Water from Appara Bhadra Project to Shira Lakes 
ರಾಜ್ಯ

ಅಪ್ಪರ ಭದ್ರಾ ಯೋಜನೆಯಿಂದ ಶಿರಾ ಕೆರೆಗಳಿಗೆ ನೀರು

ಶಿರಾ : ಅಪ್ಪರ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ ಶಿರಾ ತಾಲೂಕಿನ 85 ಕೆರೆಗಳಿಗೆ ನೀರು ಹರಿಯಲಿದ್ದು, ಯೋಜನೆ ಪೂರ್ಣಗೊಳ್ಳಲು ಇನ್ನೂ 4 ಸಾವಿರ ಕೋಟಿ ರೂ. ಅನುದಾನ ಅವಶ್ಯಕತೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದಲ್ಲಿ ನೂತನ ನಾಡಕಚೇರಿ ಕಟ್ಟಡ ಉದ್ಘಾಟನೆ ಹಾಗೂ 6 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ವಾತನಾಡಿದರು.
ಶಿರಾ ತಾಲೂಕಿನ ರೈಲ್ವೆ ಯೋಜನೆ ಕಾಮಗಾರಿ ತಿಮ್ಮರಾಜನಹಳ್ಳಿಯಿಂದ ತಾವರೆಕೆರೆ ಸಮೀಪದ ಉಜ್ಜನಕುಂಟೆವರೆಗೂ ನಡೆಯುತ್ತಿದ್ದು, ಭೂಮಿ ಕಳೆದುಕೊಂಡ ರೈತರಿಗೆ 480 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ರೈಲ್ವೆ ಕಾಮಗಾರಿ ಭರದಿಂದ ಸಾಗಿದ್ದು, 2028ರಲ್ಲಿ ಕ್ಷೇತ್ರದ ಜನ ರೈಲಿನಲ್ಲಿ ಮುಂಬೈಗೆ ಓಡಾಡುವ ಸ್ಥಿತಿ ನಿರ್ವಾಣವಾಗಲಿದೆ. ಅದೇ ರೀತಿ ಎತ್ತಿನಹೊಳೆ, ಅಪ್ಪರ ಭದ್ರ ಕಾಮಗಾರಿಗಳು ನನ್ನ ಅಧಿಕಾರವಧಿ ಪೂರ್ಣಗೊಳ್ಳುವ ಹೊತ್ತಿಗೆ ಮುಗಿಯಲಿದೆ. ಪ್ರಸಕ್ತ ವರ್ಷ ಸರ್ಕಾರ ಶಿರಾ ಕ್ಷೇತ್ರಕ್ಕೆ 105 ಕೋಟಿ ರೂ. ವಿವಿಧ ಯೋಜನೆಗಳಿಗೆ ಅನುದಾನ ನೀಡಿದೆ ಎಂದರು.
ರಾಜ್ಯ ಕಾಡುಗೋಲ್ಲ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಹಾರೋಗೆರೆ ಮಹೇಶ್ ವಾತನಾಡಿ, ತಾಯಿ ಮಕ್ಕಳ ಆಸ್ಪತ್ರೆ, ಪಾಲಿಟೆಕ್ನಿಕ್ ಕಾಲೇಜ್, ವಸತಿ ಶಾಲೆಗಳು, 17 ಗ್ರಾಪಂ ನೂತನ ಕಟ್ಟಡಗಳು, ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ತಹಸೀಲ್ದಾರ್ ಆನಂದಕುವಾರ್ ವಾತನಾಡಿದರು.
ಕಳ್ಳಂಬೆಳ್ಳದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಕಟ್ಟಡ ಕಟ್ಟಲು ಭೂಮಿಯ ಮಂಜೂರಾತಿ ಪತ್ರವನ್ನು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಾ.ನಾಗರಾಜು ಅವರಿಗೆ ಹಸ್ತಾಂತರಿಸಿದರು.
ತೋಟಗಾರಿಕಾ ಸಹಾಯಕ ನಿರ್ದೇಶಕ ಸುಧಾಕರ್, ಗ್ರಾಪಂ ವಾಜಿ ಅಧ್ಯಕ್ಷ ಸುರೇಶ್ ಬಾಬು, ಕೆಎಂಎಫ್ ವಾಜಿ ನಿರ್ದೇಶಕ ಬಾಲೇನಹಳ್ಳಿ ಪ್ರಕಾಶ್, ಸಿದ್ದಪ್ಪ, ವೈದ್ಯಾಧಿಕಾರಿ ಡಾ.ರಮೇಶ್, ತೋಟಗಾರಿಗೆ ಸಹಾಯಕ ನಿರ್ದೇಶಕ ಸುಧಾಕರ್ ಮತ್ತಿತರರು ಇದ್ದರು.