ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಎಸ್ಐಆರ್ ಜನಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯ ಸುಭಾಷ ರಾಠೋಡ್ ಮಾತನಾಡಿದರು. ಅನೀಲಕುಮಾರ ಜಮಾದಾರ, ನರಸಿಂಹಲು ಕುಂಬಾರ, ಬಸವರಾಜ ಮಾಲಿ, ಮಲ್ಲಿಕಾರ್ಜುನ ಬುಶೆಟ್ಟಿ, ಪ್ರವಿಣ ತೇಗಲತಿಪ್ಪಿ, ಆನಂದ ಟೈಗರ್ ಇದ್ದರು.
- ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಹೇಳಿಕೆ
- ಚಿಂಚೋಳಿಯಲ್ಲಿ ಜನಜಾಗೃತಿ ಕಾರ್ಯಕ್ರಮ
ಚಿಂಚೋಳಿ: ದೇಶದಲ್ಲಿ ಒಳ ನುಸುಳುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಲಿ, ಈ ನಿಟ್ಟಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸೇರಿ ಯಾವುದೇ ಪ್ರಕ್ರಿಯೆ ಕೈಗೊಂಡರು ನಾವು ವಿರೋಧಿಸುವುದಿಲ್ಲ. ಆದರೂ ಬಿಜೆಪಿ ಸುಳ್ಳು ಹೇಳಿಕೊಂಡು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯ ಸುಭಾಷ ರಾಠೋಡ್ ಹೇಳಿದರು.
ಶ್ರೀ ಚನ್ನಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ನಿಂದ ಬುಧವಾರ ಹಮ್ಮಿಕೊಂಡ ಎಸ್ಐಆರ್ ಕುರಿತು ಜನಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಪ್ರಕ್ರಿಯೆ, ಪ್ರಸ್ತುತ ನಡೆಯುತ್ತಿರುವುದು ತೀವ್ರ ಪರಿಷ್ಕರಣೆ ಆಗಿದೆ. ಈ ಪ್ರಕ್ರಿಯೆಯಿಂದಾಗಿ ಇದೀಗ ರಾಜ್ಯದಲ್ಲಿ ಯಾರು ಮತದಾರರಲ್ಲ, ಎಲ್ಲರೂ ಮತ್ತೊಂದು ಅರ್ಜಿ ಸಲ್ಲಿಸಿ ಮತದಾನದ ಹಕ್ಕು ಪಡೆಯುವ ದುಸ್ಥಿತಿ ಬಂದೋದಗಿದೆ. ಇಂತಹ ಪ್ರಕ್ರಿಯೆಗೆ ಕಾಂಗ್ರೆಸ್ ವಿರೋಧವಿದೆ. ೇತ್ರದಲ್ಲಿ 99.35 ಪ್ರತಿಶತ ಪೂರ್ವವಾಗಿ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದೀಗ ಅರ್ಜಿ ಭರ್ತಿ ಮಾಡಿ ಸಲ್ಲಿಸುವಬೇಕು ಎಂದರು.
ರಾಜ್ಯ ಬಾಲಭವನ ಉಪಾಧ್ಯ ಅನೀಲಕುಮಾರ ಜಮದಾರ, ಬ್ಲಾಕ್ ಕಾಂಗ್ರೆಸ್ ಅಧ್ಯ ಬಸವರಾಜ ಮಾಲಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಉಪಾಧ್ಯ ನರಸಿಂಹಲು ಕುಂಬಾರ, ಪ್ರಮುಖರಾದ ಮಲ್ಲಿಕಾರ್ಜುನ ಬುಶೆಟ್ಟಿ, ಪ್ರವಿಣ ತೇಗಲತಿಪ್ಪಿ, ಆನಂದ ಟೈಗರ್, ಸಂಜುಕುಮಾರ ರಾಣಾಪುರ, ಅಜೀತ್ ಪಾಟೀಲ್, ಅಬ್ದುಲ್ ಬಾಸೀದ್, ಶ್ರೀನಿವಾಸ ಭಂಡಿ, ಲ್ಮಣ ಅವಂಟಿ, ಮಹಿಮೂದ್ ಪಟೇಲ್, ರಾವೇಂದ್ರ ಗುತ್ತೇದಾರ್, ಆರ್.ಗಣಪತರಾವ ಇತರರಿದ್ದರು.
ಆರ್ಎಸ್ಎಸ್ ಕಾರ್ಯಚಟುವಟಿಕೆಗೆ ನಮ್ಮ ವಿರೋಧವಿಲ್ಲ. ಸಂದ ನೋಂದಣಿ ಬಹಿರಂಗಪಡಿಸಿ ಕಾನೂನಾತ್ಮಕವಾಗಿ ನಡೆದುಕೊಳ್ಳಲಿ. ದೇಶಕ್ಕಾಗಿ ಸಮರ್ಪಣೆ ಭಾವನೆ ಇರಬೇಕು. ಭಾರತ, ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಸಂವಿಧಾನ ಬದ್ಧವಾಗಿ ನಡೆದುಕೊಳಬೇಕು ಎಂದು ಸಚಿವ ರ್ಖಗೆ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ?
> ಸುಭಾಷ ರಾಠೋಡ್, ಉಪಾಧ್ಯ, ಕೆಪಿಸಿಸಿ