ಸಿರಿಗೇರಿಯಲ್ಲಿ ಹೆಲ್ಮೆಟ್ ಜಾಗೃತಿ ಜಾಥಾದಲ್ಲಿ ಸಿಪಿಐ ಚಂದನ್ ಗೋಪಾಲ್ ಮಾತನಾಡಿದರು. ಪಿಎಸ್‌ಐ ವೈ.ಶಶಿಧರ್, ಪ್ರಮುಖರಾದ ಎಸ್.ಎಂ.ಅಡಿವೆಯ್ಯಸ್ವಾಮಿ, ಕೆ.ದ್ಯಾವಣ್ಣ, ಬಿಚ್ಚುಗತ್ತಿ ಮಲ್ಲಯ್ಯ, ಲಕ್ಷ್ಮಣ ಭಂಡಾರಿ ಇತರರಿದ್ದರು.
- ತೆಕ್ಕಲಕೋಟೆ ಸಿಪಿಐ ಚಂದನ್ ಗೋಪಾಲ್ ಸಲಹೆ
- ಸಿರಿಗೇರಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ
ಸಿರಿಗೇರಿ: ಸಾರ್ವಜನಿಕರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ತೆಕ್ಕಲಕೋಟೆ ಸಿಪಿಐ ಚಂದನ್ ಗೋಪಾಲ್ ತಿಳಿಸಿದರು.
ಗ್ರಾಮದಲ್ಲಿ ನಿಮಗಾಗಿ ನಾವು ಸಂಸ್ಥೆ ಮತ್ತು ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ ಜಾಥಾಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದರೆ ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ. ಇದರಿಂದಾಗಿ ಹೆಲ್ಮೆಟ್ ಧರಿಸಬೇಕು ಎಂದರು.
ಮುಖ್ಯಶಿಕ್ಷಕ ಬಿ.ಆರ್.ಶಿವಕುಮಾರ್, ನಿಮಗಾಗಿ ನಾವು ಸಂಸ್ಥೆಯ ಗೌರವಾಧ್ಯಕ್ಷ ವಿ.ಹನುಮೇಶ್, ಅಧ್ಯಕ್ಷ ಕೊಳ್ಳಿ ಶೇಖರ್, ಉಪಾಧ್ಯಕ್ಷ ಹಳ್ಳಿ ನಾಗರಾಜ್, ಅಲೀಮ್ ಬಾಷಾ, ಖಜಾಂಚಿ ಶಿವಾಜಿ ರಾವ್, ಪ್ರಧಾನ ಕಾರ್ಯದರ್ಶಿ ಪುನೀತ್ ಕುಮಾರ್ ಬಿ., ಅಮೃತೇಶ್ವರ ಸ್ವಾಮಿ, ವಕೀಲ ಶೇಖಪ್ಪ, ಗುರುಲಿಂಗಪ್ಪ, ನಾಗರುದ್ರ ಇತರರಿದ್ದರು.