ಯಾದಗಿರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಅವರು ವಿಕಲಾಂಗರಿಗೆ ಬೈಕ್​ ವಿತರಿಸಿದರು. ಶರಣಪ್ಪ ಪಾಟೀಲ್​, ನಾಗಮ್ಮ, ಮಲ್ಲಿಕಾರ್ಜುನ ಈಟೆ, ಶರಣಗೌಡ ಬಲಕಲ, ಖಾಜಾ ಮೋಹಿನೊದ್ದಿನ್​ ಮಿರ್ಚಿ, ಶರಣಬಸವ ಕುರಕುಂದ, ತಿಮ್ಮಣ್ಣ ನಾಯಕ ಇತರರಿದ್ದರು. 
ರಾಜ್ಯ

ಏನೇ ಕೆಲಸವಿದ್ದರೂ ನೇರವಾಗಿ ಭೇಟಿಯಾಗಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಮನವಿ
  • ವಿಕಲಾಂಗರಿಗೆ 33 ಬೈಕ್​ ವಿತರಣೆ
ಯಾದಗಿರಿ: ವಿಧಾನಸಭಾ ಮತಕ್ಷೇತ್ರದಲ್ಲಿ ಯಾವುದೇ ಮತ್ತು ಯಾರದೇ ಕೆಲಸವಿದ್ದರೂ ಮಧ್ಯವರ್ತಿಗಳ ಮೂಲಕ ಬರದೇ ನೇರವಾಗಿ ಬಂದರೆ ತಕ್ಷಣವೇ ಸ್ಪಂದಿಸುವುದಾಗಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ನಗರದ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರ ಅನುದಾನದಲ್ಲಿ ಮಂಜೂರಾದ 40 ಲಕ್ಷ ವೆಚ್ಚದ 33 ಇಲೆಕ್ಟ್ರಿಕಲ್​ ಬೈಕ್​ಗಳನ್ನು ಅರ್ಹ ಅಂಗವಿಕಲ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಜನರು ಅಭಿವೃದ್ಧಿ ಕೆಲಸ ಮಾಡಲು ತಮ್ಮನ್ನು ಆಯ್ಕೆ ಮಾಡಿದ್ದಾರೆ. ಅಂತಲೇ ಮೂರು ವರ್ಷಗಳಿಂದ ಮತಕ್ಷೇತ್ರದ ಪ್ರಗತಿಗೆ ಸಾಕಷ್ಟು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ವಿಕಲಾಂಗರು ಯಾವುದರಲ್ಲೂ ಕಡಿಮೆಯಿಲ್ಲ. ಆದರೆ ಅವರಿಗೆ ಸೂಕ್ತ ಅವಕಾಶ ನೀಡಿದರೆ ಮಹಾನ್​ ಸಾಧಕರಾಗುತ್ತಾರೆ ಎಂದ ಅವರು, ಇಂದು ನೀಡಿದ ಬೈಕ್​ಗಳನ್ನು ಯಾವ ಕಾರಣಕ್ಕೂ ಬೇರೆಯವರಿಗೆ ನೀಡುವುದಾಗಲಿ, ಮಾರಾಟ ಮಾಡುವುದಾಗಲಿ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಕಾನೂನು ಉಲ್ಲಂಘ ನೆ ಆಗಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ವಿಕಲಚೇತನ ಕಲ್ಯಾಣ ಅಧಿಕಾರಿ ಶರಣಪ್ಪ ಪಾಟೀಲ್​, ನಾಗಮ್ಮ, ಮಲ್ಲಿಕಾರ್ಜುನ ಈಟೆ, ಶರಣಗೌಡ ಬಲಕಲ, ಖಾಜಾ ಮೋಹಿನೊದ್ದಿನ್​ ಮಿರ್ಚಿ, ಶರಣಬಸವ ಕುರಕುಂದ, ತಿಮ್ಮಣ್ಣ ನಾಯಕ, ಜಲಾಲ್​ ಬಬಲಾದ್​, ಬಾಪುಗೌಡ ಮೆಚನೂರು, ಅಶೋಕ್​ ರೆಡ್ಡಿ ಕುರಿಹಾಳ ಇತರರಿದ್ದರು.