ನಗರದ ವಿವಿಧೆಡೆ ನೀರು ಸರಬರಾಜು ವ್ಯತ್ಯಯ; ಕಾವೇರಿ 2ನೇ ಹಂತದ ಪೈಪ್‌ಲೈನ್ ದುರಸ್ಥಿ 
ರಾಜ್ಯ

ಶನಿವಾರ ನಗರದ ವಿವಿಧೆಡೆ ನೀರು ಸರಬರಾಜು ವ್ಯತ್ಯಯ; ಕಾವೇರಿ 2ನೇ ಹಂತದ ಪೈಪ್‌ಲೈನ್ ದುರಸ್ಥಿ

ಪ್ರಮುಖ ಮುಖ್ಯಾಂಶಗಳು

  • ಶನಿವಾರ ನಗರದ ವಿವಿಧೆಡೆ ನೀರು ಸರಬರಾಜು ವ್ಯತ್ಯಯ
  • ಬಿಡಬ್ಲ್ಯೂಎಸ್‌ಎಸ್‌ಬಿಯಿಂದ ಕಾವೇರಿ 2ನೇ ಹಂತದ ಪೈಪ್‌ಲೈನ್ ದುರಸ್ಥಿ
  • ಮೈಸೂರು ರಸ್ತೆ ಸೇವಾ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವ್ಯತ್ಯಯ

ಬೆಂಗಳೂರು: ಕಾವೇರಿ2ನೇಹಂತದ 600 ಮಿ.ಮೀ.ವ್ಯಾಸದ ಮುಖ್ಯಕುಡಿಯುವ ನೀರಿನ ಕೊಳವೆಯಲ್ಲಿಉಂಟಾಗಿರುವ ಭಾರೀ ಸೋರಿಕೆಯನ್ನುತಡೆಗಟ್ಟಲು ಬೆಂಗಳೂರು ಜಲಮಂಡಳಿಯು(ಬಿಡಬ್ಲ್ಯೂಎಸ್‌ಎಸ್‌ಬಿ) ತುರ್ತುದುರಸ್ತಿ ಕಾಮಗಾರಿಯನ್ನುಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿಮೈಸೂರು ರಸ್ತೆ ಸೇವಾ ವ್ಯಾಪ್ತಿಯಹಲವು ಪ್ರದೇಶಗಳಲ್ಲಿ ಶನಿವಾರನೀರು ಸರಬರಾಜಿನಲ್ಲಿ ವ್ಯತ್ಯಯಉಂಟಾಗಲಿದೆ ಎಂದು ಬೆಂಗಳೂರುಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ಮನೋಹರ್ ತಿಳಿಸಿದ್ದಾರೆ.

ಸೌತ್‌ಎಂಡ್ವೃತ್ತದ ಮುಖಾಂತರ ಮೈಸೂರು ರಸ್ತೆಸೇವಾ ಪ್ರದೇಶಗಳಿಗೆ ಪ್ರತಿನಿತ್ಯ14 ಎಂಎಲ್‌ಡಿನೀರು ಸರಬರಾಜು ಮಾಡುವ ಕೊಳವೆಯಲ್ಲಿರಂಧ್ರ ಉಂಟಾಗಿ,ನೀರು ಪೋಲಾಗುತ್ತಿದೆ.ಆದ್ದರಿಂದ ಸೌತ್ಎಂಡ್ ರಸ್ತೆಯ ಸುರಾನ ಕಾಲೇಜುಬಳಿ ಇರುವ 24ಅಂಗುಲದ ಕವಾಟವನ್ನು8 ಗಂಟೆಗಳಕಾಲ ಬಂದ್ ಮಾಡಿ ದುರಸ್ತಿಕಾಮಗಾರಿಯನ್ನು ನಡೆಸಲಾಗುವುದುಎಂದು ತಿಳಿಸಿದ್ದಾರೆ.

ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು

* ಕಸ್ತೂರಬಾ ನಗರ

* ಬಾಪೂಜಿನಗರ

* ಶಾಮಣ್ಣ ಗಾರ್ಡನ್

* ಮಂಜುನಾಥನಗರ

* ಹೊಸಗುಡ್ಡದಹಳ್ಳಿ

* ಹಳೇಗುಡ್ಡದಹಳ್ಳಿ

* ಅರಾಫತ್ ನಗರ