ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದ ಮುಖ್ಯ ಕ್ರಸ್ಟ್ ಗೇಟ್‌ಗಳ ನಿರ್ವಹಣೆಯನ್ನು ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ವೀಕ್ಷಿಸಿದರು. ಶಾಸಕರಾದ ರಾಜÁ ವೇಣುಗೋಪಾಲ ನಾಯಕ, ಸಿ.ಎಸ್.ನಾಡಗೌಡ, ಕೆಬಿಜೆಎನ್‌ಎಲ್ ಎಂಡಿ ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದರು. 
ರಾಜ್ಯ

ಭರ್ತಿಯಾದರೆ ಮಾತ್ರ ಬೆಳೆಗಳಿಗೆ ನೀರು

ಪ್ರಮುಖ ಮುಖ್ಯಾಂಶಗಳು

  • ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
  • ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಭೇಟಿ
ಸುರಪುರ : ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ ೮೬ ಟಿಎಂಸಿ ನೀರಿದ್ದು, ವರುಣ ಕೃಪೆಯಿಂದ ಭರ್ತಿಯಾದರೆ ಮಾತ್ರ ಕಾಲುವೆ ಮುಖಾಂತರ ಬೆಳೆಗಳಿಗೆ ನೀರು ಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿ ನಿರ್ವಹಣೆ ಕಾರ್ಯ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಮುಂಗಾರು ವಿ-Àಲವಾಗಿದ್ದರಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರು ಸಂಗ್ರಹದಲ್ಲಿ ಕುಸಿತ ಕಂಡಿದೆ. ಅದೇ ರೀತಿ ಆಲಮಟ್ಟಿ ಮತ್ತು ನಾರಾಯಣಪುರ ಅವಳಿ ಜಲಾಶಯಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ನೀರಿಲ್ಲ. ಇದ್ದ ನೀರು ಜನ-ಜಾನುವಾರುಗಳ ದಾಹ ತೀರಿಸಲು ಆದ್ಯತೆ ನೀಡಲಾಗಿದೆ. ಥರ್ಮಲ್ ವಿದ್ಯುತ್ ಸ್ಥಾವರ ಹಾಗೂ ಕೆರೆ ತುಂಬುವ ಯೋಜನೆಗಳಿಗೆ ನೀರು ಹರಿಸಬೇಕಿದೆ. ಕೃಷಿಗಾಗಿ ಕೇವಲ ೧೦ ಟಿಎಂಸಿ ನೀರು ಉಳಿಯುತ್ತದೆ. ಒಂದು ಬೆಳೆಗೆ ೬೭ ಟಿಎಂಸಿ ನೀರಿನ ಅಗತ್ಯವಿರುವ ಕಾರಣ ಮುಂಗಾರು ಬೆಳೆಗಳಿಗೆ ನೀರು ಸಿಗುವ ಸಾಧ್ಯತೆ ಕಡಿಮೆ ಎಂದು ತಿಳಿಸಿದರು.
ಒಂದೊಮ್ಮೆ ಮಹಾರಾಷ್ಟçದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿ ಅವಳಿ ಜಲಾಶಯಗಳು ಭರ್ತಿಯಾದರೆ ಕಾಲುವೆ ಜÁಲಗಳಿಗೆ ಲಭ್ಯತೆ ಆಧರಿಸಿ ನೀರು ಹರಿಸಬಹುದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಲಾಶಯದ ನೀರು ನಂಬಿ ಕೃಷಿ ಮಾಡದಂತೆ ರೈತರಲ್ಲಿ ಮನವಿ ಮಾಡಿದ್ದಾರೆ ಎಂದರು.
