Wire fencing is mandatory for farmers' agricultural fields.
ಟೇಕಲ್: ರೈತರು ನಿರ್ಮಿಸಿಕೊಂಡ ಕೃಷಿಹೊಂಡಕ್ಕೆ ತಂತಿ ಬೇಲಿ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಲು ಸುರಕ್ಷತೆಗಾಗಿ ಕಡ್ಡಾಯವಾಗಿ ತಂತಿಬೇಲಿ ನಿರ್ಮಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಿ. ಚಂದ್ರಪ್ಪ ತಿಳಿಸಿದರು.
ಮಾಲೂರು ತಾಲೂಕು ಟೇಕಲ್ ಹೋಬಳಿಯ ರೈತರ ಕೃಷಿ ಹೊಂಡಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಂತರ್ಜಲಮಟ್ಟ ಕಡಿಮೆ ಇದ್ದು, ಬರುವ ಸ್ವಲ್ಪ ನೀರನ್ನು ಕೃಷಿಹೊಂಡದಲ್ಲಿ ಸಂಗ್ರಹಣೆ ಮಾಡಿ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರು ಹರಿಸಿಕೊಳ್ಳಬಹುದು. ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ಸರ್ಕಾರದ ಸಹಾಯಧನದಲ್ಲಿ ನೀಡುತ್ತಿದೆ ಎಂದರು.
ಮಾಲೂರು ತಾಲೂಕಿನಲ್ಲಿ 2023 &24 ರಿಂದ 2025 &26ರ ವರೆಗೆ ಒಟ್ಟು 319 ಕೃಷಿಗೊಂಡ ನಿರ್ಮಿಸಿದ್ದು,ಶೇ.80 ರೈತರು ತಂತಿ ಬೇಲಿ ನಿರ್ಮಾಣ ಪೂರ್ಣಗೊಳಿಸಿದ್ದಾರೆ. ಉಳಿದ ಫಲಾನುಭವಿಗಳು ತಂತಿಬೆಲೆ ನಿರ್ಮಿಸಲು ಬೇಕಾದ ಕಂಬ ಮತ್ತು ಮುಳ್ಳುತಂತಿ ಖರೀದಿಸಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ಇಲಾಖೆಯಿಂದ ಸಹಾಯಧನ ಪಡೆದ ಎಲ್ಲ ಕೃಷಿ ಹೊಂಡಗಳು ಬೇಲಿ ತಂತಿ ಮುಕ್ತಾಯಗೊಳಿಸಲಿದ್ದಾರೆ ಎಂದರು.