ಕಮಲನಗರ ತಾಲೂಕಿನ ಹೊರಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಮಂಗಲಬಾಯಿ ಬಿರಾದಾರ ಅವರಿಗೆ ಸಹೋದ್ಯೋಗಿಗಳು ಸನ್ಮಾನಿಸಿ ಬೋಳ್ಕೊಟ್ಟರು. ೇತ್ರ ಶಿಕ್ಷಣಾಧಿಕಾರಿ ವಾಗಂಬರ ಗಾಯಕವಾಡ, ಪ್ರಭುಲಿಂಗ ತೂಗಾವೆ, ಪಂಢರಿ ಆಡೆ, ಪ್ರಶಾಂತ ಮಠಪತಿ, ವಿಜಯಕುಮಾರ ಬಿರಾದಾರ, ಬಸವರಾಜ ಮಹಾಜನ, ಪ್ರಭು ತಟಪಟ್ಟಿ, ವಿದ್ಯಾಸಾಗರ ಪಾಂಚವರೆ, ವಿವೇಕ ಢಗೆ ಇತರರಿದ್ದರು.
- ಪ್ರಭುಲಿಂಗ ತೂಗಾವೆ ಅಭಿಮತ
- ಶಿಕ್ಷಕಿ ಮಂಗಲಾಬಾಯಿ ಬಿರಾದಾರ ಅವರಿಗೆ ಬೀಳ್ಕೊಡುಗೆ
ಕಮಲನಗರ: ಬದುಕಿನಲ್ಲಿ ಆರಿಸಿಕೊಂಡ ವೃತ್ತಿ ಮತ್ತು ಪ್ರವೃತ್ತಿ ಎರಡೂ ಒಂದೇ ಆಗಿದ್ದರೆ ನಿವೃತ್ತಿಯ ನಂತರವೂ ಜೀವನೋತ್ಸಾಹದಿಂದ ಇರಲು ಸಾಧ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂ ಜಿಲ್ಲಾ ಟಕದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ ಹೇಳಿದರು.
ತಾಲೂಕಿನ ಹೊರಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿ ಮಂಗಲಬಾಯಿ ಬಿರಾದಾರ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 30 ವರ್ಷಕ್ಕೂ ಅಧಿಕ ವರ್ಷ ಸುದೀರ್ ಸರ್ಕಾರಿ ಸೇವೆಯ ಬಳಿಕವೂ ಶಿಕ್ಷಕಿ ಮಂಗಲಾಬಾಯಿ ಅವರಲ್ಲಿ ಲವಲವಿಕೆ ಕಡಿಮೆಯಾಗಿಲ್ಲ. ವೃತ್ತಿ ಮೇಲಿನ ಪ್ರೀತಿ ಮತ್ತು ಪ್ರವೃತ್ತಿಯಾಗಿಸಿಕೊಂಡ ಆಸಕ್ತಿ ಅವರಲ್ಲಿನ ಜೀವನೋತ್ಸಾಹವನ್ನು ಹೆಚ್ಚಿಸಿದೆ. ವೃತ್ತಿ ಬದುಕಿನ ಅನುಭವ ಭವಿಷ್ಯದ ದಿನಗಳಲ್ಲಿ ಅವರಲ್ಲಿ ವೃತ್ತಿ ಬದುಕಿನ ಅನುಭವ ಭವಿಷ್ಯದ ದಿನಗಳಲ್ಲಿ ಅವರಲ್ಲಿ ಸಂಭ್ರಮ ತುಂಬಲಿ ಎಂದರು.
ಸರ್ಕಾರಿ ನೌಕರರ ಸಂದ ಔರಾದ ತಾಲೂಕು ಅಧ್ಯಕ್ಷ ಪಂಢರಿ ಆಡೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಕಾರಿ ಉದ್ಯೋಗವನ್ನು ನಿಭಾಯಿಸುವುದು ಕಷ್ಟ. ಅಂತಹ ವಾತವರಣದಲ್ಲಿ ಆತ್ಮತೃಪ್ತಿ, ಸೌಜನ್ಯ ಹಾಗೂ ಆತ್ಮೀಯತೆಯಿಂದ ಕರ್ತವ್ಯ ನಿರ್ವಹಿಸಿದ ಮಂಗಲಬಾಯಿ ಬಿರಾದಾರ ಅವರು ಇತರರಿಗೆ ಮಾದರಿ ಎಂದರು.
ಔರಾದ್ ೇತ್ರಶಿಕ್ಷಣಾಧಿಕಾರಿ ವಾಗಂಬರ ಗಾಯಕವಾಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಮುಖಂಡ ಬಾಬುರಾವ ಪಾಟೀಲ್, ಮನೋಹರ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ತಾಲೂಕು ಅಧ್ಯಕ್ಷ ವಿಜಯಕುಮಾರ ನೂದನೂರೆ, ಪ್ರಶಾಂತ ಮಠಪತಿ, ರಮಾಕಾಂತ ಖೊಂಡೆ, ಲಿಂಗಾನಂದ ಮಹಾಜನ, ಸಂಜುಕುಮಾರ ಗಾಯಕವಾಡ, ಸಂಜೀವಕುಮಾರ ಡೋಂಗ್ರೆ, ಪ್ರಭು ತಟಪಟ್ಟಿ, ಬಸವರಾಜ ಮಹಾಜನ, ನಾಗನಾಥ, ವಿವೇಕಾನಂದ ಢಗೆ, ಬಸವರಾಜ ಜಾಗಾವೆ, ಮನೋಜಕುಮಾರ ಹಿರೇಮಠ, ಗಣೇಶ ಬಿರಾದಾರ, ಮಹೇಶ ಬಿರಾದಾರ, ಪ್ರಕಾಶ ಸ್ವಾಮಿ, ಶಾಂತಕುಮಾರ, ರವೀಂದ್ರ, ಮಹಾದೇವ ಮಡಿವಾಳ ಇತರರಿದ್ದರು.