ಹುಲಸೂರು ತಾಲೂಕಿನ ದೇವನಾಳ ಗ್ರಾಮದ ರಸ್ತೆ ಬದಿ ಕುಡಿಯುವ ನೀರಿಗಾಗಿ ಕಾಯುತ್ತಿರುವ ಮಂಗಗಳು.
- ಹೆಚ್ಚುತ್ತಿರುವ ತಾಪಮಾನ
- ಹಳ್ಳಿಗಳತ್ತ ಮುಖ ಮಾಡಿದ ಮಂಗಗಳು ನೀರಿಲ್ಲದೆ ವನ್ಯಜಿವಿಗಳ ಪರದಾಟ
ಹುಲಸೂರು: ಎರಡು ತಿಂಗಳಿಂದ ರಾಜ್ಯಾದ್ಯಂತ ತಾಪಮಾನ ಹೆಚ್ಚಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತ ಸಾಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದ್ದರಿಂದ ವನ್ಯಜಿವಿಗಳು ಸಂಕಷ್ಟಕ್ಕೆ ಸಿಲುಕಿವೆ.
ದಾಹ ತೀರಿಸಿಕೊಳ್ಳಲು ತಿರುಗಾಡುತ್ತಿರುವ ವನ್ಯಜಿವಿಗಳು ಹೊಲ&ಗದ್ದೆಗಳಲ್ಲಿ ತಿನ್ನಲು ಆಹಾರ, ಕುಡಿಯಲು ನೀರಿಲ್ಲದೆ ಗ್ರಾಮಗಳತ್ತ ವಲಸೆ ಬರುತ್ತಿವೆ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದರಿಂದ ಹೊಲದಲ್ಲಿನ ತೆರೆದ ಬಾವಿ, ಕೊಳವೆ ಬಾವಿಗಳು ಬತ್ತಿದ್ದದ್ದರಿಂದ ಜಾನುವಾರು ಹಾಗೂ ವನ್ಯಪ್ರಾಣಿಗಳಿಗೆ ತಿನ್ನಲು ಆಹಾರ ಇಲ್ಲದಂತಾಗಿದೆ. ಹೀಗಾಗಿ ಆಹಾರ ಮತ್ತು ನೀರು ಅರಸಿ ಮರಿ ಮಂಗಗಳೊಂದಿಗೆ ಹಳ್ಳಿಗಳತ್ತ ಮುಖ ಮಾಡುತ್ತಿವೆ.
ಕೃಷ್ಣಮೃಗಗಳು ಆಹಾರ ಮತ್ತು ನೀರು ಇಲ್ಲದೆ ಹೊಲದಲ್ಲಿನ ತೆರೆದ ಬಾವಿ ಹತ್ತಿರ ರೈತರು ತಮ್ಮ ಜಾನುವಾರುಗಳಿಗೆ ಕುಡಿಯಲು ಸಂಗ್ರಹಿಸಿದ್ದ ಅಲ್ಪ ಸ್ವಲ್ಪ ನೀರು ಕಂಡು ಸುತ್ತಮುತ್ತ ಓಡಾಡುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಮಳೆಗಾಲ ಪ್ರಾರಂಭವಾಗಲು ಒಂದು ತಿಂಗಳಿದೆ. ಅಲ್ಲಿವರೆಗೆ ಪ್ರಾಣಿಗಳು ನೀರಿನ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಕು ಪ್ರಾಣಿಗಳಿಗೆ ತಿನ್ನಲು ಆಹಾರ ಮತ್ತು ಕುಡಿಯಲು ನೀರು ಅಲ್ಪಸ್ವಲ್ಪ ಸಿಗುತ್ತಿದೆ. ಆದರೆ ಜಾನುವಾರು, ಕೃಷ್ಣಮೃಗ, ಮಂಗ, ನವಿಲು ಸೇರಿ ವಿವಿಧ ಪಗಳಿಗೆ ಕುಡಿಯಲು ನೀರು ಇಲ್ಲದೆ ಪರದಾಡುತ್ತಿವೆ.
"
ಜಗದ್ಗುರು ಶ್ರೀ ರಾಮಾನಂದಚಾರ್ಯ, ಶ್ರೀ ನರೇಂದ್ರಚಾರ್ಯ ಮಹಾರಾಜ ಸೇವಾ ಸಮಿತಿ ಸದಸ್ಯರಿಂದ ರೈತರಾದ ಚನ್ನಪ್ಪ ಭೋಪಳೆ, ಶಿವಾಜಿ ಭುಸಾರೆ, ಸಂಜು ಕಾಳೆ ಹೊಲದಲ್ಲಿ ವನ್ಯಪ್ರಾಣಿ ಹಾಗೂ ಪಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹುಲಸೂರು ಭಾಗದಲ್ಲಿ ವನ್ಯಜಿವಿಗಳ ಸಂಖ್ಯೆ ಹೆಚ್ಚು ಇರುವುದರಿಂದ ಸಾಕಷ್ಟು ಕಡೆ ನೀರಿನ ವ್ಯವಸ್ಥೆ ಮಾಡುವ ಅಗತ್ಯವಿದೆ. ನಮ್ಮ ಸತ್ಸಂಗದ ಸದಸ್ಯರ ಜತೆ ಸೇರಿ ಹೆಚ್ಚೆಚ್ಚು ನೀರಿನ ಹೊಂಡ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು.
— > ದಿಲೀಪ ವಾಲೆ ಸತ್ಸಂಗ ಪ್ರಮುಖ ಹುಲಸೂರು
"
ಉಷ್ಣಾಂಶ ಹೆಚ್ಚಾಗುತ್ತಿದ್ದರಿಂದ ಯಾರಿಗೂ ಏನೂ ತೋಚದಂತಾಗಿದೆ. ಮನುಷ್ಯ ಹೇಗಾದರೂ ಮಾಡಿ ನೀರಿನ ದಾಹ ತೀರಿಸಿಕೊಳ್ಳುತ್ತಾನೆ. ಆದರೆ ವನ್ಯಪ್ರಾಣಿ ಮತ್ತು ಜಾನುವಾರು, ಪಶು&ಪಗಳಿಗೆ ಕುಡಿಯಲು ನೀರು ಇಲ್ಲದೆ ತೊಂದರೆ ಅನುಭವಿಸುತ್ತಿವೆ. ಸಾರ್ವಜನಿಕರು ಪ್ರಾಣಿಗಳ ಸಮಸ್ಯೆ ಅರಿತು ನೀರಿನ ವ್ಯವಸ್ಥೆ ಮಾಡಬೇಕು.
— > ಪ್ರವಿಣ ಕಾಡಾದಿ ತಾಲೂಕು ಅಧ್ಯ, ಜಾಗತಿಕ ಲಿಂಗಾಯತ ಮಹಾಸಭಾ ಹುಲಸೂರು