ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಡಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆಯನ್ನು ನ್ಯಾಯವಾದಿ ಅರ್ಜುನ ಜಿಡ್ಡಿಮನಿ ಸಸಿಗೆ ನೀರುಣಿಸಿ ಚಾಲನೆ ನೀಡಿದರು. ಪ್ರಕಾಶ ಚನಾಳ, ಗುರುಮಾತೆ ಸುಜಾತಾ ಕಂಠಮಠ ಇತರರಿದ್ದರು. 
ರಾಜ್ಯ

ದೇಶದ ಪ್ರಗತಿಗೆ ಸುಶಿಕ್ಷಿತ ಮಕ್ಕಳ ಅಗತ್ಯವಿದೆ

ಪ್ರಮುಖ ಮುಖ್ಯಾಂಶಗಳು

  • ನ್ಯಾಯವಾದಿ ಅರ್ಜುನ ಜಿಡ್ಡಿಮನಿ ಹೇಳಿಕೆ
  • ಬಾಲ್ಯ ಕಾರ್ಮಿಕ ವಿರೋಧಿ ದಿನ ಆಚರಣೆ
ರಬಕವಿ/ಬನಹಟ್ಟಿ: ಬಾಲ ಕಾರ್ಮಿಕರ ಬಳಕೆ ಸಮಾಜಕ್ಕೆ ಅಂಟಿದ ದೊಡ್ಡ ಕಳಂಕವಾಗಿದ್ದು, ಪ್ರತಿ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಆದ್ದರಿಂದ ಬಾಲ್ಯ ಸುರಕ್ಷಿತವಾಗಿ, ಸುವ್ಯವಸ್ಥಿತವಾಗಿದ್ದಲ್ಲಿ ಮಾತ್ರ ಮಗುವಿನ ಭವಿಷ್ಯ ಬೆಳಗುತ್ತದೆ. ಬಾಲ್ಯ ಉಳಿದರೆ ಮಾತ್ರ ಭವಿಷ್ಯ ಅರಳುವುದು ಎಂದು ನ್ಯಾಯವಾದಿ ಅರ್ಜುನ ಜಿಡ್ಡಿಮನಿ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲ್ಯ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ದುಡಿಮೆಗೆ ತಳ್ಳುವುದರಿಂದ ಬಾಲ್ಯ ಮತ್ತು ಅವರ ಭವಿಷ್ಯದ ಬೆಳಕನ್ನು ಕಸಿದುಕೊಂಡಂತೆ. ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕೆ ಹೊರತು ಕೆಲಸದ ಉಪಕರಣಗಳಿರಬಾರದು ಎಂದರು.
ದೇಶದ ಪ್ರಗತಿಗೆ ಸುಶಿಕ್ಷಿತ ಮಕ್ಕಳ ಅಗತ್ಯವಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವತ್ತ ಗಮನ ಹರಿಸಬೇಕು. ಬಡತನ ಹಾಗೂ ಅರಿವಿನ ಕೊರತೆಯಿಂದ ಕೆಲವು ಮಕ್ಕಳು ಬಾಲ ಕಾರ್ಮಿಕರಾಗಿ ನರಳುತ್ತಿದ್ದಾರೆ. ಇಂಥ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವತ್ತ ಸಮಾಜದ ಎಲ್ಲರೂ ಶ್ರಮಿಸಬೇಕು ಎಂದರು.
ಕಾರ್ಮಿಕ ಇಲಾಖೆ ಪ್ರಕಾಶ ಚೆನಾಳ, ಮಹಾಲಿಂಗ ಕರೆನ್ನವರ, ಶಿಕ್ಷಣ ಸಂಯೋಜಕ ಬಿ.ಎಂ. ಹಳೇಮನಿ, ಎಸ್‌ಡಿಎಂಸಿ ಉಪಾಧ್ಯಕ್ಷ ಬಸವರಾಜ ಗಣಿ, ಗಂಗಪ್ಪ ಅಮ್ಮಲಜೇರಿ, ಈರಪ್ಪ ಕಡಕಭಾವಿ, ಶ್ರೀಶೈಲ ಗಣಿ, ಬಸವರಾಜ ಕುಂಬಾರ, ಸುಜಾತಾ ಕಂಠಿಮಠ, ಆರ್.ಎಚ್. ಮೇಲಿನಮನಿ, ಎಸ್.ಎಂ. ಯಲಬುರ್ಗಿ, ಆಶಾರಾಣಿ ಕವಟಗೊಪ್ಪ, ಕೆ.ಬಿ. ಹೊಸಮನಿ ಇತರರಿದ್ದರು.