What Muslims need is education and development.
ಹುಳಿಯಾರು: ದೇಶಕ್ಕೆ ಇಂದು ಮತ್ತೊಂದು ಹಿಂದೂ-&ಮುಸ್ಲಿಂ ವಿವಾದದ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಶಿಕ್ಷಣ, ಅಭಿವೃದ್ಧಿ ಮತ್ತು ಸಾಮಾಜಿಕ ಶಾಂತಿ ಎಂದು ಹುಳಿಯಾರಿನ ಜಾಮಿಯಾ ಮಸೀದಿ ಕಾರ್ಯದರ್ಶಿ ನದೀಮ್ ತಿಳಿಸಿದರು.
ಹುಳಿಯಾರಿನ ಜಾಮಿಯಾ ಮಸೀದಿ ಹಾಗೂ ಸುತ್ತಮುತ್ತಲ ವಿವಿಧ ಮಸೀದಿ ಸಮಿತಿಗಳಿಂದ ಶನಿವಾರ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಭಾರತೀಯ ಸಂಸತಿ, ಗ್ರಾಮೀಣ ಪ್ರದೇಶ ಮತ್ತು ರೈತರ ಬದುಕಿನಲ್ಲಿ ಗೋವು ಅತ್ಯಂತ ಪ್ರಮುಖ ಪ್ರಾಣಿಯಾಗಿದೆ. ಗೋವಿನ ಕುರಿತು ಪರಸ್ಪರ ಗೌರವದಿಂದ ಚರ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗೋವು ರಾಜಕೀಯ ವಸ್ತುವಾಗಬಾರದು. ಅದು ಸಮಾಜದಲ್ಲಿ ಪರಸ್ಪರ ಗೌರವದ ವಿಷಯವಾಗಬೇಕು. ಸಮಾಜ ಒಗ್ಗಟ್ಟಾಗಬೇಕಾದರೆ ಪರಸ್ಪರ ಗೌರವ ಅಗತ್ಯ. ಆಗ ಮಾತ್ರ ದೇಶ ಪ್ರಬಲವಾಗಲು ಸಾಧ್ಯ ಎಂದರು.
ನಾವು ಯಾವುದೇ ರಾಜಕೀಯ ದ್ವೇಷಕ್ಕೆ ಬಲಿಯಾಗುವುದಿಲ್ಲ ಹಾಗೂ ಬೇರೆ ಧರ್ಮದ ಭಾವನೆಗಳಿಗೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ. ನಾವು ದೇಶದ ಏಕತೆಯ ಪರವಾಗಿದ್ದೇವೆ ಎಂದು ಸಮುದಾಯದ ಮುಖಂಡರು ಒಕ್ಕೊರಲಿನಿಂದ ತಿಳಿಸಿದರು.
ಪ್ರತಿಭಟನೆಯಲ್ಲಿ ಹುಳಿಯಾರು ಜಾಮಿಯಾ ಮಸೀದಿ ಮುತುವಲ್ಲಿ ಆರೀಫ್, ಉಪಾಧ್ಯಕ್ಷ ಸಾದತ್ ಷರ್ೀ, ವೈ.ಎಸ್.ಪಾಳ್ಯ ರಿಯಾಜ್, ಹಾರೂನ್, ನಜೀರ್, ಶಫಿ, ಸುನ್ನು, ಗೌಸ್, ಖದೀರ್, ಇಮ್ರಾನ್ ಮತ್ತಿತರರು ಇದ್ದರು.
ಪ್ರಮುಖ ಬೇಡಿಕೆಗಳು: ಇದೇ ವೇಳೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು, ಗೋವಿನ ರಕ್ಷಣೆಗೆ ಮತ್ತು ಗೋ ರಫ್ತನ್ನು ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮದ್ಯಪಾನಕ್ಕೆ ಪರವಾನಗಿ ಮಾನದಂಡಗಳನ್ನು ಬಿಗಿಗೊಳಿಸಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ತಹಸೀಲ್ದಾರ್ಮೂಲಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪ್ರಧಾನಮಂತ್ರಿಯವರಿಗೆ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಲಾಯಿತು.