What a shameful meeting! 
ರಾಜ್ಯ

ನಾಮ್​ ಕೇ ವಾಸ್ತೆಗೆ ಕುಂದು&-ಕೊರತೆ ಸಭೆ! What a shameful meeting!

meeting ಪಾವಗಡ: ಎಸ್​ಸಿ, ಎಸ್​ಟಿ ಕುಂದು&-ಕೊರತೆ ಸಭೆಯಲ್ಲಿ ಸಮುದಾಯದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಕೈಗೊಳ್ಳಲು ಕೋರಿ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಸಮಸ್ಯೆ ಬಗೆಹರಿಸಿಲ್ಲ. ಸಭೆಗಳು ಕೇವಲ ನಾಮ್​ ಕೇ ವಾಸ್ತೆಗೆ ಮಾಡಲಾಗುತ್ತಿದೆ ಎಂದು ಪಟ್ಟಣದ ಡಾ.ಬಿ.ಆರ್​ ಅಂಬೇಡ್ಕರ್​ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಎಸ್​&ಎಸ್​ಟಿ ಹಿತ ರಕ್ಷಣ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಪ್ರಾರಂಭಕ್ಕೂ ಮುನ್ನವೇ ಎಸ್​ಸಿ, ಎಸ್​ಟಿ ಕುಂದು&ಕೊರತೆ ಸಭೆಗೆ ಮುಖ್ಯವಾಗಿ ಪೊಲೀಸ್​ ಇಲಾಖೆ, ತಾಲೂಕುಮಟ್ಟದ ಅಧಿಕಾರಿಗಳು ಗೈರಾಗಿ ರ್ನಿಲಕ್ಷ$್ಯ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮುದಾಯದ ಜನರು ಸಮಸ್ಯೆಗಳ ಬಗ್ಗೆ ದೂರು ನೀಡಿ ವರ್ಷ ಕಳೆದರೂ ಸಹ ಯಾವುದೇ ಸಮಸ್ಯೆ ಬಗೆಹರಿಸಿಲ್ಲಾ, ಕಾಟಚಾರಕ್ಕೆ ಸಭೆಗೆ ಬಂದು ವರದಿ ನೀಡುತ್ತಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡ ಮಂಗಳವಾಡ ಹನುಮಂತರಾಯಪ್ಪ ಮಾತನಾಡಿ, ವಿ.ಎಚ್​ ಪಾಳ್ಯದಲ್ಲಿ 1989ರಲ್ಲಿ ದಲಿತರಿಗೆ ಸಮುದಾಯದವರಿಗೆ ನಿವೇಶನ ಹಕ್ಕು ಪತ್ರ ನೀಡಿದ್ದರೂ ಗ್ರಾಪಂ ಅಧಿಕಾರಿಳಿಗೆ ದಾಖಲಾತಿ ಸಮೇತ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಖಾತೆ ಮಾಡಿಕೊಡಲು ರ್ನಿಲಕ್ಷ$್ಯ ತೋರುತ್ತಿದ್ದರೆಂದು ಆರೋಪಿಸಿದರು.
ತಹಸೀಲ್ದಾರ್​ ವೈ.ರವಿ ಅವರು ಸಮಸ್ಯೆಗಳನ್ನು ಆಲಿಸಿ ಎಸ್​ಸಿ, ಎಸ್​ಟಿ ಕುಂದು&ಕೊರತೆ ಸಭೆಗಳಲ್ಲಿ ಪ್ರಸ್ಥಾವನೆ ಮಾಡುವ ಎಲ್ಲ ವಿಷಯವನ್ನು ಆಯಾ ಇಲಾಖೆ ಅಧಿಕಾರಿಗಳು 15 ದಿನಗಳಲ್ಲಿ ವರದಿ ಸಲ್ಲಿಸಬೇಕು. ಅಧಿಕಾರಿಗಳು ಸಮಸ್ಯೆಗಳ ರ್ನಿಲಕ್ಷ$್ಯ ವಹಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚಿರಿಸಿದರು.
ಬಿಇಒ ರೇಣುಕಮ್ಮ, ಆಹಾರ ಶಶಿಕಲಾ, ಪಶು ಇಲಾಖೆ ಹೊರಕೇರಪ್ಪ, ಪಿಡಬ್ಲ್ಯುಡಿ ಇಲಾಖೆ ಎಇಇ ಚೇತನ್​, ಡಿಜೆಎಸ್​ ನಾರಾಯಣಪ್ಪ, ದಲಿತ ಸಂಘಟನೆಗಳ ಮುಖಂಡರಾದ ಸಿ.ಕೆ ತಿಪ್ಪೇಸ್ವಾಮಿ, ಲೊಕೇಶ್​ ಪಾಳೇಗಾರ್​, ಪೆದ್ದನ್ನಾ, ವಳ್ಳೂರ್​ ನಾಗೇಶ್​, ಹನುಮಂತರಾಯಪ್ಪ, ಮದ್ಲೇಟಪ್ಪ, ಕೃಷ್ಣಮೂರ್ತಿ ಇದ್ದರು.