ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿ helmet
- ಎನ್ಡಿಎ ಮುಖಂಡ ಹರಿನಾಥರೆಡ್ಡಿ ಹೇಳಿಕೆ
ಬಾಗೇಪಲ್ಲಿ: ಕುಟುಂಬಕ್ಕೆ ಆಸರೆ ಆಗಿರುವ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬದ ಸದಸ್ಯರು ಅನುಭವಿಸುವ ನೋವುವನ್ನು ತುಂಬಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಆದ್ದರಿಂದ ಸುರಕ್ಷತೆ ದೃಷ್ಠಿಯಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಎನ್ಡಿಎ ಮುಖಂಡ ಹರಿನಾಥರೆಡ್ಡಿ ತಿಳಿಸಿದರು.helmet
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದಲ್ಲಿ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ಯಿಂದ ಆಯೋಜಿಸಿದ್ದ ತೊಳ್ಳಪಲ್ಲಿ ಮತ್ತು ಪಾತಪಾಳ್ಯ ಗ್ರಾಪಂ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪೋಲಿಸರು ದಂಡ ವಿಧಿಸುತ್ತಾರೆಂಬ ಕಾರಣಕ್ಕೆ ಹೆಲ್ಮೆಟ್ ಧರಿಸುವ ಚಾಳಿ ಬಿಟ್ಟು ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಹೆಲ್ಮೆಟ್ ಧರಿಸಬೇಕು. ಗುಡಿಬಂಡೆ, ಬಾಗೇಪಲ್ಲಿ, ಚೇಳೂರು ತಾಲೂಕಿನಲ್ಲಿ 40 ಸಾವಿರ ಹೆಲ್ಮೆಟ್ ವಿತರಿಸಲಿದ್ದೇವೆ, ಟ್ರಸ್ಟ್ಯಿಂದ ವಿತರಿಸಿರುವ ಹೆಲ್ಮೆಟ್ ಧರಿಸುವುದರಿಂದ ಕನಿಷ್ಠ 10 ಪ್ರಾಣಗಳು ಉಳಿದರೂ ನಮ್ಮ ಸಮಾಜ ಸೇವೆಗೆ ಸಾರ್ಥಕತೆ ಸಿಗುತ್ತದೆ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಹೆಲ್ಮೆಟ್ ಧರಿಸವುದನ್ನು ಪೊಲೀಸ್ ಇಲಾಖೆ ಕಡ್ಡಾಯ ಮಾಡಿದ್ದರೂ ಬೈಕ್ ಸವಾರರು ರ್ನಿಲಕ್ಷ$್ಯ ತೋರುತ್ತಿರುವುದು ಒಳ್ಳೆಯದಲ್ಲ. ಹೆಲ್ಮೆಟ್ಗಳನ್ನು ಧರಿಸಿ ಪ್ರಾಣ ಉಳಿಸಿಕೊಂಡಾಗ ಮಾತ್ರ ಸೇವೆಗೆ ತಕ್ಕ ಪ್ರತಿಫಲ ನೀಡಿದಂತಾಗುತ್ತದೆ ಎಂದರು.
ತೊಳ್ಳಪಲ್ಲಿ ಮತ್ತು ಪಾತಪಾಳ್ಯ ಗ್ರಾಪಂ ವ್ಯಾಪ್ತಿಯಲ್ಲಿರುವ 4 ಸಾವಿರ ಬೈಕ್ ಸವಾರರಿಗೆ ಚಾರಿಟಬಲ್ ಟ್ರಸ್ಟ್ಯಿಂದ ಹೆಲ್ಮೆಟ್ ವಿತರಿಸಿದರು.ತಾಪಂ ಮಾಜಿ ಸದಸ್ಯ ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಗ್ರಾಪಂ ಅಧ್ಯಕ್ಷ ಮಂಜುನಾಥ, ಮುಖಂಡರಾದ ಜೆ.ಪಿ.ಚಂದ್ರಶೇಖರರೆಡ್ಡಿ, ಸುದರ್ಶನ್ನಾಯ್ಡು, ವಕೀಲ ಸತೀಶ್ ಕುಮಾರ್, ಮಹೇಶ್ ಸ್ವಾಮಿ, ಬೈರಾರೆಡ್ಡಿ, ರಾಮಪ್ಪ, ಚಿನ್ನಪ್ಪಯ್ಯ, ವೆಂಕಟ್ ಇದ್ದರು.