ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬಾಲಚಂದ್ರ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸಿದರು. ಪಿ.ಎಂ.ಜಗತಾಪ, ಬಿ.ಎಸ್.ಬೆಳವಣಕಿ, ಬಸವರಾಜ ಹಿರೇರಡ್ಡಿ, ಪರುತಗೌಡ ಪಾಟೀಲ, ಪಿ.ಎ್. ಪಾಟೀಲ ಇತರರಿದ್ದರು.
ರಾಮದುರ್ಗ: ಮಾಜಿ ಶಾಸಕರಿಗೆ ಟಿಕೆಟ್ ಕೊಡಿಸಿದವರು ನಾನು ಮತ್ತು ದಿ.ಉಮೇಶ ಕತ್ತಿ. ಆಗ ನಮ್ಮವರು ಎಂದವರು ಈಗ ಹೊರಗಿನವರು ಎಂದು ಅಪಪ್ರಚಾರ ಮಾಡುತ್ತಿರುವುದು ಎಷ್ಟು ಸರಿ ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ವಿರುದ್ಧ ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದ ಸಮೀಪದ ಪ್ರಗತಿ ಸಭಾ ಭವನದಲ್ಲಿ ಧನಲಕ್ಷಿ$್ಮ ಸಹಕಾರ ಸಕ್ಕರೆ ಕಾರ್ಖಾನೆಯ ಹಿರೇರಡ್ಡಿ ಪೆನಲ್ ನಿರ್ದೇಶಕರು, ವಿವಿಧ ಸೊಸೆಟಿಯಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾಜಿ
ಹಾಗೂ ಹಾಲಿ ಶಾಸಕರು ಏನೇ ಕಸರತ್ತು ನಡೆಸಿದರೂ 16 ಸೊಸೆಟಿಯವರು ನಮ್ಮನ್ನು ಬೆಂಬಲಿಸಿದ್ದಾರೆ. ನಿಮ್ಮ ಪ್ರೀತಿಗೆ ನಾವು ಚಿರಋಣಿ. ಸ್ಥಳಿಯ ಹಿರಿಯರು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ನಸೀಬು ಇದ್ದವರಿಗೆ 2028ರಲ್ಲಿ ಚುನಾವಣೆಗೆ ಅವಕಾಶ ಸಿಗಲಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ತಾಲೂಕಿನಲ್ಲಿ ಮೊದಲು 17 ಸೊಸೆಟಿಗಳಿದ್ದವು. ಈಗ 37 ಆಗಿವೆ. ತಾಲೂಕಿನ ರೆತರಿಗೆ 17 ಕೋಟಿ ರೂ. ಸಾಲ ನೀಡಲಾಗಿತ್ತು. ಸದ್ಯ 275 ಕೋಟಿ ರೂ. ಸಾಲ ನೀಡಲಾಗಿದೆ. ಬ್ಯಾಂಕ್ ಪ್ರಾರಂಭವಾದ ಕೇವಲ ಮೂರು ತಿಂಗಳಲ್ಲಿ 520 ಕೋಟಿ ರೂ. ಠೇವಣಿ ಹೆಚ್ಚಿಸಿದ್ದೇವೆ. ೆ.28ರಂದು ವ್ಯವಹಾರಿಕ ಸಾಲ, ಗಹ ಸಾಲ, ಟ್ರಾಕ್ಟರ್ ಸಾಲ ಮೂರು ಹೊಸ ಯೋಜನೆ ೂಷಣೆ ಮಾಡಲಾಗುವುದು ಎಂದರು.
ಬೆಮುಲ್ ಅಧ್ಯ ಬಾಲಚಂದ್ರ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ಅಧ್ಯ ಅಣ್ಣಾಸಾಹೇಬ ಜೊಲ್ಲೆ ಅವರನ್ನು ತಾಲೂಕಿನ ಜನತೆ ಹಾಗೂ ಸೊಸೆಟಿಗಳ ಪರವಾಗಿ ಸತ್ಕರಿಸಲಾಯಿತು.
ವಕೀಲ ಪಿ.ಎಂ ಜಗತಾಪ ಕಾರ್ಯಕ್ರಮದ ಅಧ್ಯತೆ ವಹಿಸಿದ್ದರು. ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯ ಬಿ.ಎಸ್.ಬೆಳವಣಕಿ, ನಿರ್ದೇಶಕರಾದ ಬಸವರಾಜ ಹಿರೇರಡ್ಡಿ, ಪರುತಗೌಡ ಪಾಟೀಲ, ಪಿ.ಎ್. ಪಾಟೀಲ, ಗೋಪಾಲ ಸಂಶಿ, ಈರಣ್ಣ ಕಾಮನ್ನವರ, ಬಿ.ಎಸ್. ಸಿದರಡ್ಡಿ, ಬಿ.ಟಿ ಬಸಿಡೋಣಿ, ಮುಖಂಡರಾದ ಸಿ.ಬಿ. ಪಾಟೀಲ, ಕಲ್ಲಣ್ಣ ವಜ್ರಮಟ್ಟಿ, ಮಹ್ಮದಶಫಿ ಬೆಣ್ಣಿ, ಪಡಿಯಪ್ಪ ಕ್ವಾರಿ, ಭೀಮಶೆಪ್ಪ ಬಸಿಡೋಣಿ, ಬೀಡಕಿ ನಾಯಕ ಇತರರಿದ್ದರು.
ಡಾ.ಕೆ.ವಿ.ಪಾಟೀಲ ಸ್ವಾಗತಿಸಿದರು. ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎಸ್.ಎಸ್.ಢವಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಬೋಸ್ಲೆ ಕಾರ್ಯಕ್ರಮ ನಿರೂಪಿಸಿದರು.