ಅಮರ್ಜಾ ಕೆಳಭಾಗದ ಎಡದಂಡೆ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಆಳಂದನಲ್ಲಿ ಗ್ರೇಡ್​&2 ತಹಸೀಲ್ದಾರ್​ಗೆ ರೈತರು ಮನವಿಪತ್ರ ಸಲ್ಲಿಸಿದರು. ಭೀಮಶಾ ದೊಂಡಿ, ಪಂಡಿತ ಪೂಜಾರಿ, ಲಕ್ಕಪ್ಪ ಮೆಲ್ಕೇರಿ ಇದ್ದರು. 
ರಾಜ್ಯ

ಅಮರ್ಜಾ ಎಡದಂಡೆ ಕಾಲುವೆಗೆ ನೀರು ಹರಿಸಿ

ಪ್ರಮುಖ ಮುಖ್ಯಾಂಶಗಳು

  • ಆಳಂದನಲ್ಲಿ ರೈತರಿಂದ ಗ್ರೇಡ್​&2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಆಳಂದ: ಬಿಸಿಲಿನ ತಾಪದಿಂದ ಜಲಮೂಲಗಳು ಸಂಪೂರ್ಣ ಬತ್ತಿಹೋಗಿದ್ದು, ಜನ& ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೂಡಲೇ ಅಮರ್ಜಾ ಕೆಳಭಾಗದ ಎಡದಂತೆ ಕಾಲುವೆಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಕುರಿತು ಗ್ರೇಡ್​&2 ತಹಸೀಲ್ದಾರ್​ ಭೀಮಣ್ಣ ಕುದರಿ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದ್ದು, ಧಂಗಾಪುರ, ಬಟ್ಟರಗಾ, ನಿಂರ್ಬಗಾ ಗ್ರಾಮದ ರೈತರ ಹೊಲಗಳಲ್ಲಿನ ಬೋರ್​ವೆಲ್​, ತೆರೆದ ಬಾವಿಗಳು ಬತ್ತಿ ಹೋಗಿವೆ. ಕಬ್ಬಿಗೆ ನೀರುಣಿಸಲು ಪರದಾಡುವಂತಾಗಿದೆ. ಈಗಾಗಲೇ ಸಾಕಷ್ಟು ಬೆಳೆ ನೀರಿಲ್ಲದೆ ಒಣಗಿ ಹೋಗಿದೆ. ಹೀಗಾಗಿ ಈ ವೇಳೆ ಕಾಲುವೆಗೆ ನೀರು ಹರಿಸಿದೆ ಅನುಕೂಲವಾಗಲಿದೆ ಎಂದು ರೈತರು ಕೋರಿದ್ದಾರೆ.
ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳಿಗೂ ಮನವಿ ಮಾಡಲಾಗಿದ್ದು, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಬೆಳೆ ಮಾತ್ರವಲ್ಲದೆ ಜಾನುವಾರುಗಳಿಗೂ ಕುಡಿಯಲು ನೀರಿಲ್ಲ. ಹೀಗಿರುವ ಎನ್​ಎಸ್​ಎಲ್​ ಕಾರ್ಖಾನೆ ಕಬ್ಬು ನೀಡಿದ ರೈತರಿಗೆ ಈವರೆಗೂ ಹಣ ನೀಡಿಲ್ಲ. ಇತ್ತ ಕೃಷಿ ಮಾಡಬೇಕೆಂದರೆ ನೀರಿಲ್ಲ, ಜಾನುವಾರುಗಳಿಗೆ ಮೇವು ಖರೀದಿಸಲು ಹಣವಿಲ್ಲ. ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಅಮರ್ಜಾ ಡ್ಯಾಮ್​ನ ಝೀರೋ ಕಿಮೀ. ಇಂದ 30 ಕಿಮೀ. ವರೆಗಿನ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ. ಕೂಡಲೇ ಸ್ವಚ್ಛಗೊಳಿಸಿ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ರೈತರದ ಭೀಮಶಾ ದೊಂಡಿ, ಪಂಡಿತ ಪೂಜಾರಿ, ಲಕ್ಕಪ್ಪ ಮೇಲಿನಕೇರಿ, ಸಿದ್ದಪ್ಪ ಉದನೂರು, ಗೌಡಪ್ಪ ಶೇಗಜಿ ಇತರರಿದ್ದರು.