ಅಳವಂಡಿ ಗ್ರಾಮದಲ್ಲಿ ಭೂ ಸಂಪನ್ಮೂಲ ಸಮೀಕ್ಷೆಯ ಸಾಕ್ಷರತಾ ಅಭಿಯಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಿವಾರ್ಡ್ ಜಿಲ್ಲಾ ತರಬೇತಿ ಸಂಯೋಜಕಿ ಉಮಾದೇವಿ, ಎಲ್ಆರ್‌ಐ ವ್ಯವಸ್ಥಾಪಕಿ ರಾಜೇಶ್ವರಿ, ಟೀಮ್ ಲೀಡರ್ ಗವಿಸಿದ್ದಪ್ಪ, ಸಹಾಯಕ ಬಸನಗೌಡ ಇತರರಿದ್ದರು.
- ಭೂಮಿಗೆ ತಕ್ಕಂತೆ ಬೆಳೆ ಆಯ್ಕೆ ಮಾಡಿ
- ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಯಬೇಕು
ಅಳವಂಡಿ: ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಬಳಸಿದರೆ ಭೂಮಿ ಬರಡಾಗುತ್ತದೆ ಎಂದು ರಿವಾರ್ಡ್ ಜಿಲ್ಲಾ ತರಬೇತಿ ಸಂಯೋಜಕಿ ಉಮಾದೇವಿ ಹೇಳಿದರು.
ಗ್ರಾಮದಲ್ಲಿ ಜಿಪಂ, ಕೃಷಿ ಇಲಾಖೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಶುಕ್ರವಾರ ಆಯೋಜಿಸಿದ್ದ ಭೂ ಸಂಪನ್ಮೂಲ ಸಮೀಕ್ಷೆಯ ಸಾಕ್ಷರತಾ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂಮಿ ಅನ್ನ ನೀಡುವ ತಾಯಿ. ಅದನ್ನು ವಿಷಪೂರಿತ ಮಾಡಬಾರದು.
ಹೆಚ್ಚು ರಾಸಾಯನಿಕ ಬಳಸದೇ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಯಬೇಕು. ಬೀಜಕ್ಕೆ ಬಿಜೋಪಚಾರ ಮಾಡಿ ಜಮೀನಿನಲ್ಲಿ ನೀರು ನಿಲ್ಲಿಸಿ ಭೂಮಿಯಲ್ಲಿ ಇಂಗಿಸುವಂತೆ ಮಾಡಬೇಕು. ಭೂಮಿಗೆ ತಕ್ಕಂತೆ ಬೆಳೆ ಆಯ್ಕೆ ಮಾಡಬೇಕು ಎಂದರು.
ಎಲ್ಆರ್‌ಐ ವ್ಯವಸ್ಥಾಪಕಿ ರಾಜೇಶ್ವರಿ, ಟೀಮ್ ಲೀಡರ್ ಗವಿಸಿದ್ದಪ್ಪ, ಸಹಾಯಕ ಬಸನಗೌಡ ಪಾಟೀಲ, ಪ್ರಮುಖರಾದ ಶಾಂತಾ, ಸುರೇಶ ವಾಸ್ತೆ, ವೆಂಕಟೇಶ, ಸಂತೋಷ, ಗವಿಸಿದ್ದಪ್ಪ ಇತರರಿದ್ದರು.