ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರು ಶಿಥಿಲಗೊಂಡ ಶೆಡ್ ಮರು ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿಯಲ್ಲಿ ಹಸನಸಾಬ ಪಿಂಜಾರ, ಬಸವರಾಜ ಮುಳ್ಳೂರ, ಭೀಮಪ್ಪ ಆಡಿಹಾಳ, ಕಲ್ಲಪ್ಪ ಆನೆಹೊಸೂರ, ಶರಣಪ್ಪ ಮುಳ್ಳೂರ ಪಾಲ್ಗೊಂಡಿದ್ದರು.
- ಇದ್ದಲಗಿ ಸಂತ್ರಸ್ತರ ಅರಣ್ಯರೋದನ
- ಅಧಿಕಾರಿಗಳಿಗೆ ಹಿಡಿಶಾಪ
ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರು ಶಿಥಿಲಗೊಂಡ ಶೆಡ್‌ಗಳ ಮರು ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ 21ನೇ ದಿನಕ್ಕೆ ಕಾಲಿಟ್ಟಿತು.
ಶಾಸಕ ವಿಜಯಾನಂದ ಕಾಶಪ್ಪನವರ ಬಂದು ಹೋದ ಮೇಲೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಇಲಾಖೆ ಸೇರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಂತ್ರಸ್ತರ ಧರಣಿ ಸ್ಥಳದತ್ತ ಸುಳಿಯುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮುಂದಿನ ವಾರದಿಂದ ಮಳೆಗಾಲ ಆರಂಭವಾಗುತ್ತಿದೆ.
ಶೆಡ್‌ಗಳೆಲ್ಲಾ ಸಂಪೂರ್ಣ ಶಿಥಿಲಗೊಂಡಿದ್ದು ಜೋರಾದ ಗಾಳಿ ಬೀಸಿದರೆ ಎಲ್ಲಾ ಶೆಡ್‌ಗಳು ನೆಲಸಮವಾಗುವ ಸ್ಥಿತಿ ತಲುಪಿದ್ದರೂ ನಮ್ಮ ಗೋಳು ಕೇಳೋರಿಲ್ಲದಂತಾಗಿದೆ ಎಂದು ಧರಣಿ ನಿರತ ಸಂತ್ರಸ್ತರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಹಸನಸಾಬ ಪಿಂಜಾರ, ಬಸವರಾಜ ಮುಳ್ಳೂರ, ಭೀಮಪ್ಪ ಆಡಿಹಾಳ, ಕಲ್ಲಪ್ಪ ಆನೆಹೊಸೂರ, ಶರಣಪ್ಪ ಮುಳ್ಳೂರ, ಹಬೀಸಾಬ ಮುಲ್ಲಾ, ಹುಚ್ಚಪ್ಪ ಬೂದಗೂಳಿ, ಹನಮಂತ ಹಡಪದ, ಮಹಾಂತೇಶ ವಾಲಿಕಾರ, ಇಮಾಮಸಾಬ ಹುನಗುಂದ, ಶರಣಪ್ಪ ಬೇನಾಳ, ಮಲ್ಲಮ್ಮ ಗಡ್ಡಿಮಠ, ಮುತ್ತವ್ವ ಬೇನಾಳ, ಮಹಾದೇವಿ ತೋಟಗೇರಿ, ನೀಲಮ್ಮ ಮಾಗಿ, ಭೀಮವ್ವ ಬೇನಾಳ, ಸಂಗವ್ವ ಹಾವರಗಿ ಇತರರಿದ್ದರು.