ಬೂದಿಹಾಳ ಪೀರಾಪುತ ಏತ ನೀರಾವರಿ ಯೋಜನೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಜಮೀನುಗಳಲ್ಲಿ ಕಾಲುವೆ ನಿರ್ಮಾಣ ಕೆಲಸ ಶೀಘ್ರ ಆರಂಭಿಸಲಾಗುವುದು. ಜಲಾಶಯದ ಮುಂಭಾಗದಲ್ಲಿ ಆಲಮಟ್ಟಿ ಮಾದರಿ ಉದ್ಯಾನವನ ನಿರ್ಮಾಣಕ್ಕೂ ರಾಜ್ಯ ಸರ್ಕಾರ ಆಸಕ್ತಿ ವಹಿಸಿದ್ದು, ಕೇಂದ್ರದ ಅನುದಾನದಲ್ಲಿ ಜಲಾಶಯದ ಅಂದ ಹೆಚ್ಚಿಸಲು ಗಾರ್ಡನ್ ನಿರ್ಮಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ಜಲಾಶಯಕ್ಕೆ ಆಗಮಿಸಿದ ಸಚಿವರನ್ನು ಶಾಸಕರು ಮತ್ತು ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕರು ಸ್ವಾಗತಿಸಿದರು. ಭೇಟಿ ನೆನಪಿಗಾಗಿ ಜಲಾಶಯ ಆವರಣದಲ್ಲಿ ಸಸಿ ನೆಡಲಾಯಿತು. ನಂತರ ನೀರು ಸಂಗ್ರಹ ಮಟ್ಟ, ಒಳಹರಿವು ಮತ್ತು ಹೊರಹರಿವು ಕುರಿತು ರಾಮಲಿಂಗಾರೆಡ್ಡಿ ಅವರು ಅಽಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮುದ್ದೆಬಿಹಾಳ ಶಾಸಕ ಸಿ.ಎಸ್. ನಾಡಗೌಡ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಕೆಬಿಜೆಎನ್‌ಎಲ್ ಎಂಡಿ ಕೃಷ್ಣಮೂರ್ತಿ ಬಿ.ಕುಲಕರ್ಣಿ, ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್, ಪ್ರಮುಖರಾದ ರಾಜÁ ಕುಮಾರ ನಾಯಕ, ರಾಜÁ ಸುಶಾಂತ ನಾಯಕ, ವೆಂಕೋಬ ಯಾದವ್, ರಾಜಶೇಖರಗೌಡ ಪಾಟೀಲ್ ವಜ್ಜಲ್, ಮಲ್ಲಣ್ಣ ಸಾಹುಕಾರ ಮುಧೋಳ, ನಿಂಗರಾಜ ಬಾಚಿಮಟ್ಟಿ, ಗುಂಡಪ್ಪ ಸೊಲ್ಲಾಪುರ, ರವಿಚಂದ್ರ ಸಾಹುಕಾರ ಆಲ್ದಾಳ, ದೊಡ್ಡ ದೇಸಾಯಿ, ಎ.ಜಿ. ಕುಂಬಾರ, ಬೀರಲಿಂಗ ಬಾದ್ಯಾಪುರ, ತಿಮ್ಮಣ್ಣ ಮಿಂಚೇರಿ, ಶಾಂತಪ್ಪ ಮೇಸ್ತಕ, ಅಮರೇಶ ಕೋಳೂರ, ಸಂತೋಷ ಪವಾರ್, ಗಣಪತಿ ನಾಯಕ ಇತರರಿದ್ದರು.

ಉದ್ಯಾನವನ ನಿರ್ಮಾಣಕ್ಕೆ ರು.೫೦೦ ಕೋಟಿ ಕೊಡಿ

ಡ್ರೀಪ್ ಯೋಜನೆ-೨ರಲ್ಲಿ ಜಲಾಶಯ ಎದುರು ಉದ್ಯಾನವನ, ನಾರಾಯಣಪುರ ಗ್ರಾಮದಲ್ಲಿ ನೂತನ ಪರಿವೀಕ್ಷಣಾ ಮಂದಿರ(ಐಬಿ) ನಿರ್ಮಾಣ ಮತ್ತು ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯ ಉಪ ಮತ್ತು ಶಾಖಾ ಕಾಲುವೆಗಳ ನವೀಕರಣ ಕಾಮಗಾರಿಗಳಿಗಾಗಿ ಅಂದಾಜು ೫೦೦ ಕೋಟಿ ರೂ. ಅನುದಾನ ನೀಡುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.