ಗುರುಮಠಕಲ್​ ಮತೇತ್ರದ ನವನಗರ ಬಡಾವನೆಯಲ್ಲಿ ಕೆಪಿಸಿಸಿ ಸದಸ್ಯ ಶರಣಪ್ಪ ಮಾನೇಗರ ಎರಡು ಟ್ಯಾಂಕರ್​ ಮೂಲಕ ಸಾರ್ವಜನಿಕರಿಗೆ ಉಚಿತ ನೀರು ಸರಬರಾಜು ಮಾಡುತ್ತಿರುವುದು. 
ರಾಜ್ಯ

ಟ್ಯಾಂಕರ್​ ಮೂಲಕ ನೀರು ಸರಬರಾಜು

ಬಾಬುರಾವ ಯಡ್ರಾಮಿ
ಗುರುಮಠಕಲ್​: ಮತೇತ್ರದ ಯರಗೋಳ ಗ್ರಾಮದಲ್ಲಿ ಕೆಪಿಸಿಸಿ ಸದಸ್ಯ ಶರಣಪ್ಪ ಮಾನೇಗರ್​ ಅವರು ಸ್ವಂತ ಖರ್ಚಿನಿಂದ ಟ್ಯಾಂಕರ್​ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಕಾರ್ಯ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ೇತ್ರದ ಹಲವು ಗ್ರಾಮಗಳು ಕುಡಿಯುವ ನೀರಿನ ಅಭಾವ ಕಂಡಿದೆ. ಅಧಿಕಾರಿಗಳು ನೀರಿನ ಸಮಸ್ಯೆ ಬಾರದಂತೆ ಕ್ರಮ ತೆಗೆದುಕೊಳ್ಳುತ್ತಿದ್ದರೂ ಹಲವು ಕಡೆ ನೀರಿನ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮ ಸ್ವಗ್ರಾಮದಲ್ಲಿ ನಿತ್ಯ ಎರಡು ಟ್ಯಾಂಕರ್​ ಮೂಲಕ ಜನರಿಗೆ ನಿರಿನ ವ್ಯವಸ್ಥೆಯನ್ನು ಕಾಂಗ್ರೆಸ್​ ಕೆಪಿಸಿಸಿ ಸದಸ್ಯ ಶರಣಪ್ಪ ಮಾನೇಗರ ಮಾಡಿದ್ದಾರೆ.
ಯರಗೋಳ ಗ್ರಾಮದ ಬಸ್​ ನಿಲ್ದಾಣ ಮತ್ತು ನವನಗರ ಬಡಾವಣೆ ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದ ವಿಸ್ತೀರ್ಣಗೊಂಡಿರುವ ಈ ಏರಿಯಾದಲ್ಲಿ ನೀರು ಪೂರೈಸಲು ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹೇಳಿದರೂ ಸಮಯ ಹಿಡಿಯುತ್ತದೆ. ಜನರು ನೀರಿನಿಂದ ತತ್ತರಿಸಿ ಹೋಗುತ್ತಾರೆ. ಇದಕ್ಕಾಗಿ ನಾನೇ ಸ್ವಂತ ಖರ್ಚಿನಿಂದ ನೀರಿನ ವ್ಯವಸ್ಥೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಮಾನೇಗರ ತಿಳಿಸಿದರು.