ಹನುಮಸಾಗರದಲ್ಲಿ ಪೊಲೀಸ್ ಇಲಾಖೆಯಿಂದ ಭಾನುವಾರ ಹೆಲ್ಮೆಟ್ ಜಾಗೃತಿ ಮೂಡಿಸಲು ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು. ಪಿಎಸ್‌ಐ ಧನುಂಜಯ ಹಿರೇಮಠ, ಎಎಸ್‌ಐಗಳಾದ ಶಿವಕುಮಾರ ಹಿರೇಮಠ, ಬಸನಗೌಡ ಪಾಟೀಲ್, ಶಂಕರ ಮೇಟಿ, ಸಿಬ್ಬಂದಿ ಇದ್ದರು.
- ಪಿಎಸ್‌ಐ ಧನುಂಜಯ ಹಿರೇಮಠ ಸಲಹೆ
ಹನುಮಸಾಗರ: ದ್ವಿಚಕ್ರ ವಾಹನ ಸವಾರರು ತಪ್ಪದೇ ಹೆಲ್ಮೆಟ್ ಧರಿಸಬೇಕು ಎಂದು ಪಿಎಸ್‌ಐ ಧನುಂಜಯ ಹಿರೇಮಠ ಹೇಳಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡ ಹೆಲ್ಮೆಟ್ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಾಹನ ಸವಾರ ಅಲ್ಲದೇ ಹಿಂಬದಿಯಲ್ಲಿ ಕುಳಿತುಕೊಂಡವರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು.
ಅಪಘಾತದ ವೇಳೆ ತಲೆಗೆ ಗಂಭೀರ ಗಾಯವಾಗುವುದನ್ನು ತಡೆದು, ಜೀವಕ್ಕೆ ಹಾನಿ ಆಗುವುದನ್ನು ಹೆಲ್ಮೆಟ್ ತಡೆಗಟ್ಟುತ್ತದೆ ಎಂದರು.
ಪ್ರೊಬೇಷನರಿ ಪಿಎಸ್‌ಐ ಗೋಣಿಬಸಪ್ಪ ಮಾತನಾಡಿ, ಬೈಕ್ ಸವಾರರು ಐಎಸ್‌ಐ ಮಾನ್ಯತೆ ಪಡೆದ ಹೆಲ್ಮೆಟ್ ಧರಿಸಬೇಕು.
ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಎಂದರು.