ಯಾದಗಿರಿಯಲ್ಲಿ ಮಂಗಳವಾರ ಸಾರಥ್ಯ ಒಕ್ಕೂಟ ಸಂಟನೆ, ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆ ಪದಾಧಿಕಾರಿಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಎಸಿಡಿ ರಮೇಶ ಕೋಲಾರ ಅವರಿಗೆ ಮನವಿ ಸಲ್ಲಿಸಿದರು. ಕೃಷ್ಟಿರಾಜ್, ಮಾಯಾ ಎಸ್.ಆರ್.ನಾಯಕ, ಪ್ರಿಯಾಂಕ್, ತ್ರಿಮೂರ್ತಿ, ಅಂಕಿತಾ, ಮಂಜುಳಾ, ಚಾಂದಿನಿ ಇತರರಿದ್ದರು.
- ಸಾರಥ್ಯ ಒಕ್ಕೂಟ ರಾಜ್ಯ ಸಂಟನೆ ಆಗ್ರಹ
- ಉದ್ಯೋಗ ನೀಡಿದರೆ ಬಿಕ್ಷೆ ಬೇಡುವುದಿಲ್ಲ
ಯಾದಗಿರಿ: ಕಳೆದ ವರ್ಷ ಮಾರ್ಚ್ನಲ್ಲಿ ಕೇಂದ್ರ ಸರ್ಕಾರ ಪ್ರಾಸ್ತಾಪಿಸಿದ ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ತಿದ್ದುಪಡಿ ಮಸೂದೆಯನ್ನು ಬಲವಾಗಿ ವಿರೋಧಿಸಿರುವ ಸಿಎಸ್ ಜಿಎಂಆರ್ ಕೋಯಿಲೇಷನ್ ಮತ್ತು ಸಾರಥ್ಯ ಒಕ್ಕೂಟ ಸಂಟನೆ ಪದಾಧಿಕಾರಿಗಳು, ಕೂಡಲೇ ಇದನ್ನು ವಾಪಸ್ ಪಡೆಯಬೇಕು ಮತ್ತು ಎಲ್ಲೆಂದರಲ್ಲಿ ನಿಂತು ಬಿಾಟನೆ ಮಾಡಬಾರದು ಎಂದು ಜಿಲ್ಲಾಡಳಿತ ಹೊರಡಿಸಿರುವ ಆದೇಶ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಟನೆ ರಾಜ್ಯ ಮುಖಂಡ ಕೃಷ್ಟಿರಾಜ್ ಬೆಂಗಳೂರು, ಟ್ರಾನ್ಸ್ ಜೆಂಡರ್ ಎಂಬ ಪದಕ್ಕೆ ಸೀಮಿತ ಮತ್ತು ತಪ್ಪಾದ ವ್ಯಾಖ್ಯಾನ ನೀಡಲಾಗಿದೆ. ಹಲವಾರು ಲಿಂಗ ವೈವಿದ್ಯತೆಯ ಗುರುತು ಹೊರತುಪಡಿಸಲಾಗಿದೆ. ವೈದ್ಯಕಿಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಮೂಲಕ ಮಾನವ ಹಕ್ಕುಗಳ ಉಲ್ಲಂನೆ ಮಾಡಲಾಗಿದೆ ಎಂದು ಅವರು ದೂರಿದರು.
ಸಂವಿಧಾನದ ವಿಧಿಗಳು 14,19 ಮತ್ತು 21 ಉಲ್ಲಂನೆ ಸಾಧ್ಯತೆಗಳಿವೆ. ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಲು ಹೊರಟಿರುವುದು ಖಂಡನೆ ಎಂದರು. ಲಿಂಗ ಗುರುತಿನ ಸ್ವಯಂ ನಿರ್ಧಾರ ಹಕ್ಕು ಉಳಿಸಬೇಕು. ಈ ತಿದ್ದುಪಡಿ ಮಸೂದೆಯನ್ನು ತಣ ಹಿಂತೆದುಕೊಳ್ಳಬೇಕು. ನೀತಿ ರೂಪಿಸುವ ಎಲ್ಲ ಹಂತಗಳಲ್ಲಿ ಸಮುದಾಯದೊಂದಿಗೆ ಸಾರ್ಥಕ ಸಮಾಲೋಚನೆ ನಡೆಸಬೇಕು. ಕಾನೂನುಗಳು ಸಂವಿಧಾನ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕು ಮಾನದಂಡಗಳಿಗೆ ಅನುಗುಣವಾಗಿರಬೇಕು. ಸಂವಿಧಾನ ಮೌಲ್ಯಗಳನ್ನು ಕಾಪಾಡಬೇಕು ಎಂದು ವರು ಒತ್ತಾಯಿಸಿದರು.
