ಕೆಂಭಾವಿ ಸಮೀಪದ ಏವೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ಬಸವೇಶ್ವರ ಹಾಗೂ ಸ್ವಯಂಭೂ ಸೋಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಓಪನ್ ಕ್ರಿಕೆಟ್ ಟೊರ್ನಮೆಂಟ್ಗೆ ರಾಜಾ ವೀರರಾಯಪ್ಪ ರಾಜುಧಣಿ ಉದ್ಘಾಟಿಸಿದರು. ಯಂಕಾರಡ್ಡಿ ಪಾಟೀಲ್, ಗುಂಡು ಆರ್. ಪಾಟೀಲ್, ಹಣಮಯ್ಯ ಗುತ್ತೇದಾರ್ ಇದ್ದರು.
ಕೆಂಭಾವಿ: ಯಾವುದೇ ಕ್ರೀಡೆಯಲ್ಲಿ ಸೋಲು&ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾಗಿದೆ ಎಂದು ಹಿರಿಯ ಮುಖಂಡ ರಾಜಾ ವೀರರಾಯಪ್ಪ ರಾಜುಧಣಿ ಹೇಳಿದರು.
ಏವೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ಬಸವೇಶ್ವರ ಹಾಗೂ ಸ್ವಯಂಭೂ ಸೋಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಓಪನ್ ಕ್ರಿಕೆಟ್ ಟೊರ್ನಮೆಂಟ್ಗೆ ಚಾಲನೆ ನೀಡಿ ಮಾತನಾಡಿದರು.
ಯುವಕರಲ್ಲಿನ ಕ್ರೀಡಾ ಉತ್ಸಾಹವನ್ನು ಅಭಿನಂದಿಸುತ್ತೇನೆ. ಎಲ್ಲರೂ ಕ್ರೀಡೆಯಲ್ಲಿ ಸೋಲು&ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.
ಯಂಕಾರಡ್ಡಿ ಪಾಟೀಲ್, ಗುಂಡು ಆರ್. ಪಾಟೀಲ್, ಹಣಮಯ್ಯ ಗುತ್ತೇದಾರ್, ಜಟ್ಟೆಪ್ಪ ಟಣಕೇದಾರ, ಭಾಸ್ಕರ್ಗೌಡ ಯಾಳಗಿ, ಜಟ್ಟಿಪ್ಪ ಮೇಸ್ತಿ$ ಹವಲ್ದಾರ, ಬಸವರಾಜ ಟಣಕೇದಾರ, ಬಸವರಾಜ, ದವಲಸಾಬ ಪೈಲ್ವಾನ್, ಸೋಮಶೇಖರ ಹಿರೇಮಠ ಇತರರಿದ್ದರು.