ವಾಟೆಹೊಳೆ ಜಲಾಶಯದಿಂದ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದರು. 
ರಾಜ್ಯ

ವಾಟೆಹೊಳೆ ಜಲಾಶಯದಿಂದ ನಾಲೆಗೆ ನೀರು

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ವಾಟೆಹೊಳೆ ಜಲಾಶಯ
  • ನಾಲೆಗೆ ನೀರು
ಆಲೂರು: ತಾಲೂಕಿನ ವಾಟೆಹೊಳೆ ಜಲಾಶಯದಿಂದ ಶನಿವಾರ ರಾತ್ರಿ ನಾಲೆಗೆ ನೀರು ಹರಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಒಂದು ತಿಂಗಳಿನಿಂದ ಜಲಾಶಯದಿಂದ ನೀರು ಹರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಅಲ್ಲದೆ ಇತ್ತೀಚೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡರು ಎತ್ತಿನಹೊಳೆ ಯೋಜನೆ ಪರಿಶೀಲನೆ ಮಾಡಲು ಸಕಲೇಶಪುರಕ್ಕೆ ಬಂದ ಸಂದರ್ಭದಲ್ಲಿಯೂ ವಾಟೆಹೊಳೆ ಜಲಾಶಯದಿಂದ ನೀರು ಬಿಡಿಸಲು ಆದೇಶಿಸುವಂತೆ ಮನವಿ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಾಲೆಗೆ ನೀರು ಹರಿಸಲು ಆದೇಶಿಸಿದೆ ಎಂದರು.
15 ದಿನಗಳ ಮೊದಲು ನೀರು ಹರಿಸಿದ್ದರೆ ನಾಲಾ ಪ್ರದೇಶದ ವ್ಯಾಪ್ತಿಯಲ್ಲಿರುವ ಶೇ.50 ರಷ್ಟು ಬೆಳೆ ಉಳಿಯುತ್ತಿತ್ತು. ಸದ್ಯ ನೀರು ಹರಿಸಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.