಕ ಠಾಣೆ ಆರ್ಎ್ಒ ರಂಗನಾಥ, ಗುತ್ತಿಗೆದಾರ ಅಶೋಕ ಹಸರಂಗಿ ಇತರರಿದ್ದರು.