ಗುರುಮಠಕಲ್ ಮತೇತ್ರದ ಎಲ್ಹೇರಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಶಂಕುಸ್ಥಾಪನೆ ನೆರವೇರಿಸಿದರು.
- ಶಾಸಕ ಶರಣಗೌಡ ಕಂದಕೂರ ಆಗ್ರಹ
- ಎಲ್ಹೇರಿ ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ
ಗುರುಮಠಕಲ್: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಾಂತ್ವಾನ ಬೇಡ ಪರಿಹಾರ ನೀಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
ಮತೇತ್ರದಲ್ಲಿ ಸೋಮವಾರ ಯಂಪಾಡ ಗ್ರಾಮದಲ್ಲಿ 80 ಲಕ್ಷ, ಶಿವಪೂರದಲ್ಲಿ 1.20 ಕೋಟಿ, ಎಲ್ಹೇರಿ ಗ್ರಾಮದಲ್ಲಿ 1 ಕೋಟಿ ರಸ್ತೆ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮಳೆ ಬಾರದೆ ಕಲ್ಯಾಣ ಕರ್ನಾಟಕದ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಖ್ಯಮಂತ್ರಿ ಸೇರಿ ಹಲವು ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಸಭೆ ನಡೆಸಿ ಸಾಂತ್ವಾನ ಹೇಳುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಪರಿಹಾರ ನೀಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ನಮಗೆ ಸಾಂತ್ವಾನ ಬೇಡ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಂದ ಪುಟ್ಟ ಹೋದ ಪುಟ್ಟ ಆಗಬಾರದು. ಮಾತೃಹೃದಯಿಯಾಗಲಿ ಭೀಮಾ, ಕೃಷ್ಣಾಕ್ಕೆ ನೀರಿಲ್ಲ. ಜನ ಜಾನುವಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ನಮ್ಮ ಭಾಗದಲ್ಲಿನ ಕುಡಿವ ನೀರಿನ ಸಮಸ್ಯೆ ಬಗೆ ಹರಿಸಬೇಕು. ಅಲ್ಲದೆ ಶಾಲೆ ಮತ್ತು ಆಸ್ಪತ್ರೆಗಳನ್ನು ಕಟ್ಟಿಕೊಂಡಿದ್ದೇವೆ. ಆದರೆ ಅವುಗಳಲ್ಲಿ ಸಮರ್ಪಕ ಶಿಕ್ಷಕರು ಮತ್ತು ವೈದ್ಯರನ್ನು ನೇಮಕ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಒಣ ಬೇಸಾಯವುಳ್ಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಖ್ಯಮಂತ್ರಿಗಳ ರಾಜಕೀಯ ಗುರು ರ್ಖಗೆ ಅವರು ಹೇಳಿದಂತೆ ಅಭಿವೃದ್ಧಿ ಹೊಳೆ ಹರಿಸುವುದು ಬೇಡ. ಮೈಸೂರು ಭಾಗದಂತೆ ಅಭಿವೃದ್ಧಿ ಮಾಡಿ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಸಚಿವಾಲಯ ೂಷಣೆ ಮಾಡಿ 2.5 ವರ್ಷ ಕಳೆಯಿತು. ಈವರೆಗೆ ಯಾವುದೇ ಕೆಲಸವಾಗಿಲ್ಲ, ಅವರಂತೆ ನೀವು ಕೂಡ ಮರೆಯಬಾರದು ಎಂದು ಅವರು ಹೇಳಿದರು.
ಗ್ರಾಪಂನಲ್ಲಿ ಪಿಡಿಒಗಳು ಹಳ್ಳಿಗಳಲ್ಲಿ ಇರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಸಲು ಪ್ರಯತ್ನಿಸಬೇಕು. ಗ್ರಾಮದಲ್ಲಿ ಕೊಳವೆ ಬಾವಿ ಬೇಡಿಕೆ ಇದೆ. ಆದರೆ ಇಲ್ಲಿಂದಲೇ ಬೆಳೆದು ಹೋದವರು ನಮಗೆ ಅನುದಾನವನ್ನೇ ಕೊಡಲಿಲ್ಲ ಎಂದರು. ಕೆಕೆಆರ್ಡಿಯಿಂದ ಅನುದಾನ ಬಿಡುಗಡೆಯಾಗಲಿದ್ದು ಗ್ರಾಮಸ್ಥರನ್ನು ಕರೆದು ನಿಮಗೆ ಅಗತ್ಯವಿರುವ ಕೆಲಸ ಮಾಡಿಕೊಡುವೆ ಎಂದು ಭರವಸೆ ನೀಡಿದರು.
