ರಸ್ತೆ ಸುರಕ್ಷತಾ ಅಭಿಯಾನದ ನಿಮಿತ್ತ ಬಸವಕಲ್ಯಾಣದಲ್ಲಿ ಮಂಗಳವಾರ ಪಿಐ ಅಲಿಸಾಬ್​ನೇತೃತ್ವದಲ್ಲಿ ಬೈಕ್​ ರ್ಯಾಲಿ ನಡೆಸಲಾಯಿತು. ಪಿಎಸ್​ಐಗಳಾದ ಸಿದ್ದೇಶ್ವರ, ಸುರೇಶ ಹಜ್ಜರಗಿ, ಸುಚಾತಾ ಕುನಾಳೆ ಇತರರು ಭಾಗವಹಿಸಿದ್ದರು. 
ರಾಜ್ಯ

ಜೀವ ರಕ್ಷಣೆಗೆ ಹೆಲ್ಮೆಟ್​ ಧರಿಸಿ

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಅಲಿಸಾಬ್​ ಸಲಹೆ
  • ಬಸವಿಲ್ಯಾಣದಲ್ಲಿ ರಸ್ತೆ ಸುರಾ ಅಭಿಯಾನ, ಬೈಕ್​ ರ್ಯಾಲಿ
ಬಸವಕಲ್ಯಾಣ: ಸುರಕ್ಷತೆಗಾಗಿ ಪ್ರತಿಯೊಬ್ಬ ಬೈಕ್​ ಸವಾರರು ಹೆಲ್ಮೆಟ್​ ಧರಿಸಲೇ ಬೇಕು. ಹೆಲ್ಮೆಟ್​ ಧರಿಸಿ ಜೀವ ಉಳಿಸಿಕೊಳ್ಳಿ, ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್​ ಧರಿಸಿ ಇಲ್ಲವೇ ದಂಡ ಪಾವತಿಸಿ ಎಂದು ಸಿಪಿಐ ಅಲಿಸಾಬ್​ ಹೇಳಿದರು.
ರಸ್ತೆ ಸುರಕ್ಷತಾ ಅಭಿಯಾನದ ನಿಮಿತ್ತ ಬೀದರ್​ ಜಿಲ್ಲಾ ಪೊಲೀಸ್​, ನಗರ ಪೊಲೀಸ್​ ಠಾಣೆ ಹಾಗೂ ಸಂಚಾರಿ ಪೊಲೀಸ್​ ಠಾಣೆ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬೈಕ್​ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಹೆಲ್ಮೆಟ್​ ಇಲ್ಲದೆ ಬೈಕ್​ ನಡೆಸಿದವರ ಸಂಖ್ಯೆ ಹೆಚ್ಚಿದೆ. ಹೆಲ್ಮೆಟ್​ ಕುರಿತು ಜಾಗೃತಿ ಮೂಡಿಸಲು ಹೆಲ್ಮೆಟ್​ ಧರಿಸಿ ಪ್ರಾಣ ಉಳಿಸಿ ಎನ್ನುವ ೂಷ್ಯವಾಕ್ಯದೊಂದಿಗೆ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಹೆಲ್ಮೆಟ್​ ಧರಿಸದಿದ್ದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಗಾಂಧಿ ವೃತ್ತದಿಂದ ಮುಖ್ಯ ಮಾರ್ಗವಾಗಿ ಬಸವ ವೃತ್ತ, ಅಂಬೇಡ್ಕರ್​ ವೃತ್ತ, ತ್ರಿಪುರಾಂತ ಪ್ರವಾಸಿ ಮಂದಿರದ ಮೂಲಕ ನಾಗಣ್ಣ ಕಟ್ಟಾ, ಶಿವಪುರ ರಸ್ತೆಯಿಂದ ನಾರಾಯಣಪುರ ಕ್ರಾಸ್​, ಬಸವ ನಿಲ್ದಾಣ, ಜೀಜಾಮಾತಾ ಶಾಲೆ, ಕೋಟೆ ಮೂಲಕ ಗಾಂಧಿ ವೃತ್ತದ ವರೆಗೆ ಬೈಕ್​ ರ್ಯಾಲಿ ನಡೆಸಲಾಯಿತು.
ಸಿಪಿಐ ಅಲಿಸಾಬ್​ ನೇತೃತ್ವದಲಿ ನಡೆದ ಬೈಕ್​ ರ್ಯಾಲಿಯಲ್ಲಿ ಸಂಚಾರಿ ಠಾಣೆ ಪಿಎಸ್​ಐ ಸಿದ್ದೇಶ್ವರ, ಕ್ರೆಂ ವಿಭಾಗದ ಪಿಎಸ್​ಗಳಾದ ಸುರೇಶ ಹಜ್ಜರಗಿ, ಸುಚಾತಾ ಕುನಾಳೆ ಹಾಗೂ ಎರಡು ಠಾಣೆಗಳ ಎಎಸ್​ಐ ಮತ್ತು ಪೊಲೀಸ್​ರು ಭಾಗವಹಿಸಿದ್ದರು. ಹೆಲ್ಮೆಟ್​ ಧರಿಸಿದ ವಾಹನ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಲಾಯಿತು.