Wings for Life World Run: Over 8,000 people registered
ಬೆಂಗಳೂರು: “ಓಡಲು ಸಾಧ್ಯವಾಗದವರಿಗಾಗಿ ಓಟ” ಎಂಬ ಮಾನವೀಯ ಸಂದೇಶದೊಂದಿಗೆ ರೆಡ್ ಬುಲ್ ವತಿಯಿಂದ ಆಯೋಜಿಸಲಾದ “ವಿಂಗ್ಸ್ ಫಾರ್ ಲೈಫ್ ವರ್ಲ್ಡ್ ರನ್” ದೇಶದಾದ್ಯಂತ ಭರ್ಜರಿಯಾಗಿ ನಡೆಯಿತು. ಭಾರತದಲ್ಲಿ 19 ಆಯೋಜಿತ ಆಪ್ ರನ್‌ಗಳಲ್ಲಿ 8000ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡು ಭಾಗವಹಿಸಿದರು.
ಬೆಂಗಳೂರಿನ ಡೆಪೋ 18ರ ಮೇನ್ ಟರ್ಫ್‌ನಲ್ಲಿ ನಡೆದ ಆಯೋಜಿತ ಆಪ್ ರನ್‌ನಲ್ಲಿ 1100ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿ ವಿಶೇಷತೆ ಮೆರೆದರು. ಜಗತ್ತಿನಾದ್ಯಂತ ಒಂದೇ ಸಮಯದಲ್ಲಿ ನಡೆದ ಈ ಓಟವು ಭಾರತೀಯ ಕಾಲಮಾನ ಸಂಜೆ 4:30ಕ್ಕೆ ಆರಂಭಗೊಂಡಿತು. ಮೈದಾನದಲ್ಲಿನ ಓಟಗಾರರ ಜೊತೆಗೆ, ವಿಂಗ್ಸ್ ಫಾರ್ ಲೈಫ್ ವರ್ಲ್ಡ್ ರನ್ ಆಪ್ ಮೂಲಕ ಅನೇಕರು ವರ್ಚುವಲ್ ಆಗಿಯೂ ಭಾಗವಹಿಸಿದರು.
ರೆಡ್ ಬುಲ್ ವತಿಯಿಂದ ಆಯೋಜಿಸಲಾದ ಜಾಗತಿಕ “ವಿಂಗ್ಸ್ ಫಾರ್ ಲೈಫ್ ವರ್ಲ್ಡ್ ರನ್” ಆಪ್ ರನ್‌ನಲ್ಲಿ ಬೆಂಗಳೂರಿನಲ್ಲಿ ಅನೇಕ ಓಟಗಾರರು ಭಾಗವಹಿಸಿದರು. ಸ್ಪೈನಲ್ ಕಾರ್ಡ್ ಗಾಯಗಳ ಸಂಶೋಧನೆಗಾಗಿ ನೋಂದಣಿ ಶುಲ್ಕ ಮತ್ತು ದೇಣಿಗೆಯ 100 ಪ್ರತಿಶತವನ್ನು ಬಳಸುವ ಉದ್ದೇಶದೊಂದಿಗೆ ಈ ಜಾಗತಿಕ ಓಟವನ್ನು ಆಯೋಜಿಸಲಾಗಿತ್ತು.