ಉಚಿತ ಹೆಲ್ಮೆಟ್ ವಿತರಣೆ Helmet 
ರಾಜ್ಯ

ಶಿರಸ್ತ್ರಾಣ ಧರಿಸಿ ಜೀವ ಉಳಿಸಿ Helmet

ಮಡಿವಾಳ: ಜೀವ ಮತ್ತು ಜೀವನ ಅತ್ಯಂತ ಅಮೂಲ್ಯ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸಿ ವಾಹನ ಚಾಲನೆ ಮಾಡಿ ಎಂದು ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹೂಡಿ ವಿಜಯ ಕುಮಾರ್​ ತಿಳಿಸಿದರು.
ಮಾಲೂರು ತಾಲೂಕು ತೊರ್ನಹಳ್ಳಿಯ ಶ್ರೀ ಸಫಲಾಂಭ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮಾಸ್ತಿ ರಮೇಶ್​ ನೀಡಿದ ಹೆಲ್ಮೆಟ್​ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ, ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ದ್ವಿಚಕ್ರ ವಾಹನಗಳೇ ಹೆಚ್ಚು ಅಪಘಾತಕ್ಕೀಡಾಗುತ್ತವೆ. ಅಪಘಾತಗಳಲ್ಲಿ ಹೆಲ್ಮೆಟ್​ ಧರಿಸದೆ ಸಾವನ್ನಪ್ಪಿರುವರ ಸಂಖ್ಯೆ ಹೆಚ್ಚಾಗಿದೆ. ಹೆಲ್ಮೆಟ್​ ಧರಿಸದಿದ್ದರೆ ತಲೆಗೆ ಪೆಟ್ಟಾದಾಗ ಸಾಯುವ ಸಂಭವ ಹೆಚ್ಚಿರುತ್ತದೆ ಎಂದರು.
ಸಮಾಜ ಸೇವಕ ಮಾಸ್ತಿ ರಮೇಶ್​ ಮಾತನಾಡಿ, ಅಮೂಲ್ಯ ಜೀವ ಉಳಿಸಿಕೊಳ್ಳಲಿ ಎಂಬ ಕಾರಣಕ್ಕೆ Helmet ಈ ಭಾಗದ ವಾಹನ ಸವಾರರಿಗೆ ಹೆಲ್ಮೆಟ್​ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಯೊಬ್ಬರಿಗೂ ಹೆಲ್ಮೆಟ್​ ನೀಡಲಾಗುತ್ತಿದೆ ಎಂದರು.
ನಗರಸಭೆ ಮಾಜಿ ಸದಸ್ಯ ಭಾನುತೇಜ, ಶ್ರೀನಿವಾಸ್​ಗೌಡ, ಚಂದ್ರಾರೆಡ್ಡಿ, ರೋಜಾ ರಾಜಪ್ಪ, ಶ್ರೀನಿವಾಸ್​, ಮಂಜು, ಮಲ್ಲೇಶ್​, ಶ್ರೀನಾಥ್​, ಮಧುಚಂದ್ರ, ಮನೋಹರ್​, ಆನಂದ್​, ರಾಮಪ್ಪ, ಪ್ರಭು, ವೆಂಕಟೇಶ್​ ರಾಹುಲ್​ ಇದ್ದರು.