ಈ ವೇಳೆ ಪಿಆರ್ಇ ಎಇಇ ಶರಣಬಸಪ್ಪ, ಲೋಕಪಯೋಗಿ ಇಲಾಖೆ ವಿಶೇಷ ಉಪ ವಿಭಾಗ ಕೈಲಾಸ ಅನ್ವಾರ, ಉಪ ತಹಸೀಲ್ದಾರ್ ಅಶೋಕ ರಾಜಗಿರೆ, ಭೂ ಸೇನಾ ನಿಗಮದ ಬನ್ನಪ್ಪ ಕೋಮಾರ, ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಹೂಗಾರ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್, ವಿಶ್ವನಾಥ, ನಾಗರತ್ನ ಎಲ್ಹೇರಿ, ಜಿಲ್ಲಾಧ್ಯಕ್ಷ ಸುಭಾಶಚಂದ್ರ ಕಟಕಟಿ, ಶರಣು ಅವುಂಟಿ, ಅಜಯರಡ್ಡಿ ಎಲ್ಹೇರಿ, ಮಾಜಿ ತಾಪಂ ಅಧ್ಯಕ್ಷ ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ರಾುನಾಥರೆಡ್ಡಿ ಗವಿನೋಳ, ಮಲ್ಲಿಕಾರ್ಜುನ ಆಡಿಕಿ, ಶರಣಗೌಡ ಮಾಲಿ ಪಾಟೀಲ್, ಸಿದ್ದಣಗೌಡ ದಳಪತಿ ಎಲ್ಹೇರಿ, ಬಸವರಾಜ ಕಣೇಕಲ್, ಸಿದ್ದರಾಮರಡ್ಡಿ ಎಲ್ಹೇರಿ, ಮುನ್ನಾ ಜಿಬಿ ತಾಂಡಾ, ನಾಗರಡ್ಡಿ ವೆಂಕಟರಾಯ, ಚಂದ್ರು ಮಾಲಿ ಪಾಟೀಲ್ ಇತರರಿದ್ದರು.
ಕೆಲಸ ಮಾಡದ ಅಧಿಕಾರಿಗಳ ನಟ್ಬೋಲ್ಟ್ ಟೈಟ್ ಮಾಡಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಆಗಲಿ ಎನ್ನುವ ಮೂಲ ಉದ್ದೇಶದಿಂದ ಸರ್ಕಾರ 5 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಆದರೆ ಅಲ್ಲಿನ ಆಯುಕ್ತರಾದಿಯಾಗಿ ಹಲವು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕೂಡಿದ್ದು, ಕೆಲಸ ಮಾಡದ ಇಂತಹ ಅಧಿಕಾರಿಗಳ ನಟ್ಬೋಲ್ಟ್ ಟೈಟ್ ಮಾಡಿದಾಗ ಮಾತ್ರ ಅಭಿವೃದ್ಧಿಯಾಗುತ್ತದೆ. ಇದರಿಂದ ಸರ್ಕಾರಕ್ಕೂ ಮತ್ತು ಜನಪ್ರತಿನಿಧಿಗಳು ಕೆಟ್ಟ ಹೆಸರು ಬರುವುದು ತಪ್ಪುತ್ತದೆ. ಸರ್ಕಾರಿ ಅನುದಾನ ಖರ್ಚು ಮಾಡದೇ ಇರುವ ಅಧಿಕಾರಿಗಳಿ ಚಳಿ ಬಿಡಿಸಬೇಕು ಎಂದು ಅವರು ಸಿಎಂಗೆ ಮನವಿ ಮಾಡಿದ್ದಾರೆ.