ಬೆಂಗಳೂರು: ಕರ್ನಾಟಕದಲ್ಲಿ SSLC ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆಗಳು(Exams )ವಿದ್ಯಾರ್ಥಿಗಳ ಜೀವನದ ಅತ್ಯಂತ ನಿರ್ಣಾಯಕ ಘಟ್ಟಗಳಾಗಿವೆ. ಈ ಪರೀಕ್ಷೆಗಳು ಕೇವಲ ಅಂಕಗಳಿಕೆಯ ಹಾದಿಯಲ್ಲ, ಬದಲಿಗೆ ವಿದ್ಯಾರ್ಥಿಯ ಭವಿಷ್ಯದ ವೃತ್ತಿಜೀವನಕ್ಕೆ ಅಡಿಪಾಯ ಹಾಕುವ ಕ್ಷಣಗಳು. ಪರೀಕ್ಷೆಯ ಸಂದರ್ಭದಲ್ಲಿ ಆತಂಕ ಸಹಜ, ಆದರೆ ಸರಿಯಾದ ಯೋಜನೆ ಮತ್ತು ಸಮಯ ನಿರ್ವಹಣೆಯಿದ್ದರೆ ಯಶಸ್ಸು ಖಂಡಿತ. ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಮತ್ತು ಯಶಸ್ವಿಯಾಗಲು ಕೆಲವು ಪ್ರಮುಖ ಕೀ ಪಾಯಿಂಟ್‌ಗಳು ಇಲ್ಲಿವೆ
ಪರೀಕ್ಷಾ ಯಶಸ್ಸಿನ ಕೀ ಪಾಯಿಂಟ್‌ಗಳು ..
ಉಳಿದಿರುವ ದಿನಗಳನ್ನು ಸರಿಯಾಗಿ ಹಂಚಿಕೆ ಮಾಡಿಕೊಳ್ಳಿ. ಪ್ರತಿ ವಿಷಯಕ್ಕೂ ಅದರ ಕ್ಲಿಷ್ಟತೆಗೆ ಅನುಗುಣವಾಗಿ ಸಮಯ ಮೀಸಲಿಡಿ.ಕಷ್ಟವೆನಿಸುವ ವಿಷಯಗಳನ್ನು ಮುಂಜಾನೆ (ಯಾವಾಗ ಮೆದುಳು ಚುರುಕಾಗಿರುತ್ತದೆಯೋ ಆಗ) ಓದಿ.
2. ಪುನರಾವರ್ತನೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು
ಹೊಸ ವಿಷಯಗಳನ್ನು ಕಲಿಯುವ ಬದಲು, ಈಗಾಗಲೆ ಓದಿರುವುದನ್ನು ಪದೇ ಪದೇ ಪುನರಾವರ್ತನೆ ಮಾಡಿ. ಕಳೆದ 5 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಇದು ಪರೀಕ್ಷೆಯ ಪ್ಯಾಟರ್ನ್ ಅರ್ಥಮಾಡಿಕೊಳ್ಳಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ.
ಪರೀಕ್ಷಾ ಹಾಲ್‌ನಲ್ಲಿ ಯಾವ ಪ್ರಶ್ನೆಗೆ ಎಷ್ಟು ಸಮಯ ನೀಡಬೇಕು ಎಂಬ ಸ್ಪಷ್ಟತೆ ಇರಲಿ.ಗೊತ್ತಿಲ್ಲದ ಪ್ರಶ್ನೆಗಳ ಮೇಲೆ ಸಮಯ ವ್ಯರ್ಥ ಮಾಡದೆ, ಮೊದಲು ಚೆನ್ನಾಗಿ ತಿಳಿದಿರುವ ಉತ್ತರಗಳನ್ನು ಬರೆಯಿರಿ.
4. ಲೇಖನ ಶೈಲಿ ಮತ್ತು ಪ್ರಸ್ತುತಿ
ಉತ್ತರಗಳು ಸ್ಪಷ್ಟವಾಗಿರಲಿ. ಪಾಯಿಂಟ್ಸ್ ರೂಪದಲ್ಲಿ ಬರೆಯುವುದು ಮತ್ತು ಮುಖ್ಯ ಪದಗಳ ಕೆಳಗೆ ಗೆರೆ ಎಳೆಯುವುದು (Underlining) ಮೌಲ್ಯಮಾಪಕರ ಗಮನ ಸೆಳೆಯುತ್ತದೆ.ಕೈಬರಹ ಅಚ್ಚುಕಟ್ಟಾಗಿರಲಿ ಮತ್ತು ಅಗತ್ಯವಿದ್ದಲ್ಲಿ ಚಿತ್ರಗಳನ್ನು (Diagrams) ಬಿಡಿಸಿ.
ನಿದ್ದೆ: ಪರೀಕ್ಷೆಗೂ ಮುನ್ನ ಕನಿಷ್ಠ 6-7 ಗಂಟೆಗಳ ಕಾಲ ನಿದ್ದೆ ಮಾಡಿ. ನಿದ್ರೆಯಿಲ್ಲದೆ ಪರೀಕ್ಷೆ ಬರೆದರೆ ಏಕಾಗ್ರತೆ ಕಡಿಮೆಯಾಗುತ್ತದೆ. ಹೆಚ್ಚು ನೀರು ಕುಡಿಯಿರಿ ಮತ್ತು ಹಣ್ಣು-ತರಕಾರಿಗಳನ್ನು ಸೇವಿಸಿ. ಜಂಕ್ ಫುಡ್‌ಗಳಿಂದ ದೂರವಿರಿ.
6. ಪರೀಕ್ಷಾ ಸಾಮಗ್ರಿಗಳ ಸಿದ್ಧತೆ
ಹಾಲ್ ಟಿಕೆಟ್, ಪೆನ್ನು, ಪೆನ್ಸಿಲ್, ಜ್ಯಾಮಿತಿ ಪೆಟ್ಟಿಗೆಯನ್ನು ಹಿಂದಿನ ರಾತ್ರಿಯೇ ಸಿದ್ಧಪಡಿಸಿಟ್ಟುಕೊಳ್ಳಿ. ಪರೀಕ್ಷಾ ಕೇಂದ್ರಕ್ಕೆ ನಿಗದಿಪಡಿಸಿದ ಸಮಯಕ್ಕಿಂತ ಕನಿಷ್ಠ 30 ನಿಮಿಷ ಮೊದಲೇ ತಲುಪಿ.
"ನನಗೆಲ್ಲವೂ ನೆನಪಿದೆ, ನಾನು ಪರೀಕ್ಷೆಯನ್ನು ಚೆನ್ನಾಗಿ ಬರೆಯುತ್ತೇನೆ" ಎಂಬ ಸಕಾರಾತ್ಮಕ ಭಾವನೆ ಇರಲಿ. ಪರೀಕ್ಷೆಯ ನಂತರ ಸ್ನೇಹಿತರೊಂದಿಗೆ ಉತ್ತರಗಳ ಬಗ್ಗೆ ಹೆಚ್ಚು ಚರ್ಚೆ ಮಾಡಿ ಮುಂದಿನ ಪರೀಕ್ಷೆಯ ಮೇಲೆ ಪ್ರಭಾವ ಬೀರದಂತೆ ಎಚ್ಚರವಹಿಸಿ.
ವಿದ್ಯಾರ್ಥಿಗಳಿಗೆ ಒಂದು ಕಿವಿಮಾತು: "ಪರೀಕ್ಷೆ ಎಂಬುದು ಕೇವಲ ಒಂದು ಕಾಗದದ ಮೇಲಿನ ಮೌಲ್ಯಮಾಪನವಷ್ಟೇ, ಅದು ನಿಮ್ಮ ಸಂಪೂರ್ಣ ವ್ಯಕ್ತಿತ್ವದ ಅಳತೆಗೋಲಲ್ಲ. ಶಾಂತವಾಗಿರಿ, ನಿಮ್ಮ ಶ್ರಮದ ಮೇಲೆ ನಂಬಿಕೆಯಿರಲಿ,(ಏಜೆನ್ಸೀಸ್).