ಬಸವಕಲ್ಯಾಣದ ಜೆಸ್ಕಾಂ ಶಾಖಾ ಕಚೇರಿಯ ಹತ್ತಿರ ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ತಾಲೂಕು ಸಮಿತಿಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ ಉದ್ಘಾಟಿಸಿದರು. ವೀರಶೆಟ್ಟಿ ಖ್ಯಾಮಾ, ರಾಹುಲ್ ಇಜಾರೆ, ಜಯರಾಮ ಗಾಯಕವಾಡ, ಅರ್ಷದ್ ಮಹಾಗಾಂವಿ ಇತರರಿದ್ದರು.
- ಸಿ.ರಮೇಶ ಹೇಳಿಕೆ
- ಕಲ್ಯಾಣದಲ್ಲಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಬಸವಕಲ್ಯಾಣ: ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರ ಮಾಡಲು ಬಿಡುವುದಿಲ್ಲ ಎಂದು ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ ಹೇಳಿದರು.
ನಗರದ ಜೆಸ್ಕಾಂ ಕಚೇರಿಯ ಹತ್ತಿರ ಬುಧವಾರ ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ತಾಲೂಕು ಸಮಿತಿಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲೈನ್ಮನ್ಗಳು ಕಾಮಗಾರಿ ಮಾಡುವ ವೇಳೆ ಅನಾಹುತವಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಜೆಸ್ಕಾಂನಿಂದ 5 ಲಕ್ಷ ರೂ.ವರೆಗೆ ಪರಿಹಾರ ಧನ ಒದಗಿಬೇಕು ಎನ್ನುವ ಸಂಘದ ಬೇಡಿಕೆ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಾತನಾಡಿ, ಎಲ್ಲ ಜಿಲ್ಲಾ ಹಾಗೂ ತಾಲೂಕು ಸಮಿತಿಯ ವಿದ್ಯುತ್ ಗುತ್ತಿಗೆದಾರರಿಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಸಂಘ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಜೆಸ್ಕಾಂ ಉಪ ವಿಭಾಗ ಎಇಇ ರಾಹುಲ್ ಇಜಾರೆ ಮಾತನಾಡಿ, ಇಲಾಖೆ ಅಧಿಕಾರಿ ಮತ್ತು ಗುತ್ತಿಗೆದಾರರು ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಜನರಿಗೆ ಉತ್ತಮ ಸೇವೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಜಯರಾಮ ಗಾಯಕವಾಡ, ಸಂಘದ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ಅರ್ಷದ್ ಮಹಾಗಾಂವಿ ಮಾತನಾಡಿದರು. ಜೆಸ್ಕಾಂ ಉಪ ವಿಭಾಗದ ಶಾಖಾಧಿಕಾರಿಗಳಾದ ಲಿಂಗರಾಜ್ ಬಿರಾದಾರ, ಮಾದೇವಲಾಲ್, ರಾಜ್ಯದ ಕಾರ್ಯಕಾರಿ ಸಮಿತಿಯ ಸದಸ್ಯ ರಾಜಕುಮಾರ ಘಾಳೆ, ಜಿಲ್ಲಾಧ್ಯಕ್ಷ ರವಿಕಿರಣ ಹೊನ್ನಾ, ಜಿಲ್ಲಾ ಕಾರ್ಯದರ್ಶಿ ವಿಲಾಸ ರಾಠೋಡ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುನೀಲ ರಾಠೋಡ್, ಹುಮನಾಬಾದ್ ತಾಲೂಕು ಸಮಿತಿ ಅಧ್ಯಕ್ಷ ದತ್ತು ವರ್ಮ, ಉಪಾಧ್ಯಕ್ಷ ಆಕಾಶ, ಕಾರ್ಯದರ್ಶಿ ಅಶ್ವಿನ್ ಶಿವನೇರಿ, ಮಲ್ಲಪ್ಪ ಚಿನಕೇರಾ, ರಮೇಶ ಬಂಶೆಟ್ಟಿ, ಭೀಮ್ ರಾಠೋಡ್ ಇತರರಿದ್ದರು
ಸಿದ್ದರಾಮ ಹಾರಕೂಡೆ ಸ್ವಾಗತಿಸಿದರು. ಬೂದಯ್ಯ ಮಠಪತಿ ವಂದಿಸಿದರು. ತಾಜೋದ್ದೀನ್ ಪಟೇಲ್ ನಿರೂಪಣೆ ಮಾಡಿದರು. ರಾಕೇಶ ಪುರವಂತ ಪ್ರಾರ್ಥನಾ ಗೀತೆ ಹಾಡಿದರು. ಸಂಘದ ತಾಲೂಕು ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.
ತಾಲೂಕು ಸಮಿತಿ: ಜಯರಾಮ ಗಾಯಕವಾಡ (ಅಧ್ಯಕ್ಷ) ಸಿದ್ದರಾಮ ಹಾರಕೂಡೆ (ಉಪಾಧ್ಯಕ್ಷ), ಮಾದೇವಸ್ವಾಮಿ (ಪ್ರಧಾನ ಕಾರ್ಯದರ್ಶಿ), ರಾಕೇಶ ಪುರವಂತ್(ಕಾರ್ಯದರ್ಶಿ), ಫಿರೋಜ್ ಖಾನ್ (ಸಂಘಟನಾ ಕಾರ್ಯದರ್ಶಿ), ಹಿದಾಯತ್ ಖಾನ್ (ಕೋಶಾಧ್ಯಕ್ಷ),ಇಸ್ಮಾಯಿಲ್ ರಾಜೇಶ್ವರ, ಶ್ರೀಕಾಂತ ಹರಳೆ, ಜಗದೀಶ ಚನ್ನಮಲ್ಲೆ, ಸಚಿನ ಪಾಟೀಲ್, ಗುರುಪಾದಯ್ಯ ಸ್ವಾಮಿ (ನಿರ್ದೇಶಕರು).