ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಭೇಟಿ ನೀಡಿ ಕೊಲೆ ಪ್ರಕರಣದ ಮಾಹಿತಿ ಪಡೆದರು. ಡಿವೈಎಸ್ಪಿ ತಮ್ಮರಾಯಗೌಡ ಪಾಟೀಲ್, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸೋಮನಿಂಗ ಒಡೆಯರ್ ಇದ್ದರು.
- ಹಾಡಹಗಲೇ ಬಳೂರಗಿ ಮುಖ್ಯ ರಸ್ತೆಯಲ್ಲಿ ಕೃತ್ಯ
- ಸತ್ತ ಬಳಿಕವೂ ಮೈಮೇಲೆ ಕಾರು ಹಾಯಿಸಿದ ಕೀಚಕ
ಅಫಜಲಪುರ: ಪತಿಯೊಬ್ಬ ಪತ್ನಿಯ ಕತ್ತು ಸೀಳಿ ಭೀಕರವಾಗಿ ಹತ್ಯೆಗೈದಿದ್ದಲ್ಲದೆ ಮೈಮೇಲೆ ಕಾರು ಹಾಯಿಸಿ ವಿಕೃತಿ ಮೆರೆದ ಟನೆ ಬಳೂರಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ&150(ಇ) ಬೈಪಾಸ್ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.
ಮಹಾರಾಷ್ಟ್ರದ ಬಾರಾಮತಿ ಮೂಲದ ಶೈಲಾ(28) ಹತ್ಯೆಯಾದವಳು. ಅಯ ಕೊಲೆಗೈದ ಕೀಚಕ ಪತಿ. ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ಮಹಾರಾಜರ ದರ್ಶನ ಮಾಡಿಬರೋಣ ಎಂದು ಹೇಳಿ ಪತಿ, ಅತ್ತೆ&ಮಾವ ಸೇರಿ ಶೈಲಾಳನ್ನು ಕರೆತಂದಿದ್ದು, ಮಾರ್ಗಮಧ್ಯೆ ಪತ್ನಿಯನ್ನು ಅಕ್ಷಯ ಕೆಳಗಿಳಿಸಿ ಮೇಮೇಲೆ ಎರಗಿ ಕುಡುಗೋಲಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೆ ಕತ್ತು ಸೀಳಿ ಸಾಯಿಸಿದ್ದಲ್ಲದೆ ಕಾರನ್ನು ಮೃತದೇಹದ ಮೇಲೆ ಹಾಯಿಸಿ ವಿಕೃತಿ ಮೆರೆದಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹ ಎನಿಸಿದರೂ ಸಮಗ್ರ ತನಿಖೆ ನಂತರ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ.
ಎಸ್ಪಿ ಅಡ್ಡೂರು ಶ್ರೀನಿವಾಸುಲು, ಎಎಸ್ಪಿ ಮಹೇಶ ಮೇಣ್ಣನವರ್, ಡಿವೈಎಸ್ಪಿ ತಮ್ಮರಾಯಗೌಡ, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐಗಳಾದ ಸೋಮನಿಂಗ ಒಡೆಯರ್, ಸಂಗೀತಾ ಶಿಂಧೆ, ವಾತ್ಸಲ್ಯಾ ಬಿರಾದಾರ ಇತರರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.
ನಾಗರಿಕ ಸಮಾಜ ತಲೆತಗ್ಗಿಸುವಂಥ ದುರಂತ
ಗುರುವಾರ ಮಧ್ಯಾಹ್ನ 12ರ ಸುಮಾರಿಗೆ ನಡುರಸ್ತೆಯಲ್ಲಿ ಮಹಾರಾಷ್ಟ್ರ ಮೂಲದ ಅಯ ಎಂಬಾತ ಪತ್ನಿಯನ್ನು ಮಾರಕಾಸದಿಂದ ಹಲ್ಲೆಯೊಂದಿಗೆ ಕೊಲೆ ಮಾಡುತ್ತಿದ್ದರೂ ಯಾರೊಬ್ಬರೂ ರಕ್ಷಣೆಗೆ ಬಾರದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಸಾಕಷ್ಟು ಜನರು ಟನಾ ಸ್ಥಳದಲ್ಲಿ ತಿರುಗಾಡಿದರೂ ಯಾರೊಬ್ಬರೂ ಹತ್ತಿರ ಸುಳಿಯಲಿಲ್ಲ. ಬಹುತೇಕರು ಮೊಬೈಲ್ನಲ್ಲಿ ಸೆರೆಹಿಡಿಯುವ ಕೆಲಸ ಮಾಡುತ್ತಿದ್ದರು. ಭೀಕರ ಹತ್ಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.