ಆನೇಕಲ್ : ಪತಿ ಕೊಟ್ಟಿದ್ದ ಪಾದರಸದ ಇಂಜೆಕ್ಷನ್ನಿಂದ ತೀವ್ರ ಅನಾರೋಗ್ಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅತ್ತಿಬೆಲೆ ನಿವಾಸಿ ವಿದ್ಯಾ(37)ಸೋಮವಾರ ಚಿಕಿತ್ಸೆ ಲಿಸದೆ ಕೊನೆಯುಸಿರೆಳೆದಿದ್ದಾರೆ.
ಚಿನ್ನ ಕರಗಿಸಲು ಬಳಸುವ ಪಾದರಸವನ್ನು ಇಂಜೆಕ್ಷನ್ ಮೂಲಕ ತೊಡೆಗೆ ನೀಡಿದರು ಎಂದು ಪತಿ ಬಸವರಾಜು ಹಾಗೂ ಮಾವನ ವಿರುದ್ಧ ಸಾಯುವ ಮುನ್ನ ವಿದ್ಯಾ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪತಿ ಬಸವರಾಜುನನ್ನು ಬಂಧಿಸಿ ಅತ್ತಿಬೆಲೆ ಠಾಣೆ ಇನ್ಸ್ಪೆಕ್ಟರ್ ರಾವ್ಗೌಡ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಲ್ಯಾಬ್ ಒಂದರಲ್ಲಿ ಕೆಲಸ ಮಾಡುವ ಟೆಕ್ನಿಷಿಯನ್ ದಂಪತಿ ಇದಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಫೆ.27ರಂದು ಬೆಳಗ್ಗೆ ಬಲತೊಡೆಯಲ್ಲಿ ಊತ ಕಾಣಿಸಿಕೊಂಡಿತ್ತು. ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ, ಮಾ.7ರಂದು ಅತ್ತಿಬೆಲೆ ಸರ್ಕಾರಿ ವೈದ್ಯರ ಸೂಚನೆ ಮೇರೆಗೆ ಅತ್ತಿಬೆಲೆ ಆಕ್ಸ್ರ್ಡ್ ಆಸ್ಪತ್ರೆಗೆ ತೆರಳಿದಾಗ ಪಾದರಸದ ಅಂಶ ಸೇರಿರುವುದು ಗೊತ್ತಾಗಿದೆ ಎಂದು ವಿದ್ಯಾ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪತಿ ಹಾಗೂ ಮಾವ ಮರಿಸ್ವಾಮಾಚಾರಿ ವಿರುದ್ಧ ದೂರು ದಾಖಲಾಗಿದೆ. ನನ್ನದೇನು ತಪ್ಪಿಲ್ಲ ಎಂದ ಪತಿ: ಕೊನೆಯ ದಿನದವರೆಗೂ ಆಕೆಯ ಜತೆಗೆ ನಾನು ಇದ್ದೆ. ಯಾವುದೇ ಇಂಜೆನ್, ಮಾದಕ ಇಂಜೆನ್ ನೀಡಿಲ್ಲ ಎಂದು ಪತಿ ಬಸವರಾಜು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಮ್ಯಾಟ್ರಿಮೋನಿ ಮೂಲಕ ಮದುವೆ : 2020ರಲ್ಲಿ ಮ್ಯಾಟ್ರಿಮೋನಿ ಮೂಲಕ ವಿದ್ಯಾ ಪರಿಚಯವಾಗಿ ಎರಡು ಕುಟುಂಬದವರು ಮಾತುಕತೆ ನಡೆಸಿ ಮದುವೆ ಮಾಡಿದ್ದರು, ಶಿವಮೊಗ್ಗ ಮೂಲದ ವಿದ್ಯಾ ಆನೇಕಲ್ ತಾಲೂಕಿನ ಅತ್ತಿಬೆಲೆಯ ಪತಿಯ ಮನೆಯಲ್ಲಿ 5 ವರ್ಷದಿಂದ ವಾಸ ಇದ್ದರು.
2017ರಿಂದಲೇ ಕಾಯಿಲೆ ಇತ್ತು ಎಂದ ಪತಿ : ವಿದ್ಯಾ ಮದುವೆ ಆಗುವ ಮುನ್ನವೇ ಮಾನಸಿಕವಾಗಿ ಸರಿ ಇರಲಿಲ್ಲ. ಮದುವೆ ನಂತರವೂ ವರ್ತನೆ ಸರಿ ಇರುತ್ತಿರಲಿಲ್ಲ, ಮಗು ಆದ ನಂತರ ತೀರ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಪತಿ ಬಸವರಾಜು ಪೊಲೀಸರ ತನಿಖೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ವರದಿ ನಂತರ ಸಿಗಲಿದೆ ಮಾಹಿತಿ : ಒಂದು ವೇಳೆ ಇಂಜೆನ್ ಮೂಲಕ ಪಾದರಸವನ್ನು ದೇಹಕ್ಕೆ ನೀಡಿದ್ದರೆ ಬಹು ಅಂಗಾಂಗ ವೈಲ್ಯವಾಗಿ ವಿದ್ಯಾ ಮೃತಪಟ್ಟಿರುವ ಸಾಧ್ಯತೆ ಹೆಚ್ಚಾಗುವುದು. ಲ್ಯಾಬ್ ರಿಪೋರ್ಟ್ ಬಂದ ನಂತರವಷ್ಟೇ ಸಂಪೂರ್ಣ ಮಾಹಿತಿ ಗೊತ್ತಾಗಬೇಕಿದೆ.
ಏನಿದು ಪಾದರಸ? : ಚಿನ್ನದ ಅಂಗಡಿಗಳಲ್ಲಿ ಚಿನ್ನವನ್ನು ಕರಗಿಸಲು ಸಿಲ್ವರ್ ಬಣ್ಣ ಹೊಂದಿರುವ ಪಾದರಸವನ್ನು ಬಳಸುತ್ತಾರೆ. ಇದನ್ನು ಮನುಷ್ಯನ ದೇಹಕ್ಕೆ ನೇರವಾಗಿ ಇಂಜೆನ್ ಮೂಲಕ ನೀಡಲು ಸಾಧ್ಯವಿಲ್ಲ. ಬಿಸಿ ನೀರಿನಲ್ಲಿ ಹಾಕಿ ಅದರ ಆವಿಯಲ್ಲಿ ಮಾತ್ರ ಇದನ್ನು ದೇಹಕ್ಕೆ ಪಡೆಯಲು ಸಾಧ್ಯ ಎನ್ನಲಾಗಿದೆ.