ಸಾರಥ್ಯ ಸಂಟನೆ ಪದಾಧಿಕಾರಿ ಚಾಂದಿನಿ, ತ್ರಿಮೂರ್ತಿ, ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆ ಪದಾಧಿಕಾರಿಗಳಾದ ಮಾಯಾ ನಾಯಕ, ಪ್ರಿಯಾಂಕ್, ಅಂಕಿತಾ, ಮಂಜುಳಾ, ಪುಂಡಲಿಕ್ ಸೇರಿ ಇತರರಿದ್ದರು. ನಂತರ ನೇತಾಜಿ ಸರ್ಕಲ್ನಲ್ಲಿ ಬೇಡಿಕೆಗಳಿಗೆ ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದ ಇವರು, ಜಿಲ್ಲಾಧಿಕಾರಿ ಕಚೇರಿ ತೆರಳಿ ಎಡಿಸಿ ರಮೇಶ ಕೋಲಾರ ಅವರಿಗೆ ಮನವಿಪತ್ರ ಸಲ್ಲಿಸಿದರು. 150ಕ್ಕೂ ಹೆಚ್ಚು ಆಶಾಕಿರಣ ಸೇವಾ ಸಂಸ್ಥೆ ಕಾರ್ಯಕರ್ತರು ಭಾಗವಹಿಸಿದ್ದರು.
ನಮ್ಮ ಸ್ಥಿತಿ ನೋಡಿ ನೋಟಿಸ್ ನೀಡಿ
ಟ್ರಾನ್ಸ್ ಜೆಂಡರ್ಗಳು ಎಲ್ಲೆಂದರಲ್ಲಿ ನಿಂತು, ಹೋಗಿ ಬಿೆ ಬೇಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸುವುದಾಗಿ ತಮಗೆ ನೋಟಿಸ್ ನೀಡಿದ್ದನ್ನು ಖಂಡಿಸಿರುವ ಆಶಾ ಕಿರಣ ಸೇವಾ ಸಂಸ್ಥೆ ಸಂಸ್ಥಾಪಕಿ ಮಾಯಾ ಎಸ್.ಆರ್.ನಾಯಕ, ಕಾರ್ಯದರ್ಶಿ ಪ್ರಿಯಾಂಕಾ ಅವರು, ಜಿಲ್ಲಾಡಳಿತ ತಮಗೆ ಸೂಕ್ತ ಕೆಲಸ ನೀಡಿದರೆ ಆ ಕೆಲಸ ಬಿಡುತ್ತೇವೆ ಎಂದಿದ್ದಾರೆ. ನಾವೆಲ್ಲರೂ ಹತ್ತನೇಯಿಂದ ಸ್ನಾತಕೊತ್ತರ ಪದವಿಯವರೆಗೂ ಶಿಣ ಪಡೆದಿದ್ದೇವೆ. ನಮ್ಮ ಶಿಣಕ್ಕೆ ತಕ್ಕಂತೆ ಕೆಲಸ ನೀಡಿದರೆ ನಾವೇಕೇ ಬೀೆ ಬೇಡುತ್ತೆವೆ. ಮೊದಲು ನಮ್ಮ ಸ್ಥಿತಿ, ಗತಿ ಅರ್ಥ ಮಾಡಿಕೊಳ್ಳಬೇಕು, ನಂತರ ಇಂತಹ ಪತ್ರ, ನೋಟಿಸ್ ನೀಡಿದರೇ ಅದಕ್ಕೊಂದು ಅರ್ಥ ಬರುತ್ತದೆ ಎಂದು ಹೇಳಿದರು.