ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಸೃಷ್ಟಿ ಪಾಟೀಲಗೆ ಆಳಂದದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರುದ್ರಾಕ್ಷಿ ಮಾಲೆ ಹಾಕಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸನ್ಮಾನ ಮಾಡಿದರು. ಸೋಮಶೇಖರ ಮುಲಗೆ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ಇತರರಿದ್ದರು.
- ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಿತನುಡಿ
- ದ್ವೀತಿಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ
ಆಳಂದ: ಜೀವನದ ಯಾವುದೇ ಹಂತದಲ್ಲಿ ಯಶಸ್ಸು ಸಿಕ್ಕರೂ ನಮ್ಮ ಸಂಸ್ಕೃತಿಯನ್ನು ಯಾವತ್ತೂ ಮರೆಯಬಾರದು ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.
ದ್ವೀತಿಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ಪಂಚಮಸಾಲಿ ಸಮಾಜದ ವಿದ್ಯಾರ್ಥಿನಿ ಸೃಷ್ಟಿ ಪಾಟೀಲ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಸಿದ್ಧಾರೂಢ ಮಠದಲ್ಲಿ ಜಿಲ್ಲಾ ಪಂಚ ಸೇನೆ ಸಮಿತಿ ಸೋಮವಾರ ಏರ್ಪಡಿಸಿದ್ದ ಗೌರವ ಸಮರ್ಪಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಎಂದರೆ ಕೇವಲ ಅಂಕ ಗಳಿಕೆಗಲ್ಲ, ಅದು ಮೌಲ್ಯಗಳ ಪ್ರತಿಬಿಂಬ. ಕಲಾ ವಿಭಾಗದಂತಹ ವಿಷಯದಲ್ಲಿ ವಿದ್ಯಾರ್ಥಿನಿ ಸೃಷ್ಟಿ ರಾಜ್ಯ ಮಟ್ಟದಲ್ಲಿ ಕೀರ್ತಿ ತಂದಿದದು ಸಣ್ಣ ವಿಷಯವಲ್ಲ. ಸಾಧನೆ ಹಾದಿಯಲ್ಲಿ ಸಂಸ್ಕೃತಿಯೇ ದಾರಿದೀಪ ಇದ್ದಂತೆ ಎಂದರು.
ಅಧ್ಯತೆ ವಹಿಸಿದ್ದ ಪಂಚ ಸೇನೆ ಸಮಿತಿ ಅಧ್ಯ ಸೋಮಶೇಖರ ಮುಲಗೆ ಮಾತನಾಡಿ, ವಿದ್ಯಾರ್ಥಿನಿ ಸೃಷ್ಟಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದು ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯ. ಓದು ಕೇವಲ ಉದ್ಯೋಗಕ್ಕಾಗಿ ಅಲ್ಲದೆ ಬದುಕು ರೂಪಿಸುವ ಶಕ್ತಿಯಾಗಬೇಕು. ಇವರ ಸಾಧನೆ ಮುಂದಿನ ತಲೆಮಾರಿಗೆ ಒಂದು ಸ್ಪಷ್ಟ ಸಂದೇಶ ರವಾನಿಸಿದೆ. ಸಮಾಜದವರು ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿದರೆ ಮಾತ್ರ ಹೊಸ ಬದಲಾವಣೆ ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಳಿಕೋಟೆಯ ಬಾಪುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಚಂದ್ರಶೇಖರ ಮಡ್ಡೆ, ಮಹೇಶ ಮಡ್ಡೆ ಇತರರಿದ್ದರು.